ಎಂ.ಶ್ರೀಕಾಂತ್ರವರ ಸಮಾಜಮುಖಿ ಸೇವೆಯ ಸ್ಮರಣಾರ್ಥ ಗಾರಾ.ಫೌಂಡೇಶನ್ ವತಿಯಿಂದ ಹರಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ
ಎಂ.ಶ್ರೀಕಾಂತ್ರವರ ಸಮಾಜಮುಖಿ ಸೇವೆಯ ಸ್ಮರಣಾರ್ಥ
ಗಾರಾ.ಫೌಂಡೇಶನ್ ವತಿಯಿಂದ ಹರಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ
ಶಿವಮೊಗ್ಗ : ನಗರದ ಹರಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಎಂ.ಶ್ರೀಕಾಂತ್ರವರ ಸಮಾಜಮುಖಿ ಸೇವೆಯ ಸ್ಮರಣಾರ್ಥ ಉಚಿತವಾಗಿ ನೋಟ್ ಬುಕ್ಗಳನ್ನು ವಿತರಿಸಲಾಯಿತು,
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಶಿಕ್ಷಕರಾದ ಪ್ರಕಾಶ್ ಅವರು ಸೇವಾ ಮನಸುಗಳು ಮುಂದಾದರೆ ಶಿಕ್ಷಣರಂಗವನ್ನು ಕಟಿಬದ್ದವಾಗಿ ಕಟ್ಟಬಹುದು, ಈ ನಿಟ್ಟಿನಲ್ಲಿ ಗಾರಾ.ಫೌಂಡೇಶನ್ನ ತಂಡದಿಂದ ನೋಟ್ಬುಕ್ ವಿತರಣೆಗೆ ಮುಂದಾಗಿರುವುದು ಒಂದು ವಿಶೇಷವಾಗಿದೆ ಏಕೆಂದರೆ ಎಂ.ಶ್ರೀಕಾಂತ್ರವರು ತಮ್ಮ ಬಾಲ್ಯ ಜೀವನದಲ್ಲಿ ಈ ಶಾಲೆಯ ಹಳೆಯ ವಿದ್ಯಾರ್ಥಿ ಆಗಿದ್ದರು ಎಂದು ತಿಳಿದು ಸಂತೋಷವಾಯಿತು, ಅವರ ಪಕ್ಷಾತೀತವಾದ ೨೫ ವರುಷದ ನಿರಂತರ ಸಮಾಜಸೇವೆಯನ್ನು ಸ್ಮರಿಸಿ ಈ ನೋಟ್ ಬುಕ್ ವಿತರಣೆಯನ್ನು ಮಾಡುತ್ತಿರುವುದು ಸೇವಾ ಸೇತುವೆ ನಿರ್ಮಿತವಾದಂತಿದೆ ಎಂದು ಅವರು ತಿಳಿಸಿದರು.
ಇನ್ನೂ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಗಾರಾ.ಶ್ರೀನಿವಾಸ್ ಮಾತಾನಾಡಿ ಈ ಶಾಲೆಯಲ್ಲಿ ಎಂ.ಶ್ರೀಕಾಂತ್ ಅವರು ಹಳೆಯ ವಿದ್ಯಾರ್ಥಿ ಎನ್ನುವುದು ಸಂತೋಷದಾಯಕ ಸಂಗತಿಯಾಗಿದ್ದು ಈ ಶಾಲೆಯಿಂದಲೇ ಶುರುವಾಗಿರುವ ನೋಟ್ಬುಕ್ ವಿತರಣೆಯನ್ನು ಕನಿಷ್ಠ ಒಂದು ಸಾವಿರ
ವಿದ್ಯಾರ್ಥಿಗಳಿಗೆ ತಲುಪಿಸುವ ಅಕ್ಷರದ ಯಾತ್ರೆಗೆ ಮೊದಲ ಮುನ್ನುಡಿಯಾದಂತಿದೆ ಎಂದು ಅವರು ತಿಳಿಸಿದರು,
ಎಂ.ಶ್ರೀಕಾಂತ್ ಅವರು ತಮ್ಮ ಬದುಕಿನ ಸೋಲಿನಲ್ಲೂ ಜನಪರ ನ್ಯಾಯವನ್ನು ಕಟ್ಟಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ, ಇಂತಹದೊಂದು ಸೇವಾ ಮನಸ್ಥಿತಿಯು ಈ ಹೊತ್ತಿನ ಒಟ್ಟು ಸಮಾಜಕ್ಕೆ ಮಾದರಿಯಾಗಿದೆ, ಎಂ.ಶ್ರೀಕಾಂತ್ ಅವರ ಅವಿರತ ಈ ಶ್ರಮವೂ ಎಂದಿಗೂ ವ್ಯರ್ಥಗೊಳ್ಳದು, ಜನಮಾನಸದ ಸ್ಮರಣಿಕೆ ಇದ್ದೆ ಇರುತ್ತದೆ, ೨೦೦೨ರ ಸುಮಾರಿಗೆ ಶಿವಮೊಗ್ಗದಲ್ಲಿ ರಾಜಕೀಯ ರಂಗದ ಮುಖೇನ ಜೀವಪರ ನಿಲುವು ತಳೆದ ನಾಯಕತ್ವಕ್ಕೆ ಮುಂದಿನ ೨೦೨೭ಕ್ಕೆ ೨೫ ವರುಷ ಪೂರ್ಣಗೊಳ್ಳುತ್ತದೆ, ಈ ನೆನೆವಿಗಾಗಿ ಗಾರಾ ಫೌಂಡೇಶನ್ ಈ ಕಾರ್ಯಕ್ರಮಕ್ಕೆ ಮುಂದಾಗಿದೆ ಎಂದು ವಿವರಿಸಿದರು, ಹಾಗೂ ಈ ಶಾಲೆಯ ಗೋಡೆ ಬರಹದಲ್ಲಿ ಪ್ರಕಾಶ ಇದ್ದರೆ ಬದಲಾವಣೆ ಸಾಧ್ಯ ಎನ್ನುವ ಸಾಲು ಬರೆಯಲಾಗಿದೆ, ನಿಜಕ್ಕೂ ಶಾಲೆಯ ಅಭಿವೃದ್ದಿಗಾಗಿ ಹಾಗೂ ಮಕ್ಕಳ ಉತ್ತಮ ವ್ಯಾಸಾಂಗಕ್ಕಾಗಿ ಶಿಕ್ಷಕ ಪ್ರಕಾಶ್ ರವರ ಶ್ರಮದ ಹೆಸರು ಈ ಸಾಲಿಗೆ ಸರಿಹೊಂದುತ್ತದೆ ಎಂದು ತಿಳಿಸಿ ಶಾಲೆಯ ಶಿಕ್ಷಕ ವೃಂದದವರಿಗೆ ಕೃತಜ್ಞತೆ ಸಲ್ಲಿಸಿದರು, ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಹೇಳಿ ಹಾರೈಸಿದರು,
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಅನಿತಾ, ದೀಪಾ ಅವರು ಸೇರಿದಂತೆ ಸಮಾಜಸೇವಕರಾದ ಎನ್.ಎಂ ಸಿಬ್ಗತ್ಉಲ್ಲಾ, ರಂಗಕರ್ಮಿಗಳಾದ ಶಿವಕುಮಾರಯ್ಯ ಮಾರವಳ್ಳಿ, ಗೋಲ್ಡ್ ಸ್ಮಿತ್ ಅನಿಲ್ಕುಮಾರ್ ಹೆಚ್.ಎಲ್ ರವರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


