*ಶಿವಮೊಗ್ಗ ಮಹಾ ನಗರಪಾಲಿಕೆ ಆಯುಕ್ತರಿಂದ ತುರ್ತು ಸಭೆ;* *ಸರ್ಕಾರದ ಸುತ್ತೊಲೆ, ನಿರ್ದೇಶನ ಪಾಲಿಸಲು ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ*

*ಶಿವಮೊಗ್ಗ ಮಹಾ ನಗರಪಾಲಿಕೆ ಆಯುಕ್ತರಿಂದ ತುರ್ತು ಸಭೆ;*

*ಸರ್ಕಾರದ ಸುತ್ತೊಲೆ, ನಿರ್ದೇಶನ ಪಾಲಿಸಲು ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ*

ನಾಡಹಬ್ಬದ ದಸರಾ ಉದ್ಘಾಟನಾ ವೇದಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವಂದೇ ಮಾತರಂ ಗೀತೆ ಗಾಯನದ ವಿವಾದದ ಬೆನ್ನಲ್ಲೇ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ದಸರಾ ಆಚರಣೆ ಸಮಿತಿಗಳ ಪ್ರಮುಖರ ತುರ್ತು ಸಭೆಯನ್ನು ಪಾಲಿಕೆ ಕಚೇರಿ ಸಭಾಂಗಣದಲ್ಲಿ ಅಕ್ಟೋಬರ್ 11 ರ ಮಧ್ಯಾಹ್ನ ನಡೆಸಿದ್ದಾರೆ.

ಕಾರ್ಯಕ್ರಮಗಳ ಆಯೋಜನೆ ವೇಳೆ ರಾಜ್ಯ ಸರ್ಕಾರದ ಸುತ್ತೋಲೆ, ನಿರ್ದೇಶನ, ಆದೇಶಗಳನ್ನು ಕಟ್ಟುನಿಟ್ಟಾಗಿ ಪ್ರತಿಯೋರ್ವರು ಪಾಲನೆ ಮಾಡಬೇಕು ಎಂದು ಆಯುಕ್ತರು ತಮ್ಮ ಕೆಳಹಂತದ ಅಧಿಕಾರಿ – ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ಸಂಗ್ರಹ : ವಂದೇ ಮಾತರಂ ಗೀತೆಯ ಎರಡು ಚರಣ ಹಾಡಲು ಮಾತ್ರ ಮ್ಯೂಸಿಕ್ ಸಿದ್ದಪಡಿಸಲಾಗಿತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ದಿಡೀರ್ ಆಗಿ ಗಾಯಕರು ಗೀತೆ ಹಾಡಿದ್ದು ಹೇಗೆ? ಇವರಿಗೆ ನಿರ್ದೇಶನ ನೀಡಿದ್ದು ಯಾರು? ಎಂಬುವುದರ ಕುರಿತಂತೆಯೂ ಸಭೆಯಲ್ಲಿ ಆಯುಕ್ತರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಮುಂದಿನ ಕಾರ್ಯಕ್ರಮಗಳ ವೇಳೆ ರಾಜ್ಯ ಸರ್ಕಾರದ ಸುತ್ತೋಲೆ, ನಿರ್ದೇಶನ, ಆದೇಶಗಳಂತೆ ಕ್ರಮಕೈಗೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಎಚ್ಚರವಹಿಸುವಂತೆ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

(ರೇಣುಕೇಶ್ ಕೃಪೆ)