*ಶಿವಮೊಗ್ಗದಲ್ಲೇ ಅಕ್ರಮ ಮಣ್ಣು- ಗ್ರಾವೆಲ್ ಸಾಗಿಸುವ 200 ಲಾರಿಗಳು!* *ಕೊಮ್ಮನಾಳಿನ ದಾರಿ ಮುಚ್ಚಿದರಷ್ಟೇ ಸಾಕೇ?* *ಮೈಮೇಲಿನ ಮಣ್ಣು ಕೊಡವಿ ಏಳುವರಾ ಅಧಿಕಾರಿಗಳು?!*
*ಶಿವಮೊಗ್ಗದಲ್ಲೇ ಅಕ್ರಮ ಮಣ್ಣು- ಗ್ರಾವೆಲ್ ಸಾಗಿಸುವ 200 ಲಾರಿಗಳು!*
*ಕೊಮ್ಮನಾಳಿನ ದಾರಿ ಮುಚ್ಚಿದರಷ್ಟೇ ಸಾಕೇ?*
*ಮೈಮೇಲಿನ ಮಣ್ಣು ಕೊಡವಿ ಏಳುವರಾ ಅಧಿಕಾರಿಗಳು?!*
ಶಿವಮೊಗ್ಗ ನಗರ ಒಂದರಲ್ಲೇ ಕನಿಷ್ಠ 200 ಲಾರಿಗಳು ಅಕ್ರಮವಾಗಿ ಗ್ರಾವೆಲ್ ಮತ್ತು ಮಣ್ಣನ್ನು ಸಾಗಿಸುತ್ತಿವೆ.
ಅಂದರೆ, ಶಿವಮೊಗ್ಗದ ಮಣ್ಣು ಮತ್ತು ಗ್ರಾವೆಲ್ ನ ಮಾಫಿಯಾ ಯಾವ ಮಟ್ಟದಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ಕೇವಲ ಒಂದೆರಡು ಅಕ್ರಮ ಮಣ್ಣು ಸಾಗಿಸುವ ಲಾರಿಗಳನ್ನಷ್ಟೇ ಹಿಡಿದು ತಹಶೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಪೊಲೀಸರು ಪ್ರಕರಣ ದಾಖಲಿಸಿ ಸುಮ್ಮನಾಗುತ್ತಿದ್ದಾರೆ.
ಶನಿವಾರ ಒಂದೆರಡು ಲಾರಿಗಳ ಬೇಟೆಯಾಡಿರುವ ಸರ್ಕಾರಿ ಅಧಿಕಾರಿಗಳು ಕೊಮ್ಮನಾಳಿನ ದಾರಿಯಲ್ಲಿ ಸಾಗುವ ಅಕ್ರಮ ಮಣ್ಣಿನ ಮೇಲಷ್ಟೇ ಕ್ರಮಕೈಗೊಂಡು ದಾರಿ ಮುಚ್ಚಿಸಿದ್ದಾರೆ.
ಆದರೆ, ಶಿವಮೊಗ್ಗದೊಳಗಿನ ವಿನೋಬನಗರ, ಗೋಪಾಳ, ಆಲ್ಕೊಳದ ಹಾದಿಗಳಲ್ಲಿ ಹಾಗೆಯೇ ಸುಲಭವಾಗಿ ಮಣ್ಣು ಸಾಗುತ್ತಿದೆ. ಜೊತೆಗೆ, ಶಿವಮೊಗ್ಗದ ಸುತ್ತಲಂತೂ ಅವೇ 200 ಲಾರಿಗಳ ಓಡಾಟದ ಸದ್ದು ಕೇಳಿಸುತ್ತಿದೆ.
ಈಗಲಾದರೂ ಅಧಿಕಾರಿಗಳು ಮೈಮೇಲೆ ಬಿದ್ದಿರೋ ಮಣ್ಣನ್ನು ಕೊಡವಿ ಏಳುತ್ತಾರಾ?


