*ಶಿವಮೊಗ್ಗ ಸುತ್ತಮುತ್ತ ಪಳನಿ ಸೇರಿ ಮಣ್ಣು ಕಳ್ಳರ ಹಾವಳಿ…* *ದಂಡ ಕಟ್ಟಿಸುವ ನಾಟಕ ಮತ್ತು ಇತ್ಯಾದಿ ಕಥೆಗಳು…* *ಎ.ಸಿ.ಡಾ.ಮೈತ್ರಿಯವರೇಕೆ ಇವರ ವಿರುದ್ಧ ಮೌನ? ಈಗಲಾದರೂ ದಾಳಿ ಮಾಡುವರೇ ಇಲ್ಲೆಲ್ಲ?!*
*ಶಿವಮೊಗ್ಗ ಸುತ್ತಮುತ್ತ ಪಳನಿ ಸೇರಿ ಮಣ್ಣು ಕಳ್ಳರ ಹಾವಳಿ…*
*ದಂಡ ಕಟ್ಟಿಸುವ ನಾಟಕ ಮತ್ತು ಇತ್ಯಾದಿ ಕಥೆಗಳು…*
*ಎ.ಸಿ.ಡಾ.ಮೈತ್ರಿಯವರೇಕೆ ಇವರ ವಿರುದ್ಧ ಮೌನ? ಈಗಲಾದರೂ ದಾಳಿ ಮಾಡುವರೇ ಇಲ್ಲೆಲ್ಲ?!*

ಹಗಲು ರಾತ್ರಿ ಶಿವಮೊಗ್ಗದ ಸುತ್ತಮುತ್ತ ಅಕ್ರಮ ಮಣ್ಣು ಕಳ್ಳರ ಹಾವಳಿ ವಿಪರೀತವಾಗಿದ್ದು, ಪ್ರತಿನಿತ್ಯವೂ ಸಾವಿರಾರು ಲೋಡು ಮಣ್ಣನ್ನು ಭೂಗರ್ಭದಿಂದ ಅಕ್ರಮವಾಗಿ ಅಗೆದು ಸಾಗಿಸಲಾಗುತ್ತಿದೆ.
ಶಿವಮೊಗ್ಗದ ಜನರಹಿತ ಪ್ರದೇಶಗಳಲ್ಲಿ, ತುಂಗಾ ಮೇಲ್ದಂಡೆ ಸೇರಿದಂತೆ ಸರ್ಕಾರದ ಜಾಗಗಳನ್ನೂ ಬಿಡದೇ ಕಲ್ಲು, ಮಣ್ಣನ್ನು ಅಕ್ರಮವಾಗಿ ಸಾಗಿಸುವ ಮಾಫಿಯಾಕ್ಕೆ ಪಳನಿ ಸೂತ್ರಧಾರಿಯಾಗಿದ್ದು, ಶಿವಮೊಗ್ಗದ ಹಲವು ಠಾಣೆಗಳಲ್ಲಿ ಈತನ ವಾಹನಗಳನ್ನು ಹಿಡಿದು ದಂಡ ಹಾಕಿದ ಹಲವು ಪ್ರಕರಣಗಳಿವೆ.
ಕೆಲ ಭ್ರಷ್ಟ ಅಧಿಕಾರಿಗಳಿಗೆ ತಿನ್ನಿಸಬೇಕಾದ್ದನ್ನೆಲ್ಲ ತಿನ್ನಿಸಿ ಹಗಲು ರಾತ್ರಿ ಅಕ್ರಮ ಮಣ್ಣನ್ನು ಲಾರಿ, ಟ್ರಕ್ಕುಗಳಲ್ಲಿ ಸಾಗಿಸುತ್ತಲೇ ಬಂದಿರುವ ಪಳನಿಯ ಅಕ್ರಮ ಮಣ್ಣು ಸಾಗಿಸುವ ಲಾರಿಯೊಂದನ್ನು ಶನಿವಾರ ತಹಶೀಲ್ದಾರ್ ರಾಜೀವ್ ಎತ್ತಾಕಿಕೊಂಡು ಬಂದಿದ್ದಾರೆ. ದಂಡ ಹಾಕುವ ಪ್ರಕ್ರಿಯೆ ನಡೆಯುವ ಮುನ್ನವೇ ಪ್ರಭಾವಿತರಿಂದ ಫೋನ್ ಗಳು ಬರುತ್ತಿರುವ ಸಾಧ್ಯತೆಗಳಿವೆ. ಹಿಡಿದ ವಾಹನಗಳನ್ನು ದಂಡ ಹಾಕದೇ, ದಂಡದ ಜೊತೆ ಅಕ್ರಮ ಮಣ್ಣುಕೋರರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹಾಕದೇ ಕಳಿಸಿಬಿಟ್ಟರೆ ಮತ್ತದೇ ಕಥೆ ಮುಂದುವರೆಯುವುದು ಖಂಡಿತ…
ಹೋಟೆಲ್ಲು, ಅಂಗಡಿ, ಜ್ಯೂಸ್ ಸೆಂಟರ್ ಗಳ ಮೇಲೆ ದಾಳಿ ಮಾಡಿ ಪ್ರಸಿದ್ಧರಾಗುತ್ತಿರುವ ಎಸಿ ಡಾ.ಮೈತ್ರಿಯವರು ಅದೇಕೆ ಅಕ್ರಮ ಮಣ್ಣು, ಮರಳಿನ ವಿರುದ್ಧ ಟೊಂಕಕಟ್ಟಿ ನಿಲ್ಲುತ್ತಿಲ್ಲ…


