*ನವೆಂಬರ್ 4 ರಂದು ಶ್ರೀ ರಾಮಕೃಷ್ಣ ಪಿಯು ಕಾಲೇಜು ಲೋಕಾರ್ಪಣೆ* *ಹೊಸ ಶೈಲಿಯ ಕಾಲೇಜು ಕಟ್ಟಡ, ಪರಿಣಿತ ಉಪನ್ಯಾಸಕರು, ವಸತಿ ವ್ಯವಸ್ಥೆ ನೀಟ್, ಜೆಇಇ ಪರೀಕ್ಷೆಗೆ ಆದ್ಯತೆ* *ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಶೋಭ ವೆಂಕಟರಮಣ ವಿವರಣೆ*

*ನವೆಂಬರ್ 4 ರಂದು ಶ್ರೀ ರಾಮಕೃಷ್ಣ ಪಿಯು ಕಾಲೇಜು ಲೋಕಾರ್ಪಣೆ*

*ಹೊಸ ಶೈಲಿಯ ಕಾಲೇಜು ಕಟ್ಟಡ, ಪರಿಣಿತ ಉಪನ್ಯಾಸಕರು, ವಸತಿ ವ್ಯವಸ್ಥೆ ನೀಟ್, ಜೆಇಇ ಪರೀಕ್ಷೆಗೆ ಆದ್ಯತೆ*

*ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಶೋಭ ವೆಂಕಟರಮಣ ವಿವರಣೆ*

ಸಿಹಿಮೊಗ್ಗೆಯಲ್ಲಿ ಆದ್ಯಾತ್ಮದ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುವ ಆಶಯದೊಂದಿಗೆ ಶಿವಮೊಗ್ಗ ಜಿಲ್ಲೆ ಹಾಗೂ ಶೃಂಗೇರಿಯಲ್ಲಿ ಎಸ್ ಎಸ್ ಎಲ್ ಸಿ ವರೆಗೆ ಎಂಟಕ್ಕೂ ಹೆಚ್ಚು ಶಾಲೆಗಳಲ್ಲಿ ಸಾವಿರಾರು ಮಕ್ಕಳಿಗೆ ನಿರಂತರ ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಿರುವ, ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಇದರ ಸಂಸ್ಥಾಪಕರಾದ ಶ್ರೀಯುತ ಡಿ ಎಂ ವೆಂಕಟರಮಣ ಅವರ ಕನಸಿನ ಪಿಯು ವಿಭಾಗಕ್ಕೆ ಹೊಸತನದಲ್ಲಿ ಕಾಲಿಟ್ಟಿದೆ.

ಇಡೀ ರಾಜ್ಯದಲ್ಲಿ ಮಾದರಿ ಎನ್ನುವಂತಹ ಸುಸಜ್ಜಿತವಾದ ಕಾಲೇಜು ಕಟ್ಟಡ ನಿರ್ಮಾಣವಾಗಿದ್ದು, ಪಿಯುಸಿ ಕಲಿಕೆ ಜೊತೆ ಮಕ್ಕಳ ಮುಂದಿನ ಭವಿಷ್ಯ ರೂಪಿಸಿಕೊಡುವ ನಿಟ್ಟಿನಲ್ಲಿ ಆರಂಭವಾಗಿದ್ದು, ಕಾಲೇಜು ನ.4 ರ ಬುಧವಾರ ಬೆಳಗ್ಗೆ 10 ಗಂಟೆಗೆ ಅನುಪಿನಕಟ್ಟೆಯಲಿರುವ ಕಾಲೇಜು ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ.

ಈ ರಾಮಕೃಷ್ಣ ಪಿಯು ಕಾಲೇಜು, ಸಂಸ್ಥಾಪಕರಾದ ಶ್ರೀಯುತ ಡಿ ಎಂ ವೆಂಕಟರಮಣರವರ ಕನಸಿನ ಕೂಸು. ರಾಮಕೃಷ್ಣ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗಗಳು ನಡೆಯಲಿದ್ದು, ಪಿ ಸಿ ಎಂ ಸಿ ಮತ್ತು ಪಿ ಸಿ ಎಂ ಸಿ ಎಸ್ ನ ಎರಡು ವಿಭಾಗಗಳು ಆರಂಭವಾಗಲಿವೆ.

ಇಲ್ಲಿ ಮುಖ್ಯವಾಗಿ ನೀಟ್, ಜೆಇಇ, ಇಂಟಿಗ್ರೇಟೆಡ್ ತರಗತಿಗಳು ನಡೆಯಲಿದ್ದು, ಈ ಮೂಲಕ ಕಾಲೇಜಿನ ಎಲ್ಲಾ ಮಕ್ಕಳ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಡಲಾಗುತ್ತದೆ.

ಶಿವಮೊಗ್ಗ ನಗರದ ಹಾಗೂ ಸುತ್ತಮುತ್ತಲಿನ ಮಕ್ಕಳು ನೀಟ್, ಜೆಇಇ ತರಬೇತಿಗಾಗಿ ಹೊರ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ. ರಾಮಕೃಷ್ಣ ಪಿಯು ಕಾಲೇಜು ಈ ತರಬೇತಿಗಳನ್ನು ಅನುಪಿನಕಟ್ಟೆಯ ರಾಮಕೃಷ್ಣ ಪಿಯು ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ನೀಡಲು ಬಯಸುತ್ತಿದೆ. ಅದಕ್ಕೆ ತಕ್ಕಂತೆ ನೀಟ್, ಜೆಇಇ ತರಬೇತಿಯಲ್ಲಿ ಪರಿಣಿತ ಉಪನ್ಯಾಸಕ ವೃಂದವನ್ನು ನೇಮಿಸಲಾಗಿದೆ.

ಇಲ್ಲಿ ಪಿಯು ಬೋರ್ಡ್ ಪಠ್ಯ ಹಾಗೂ ನೀಟ್, ಜೆಇಇ ಸಿಲಬಸ್ ಅನ್ನು ಜೊತೆಗೆ ಕಲಿಸಲಾಗುತ್ತದೆ.

ವಿದ್ಯಾರ್ಥಿ – ವಿದಾರ್ಥಿನಿಯರಿಗೆ ಪ್ರತ್ಯೇಕ ಸುಸಜ್ಜಿತವಾದ ವಸತಿ ಸೌಲಭ್ಯವಿದ್ದು, ಸಂಜೆ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಕಲಿಕಾ ಅವಧಿಯನ್ನು ಸಹ ಕಲ್ಪಿಸಲಾಗಿದೆ. ಈ ಸ್ಪಡಿ ಅವರ್ಸ್‌ ನಲ್ಲಿ ಕಡ್ಡಾಯವಾಗಿ ಹಿರಿಯ ಮಾರ್ಗದರ್ಶಿ ಉಪನ್ಯಾಸಕರು ಇರುತ್ತಾರೆ. ಮಕ್ಕಳು ಈ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಓದಲು ಅವಕಾಶ ಮಾಡಿಕೊಲಾಗಿದೆ.

ನೂತನ ಶೈಲಿಯಲ್ಲಿ ವಿಶಾಲವಾಗಿ ನಿರ್ಮಾಣಗೊಂಡಿರುವ ಈ ಕಟ್ಟಡದಲ್ಲಿ ಸುಸಜ್ಜಿತವಾದ ಸಕಲ ವಿಜ್ಞಾನ ಸಂಶೋದನ ಪರಿಕರಗಳನ್ನೊಳಗೊಂಡ ಫಿಸಿಕ್ಸ್ ಲ್ಯಾಬ್, ಕೆಮಿಸ್ಟ್ರಿ ಲ್ಯಾಬ್, ಬಯೋ ಲ್ಯಾಬ್ ಹಾಗೂ ಕಂಪ್ಯೂಟರ್ ಲ್ಯಾಬ್‌ಗಳನ್ನು ನಿರ್ಮಿಸಲಾಗಿದೆ. ಹಾಗೂ ವಿಶಾಲವಾದ ತರಗತಿ ಕೊಠಡಿಗಳು ನೂತನ ವಿನ್ಯಾಸದಲ್ಲಿ ಸಿದ್ಧವಾಗಿವೆ.

ನವೆಂಬರ್ 4, 2026ರ ಬುಧವಾರದಂದು ಬೆಳಗ್ಗೆ 10.30ಕ್ಕೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಾಲನಂದನಾಥ ಮಹಾಸ್ವಾಮೀಜಿರವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು.

ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮಿಜಿಯವರು ಪ್ರಧಾನ ಕಾರ್ಯದರ್ಶಿಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಪೂಜ್ಯ ಶ್ರೀ ವಿನಯಾನಂದ ಸರಸ್ವತಿ ಮಹಾರಾಜ್ ಅಧ್ಯಕ್ಷರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಕಲ್ಲುಗಂಗೂರು, ಶಿವಮೊಗ್ಗ. ಪರಮಪೂಜ್ಯರ ದಿವ್ಯಸಾನಿದ್ಯದಲ್ಲಿ ಉದ್ಘಾಟನೆಗೊಂಡು ಲೋಕಾರ್ಪಣೆಯಾಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಡಾ ಡಿ ಆರ್ ನಾಗೇಶ್ ಸರ್ ರವರು ವಹಿಸಲಿದ್ದು ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀಮತಿ ಶೋಭ ವೆಂಕಟರಮಣ ಹಾಗೂ ಶ್ರೀಯುತ ಡಿ ಎಂ ದೇವರಾಜ್ ಸದಸ್ಯರು ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್, ರವರು, ಅರುಣ್ ಕೆ ಹೆಚ್. ಶರತ್ ಕೆ ಡಿ ಹಾಗೂ ರಾಮಕೃಷ್ಣ ಸಮೂಹ ಶಾಲೆಗಳ ಮುಖ್ಯೋಪದ್ಯಾಯರು, ಶಿಕ್ಷಕರು, ಮಕ್ಕಳು, ಸಿಬ್ಬಂದಿವರ್ಗದವರು. ಪೋಷಕವೃಂದದವರು ಉಪಸ್ಥಿತರಿರುತ್ತಾರೆ.

ಈ ಮೂಲಕ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀಮತಿ ಶೋಭ ವೆಂಕಟರಮಣರವರು ಎಲ್ಲಾ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಪೋಷಕರು, ಮಹಪೋಷಕರು, ಶಾಲೆಯ ಹಿತೈಷಿಗಳನ್ನು ಹಾಗೂ ಸರ್ವರನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.