ಕವಿಸಾಲು

*ಕವಿಸಾಲು*
(10/6/2026)

1.
ಕಳೆದುಕೊಳ್ಳುವುದೆಂದರೆ
ನಿನ್ನನ್ನು
ಕನಸುಗಳಲ್ಲಿ, ನೆನಪುಗಳಲ್ಲಿ
ಗಳಿಸಿಕೊಳ್ಳುವುದು!

2.
ಎಷ್ಟೊಂದು ಪ್ರಶ್ನೆಗಳ
ಮರ್ಯಾದೆ ಉಳಿಸುತ್ತಲ್ಲ
ಈ ಮೌನ…

ಸಾವಿರ ಮಾತುಗಳಿಗಿಂತ
ಒಳ್ಳೇದೇ ಕಾಣುತ್ತಲ್ಲ
ಈ ಮೌನ!

– *ಶಿ.ಜು.ಪಾಶ*
8050112067