ಶಿವಮೊಗ್ಗ ಜಿಲ್ಲೆಯ ಪ್ರಾಮಾಣಿಕ ಕಾಂಗ್ರೆಸ್ಸಿಗರ ಸಾಮೂಹಿಕ ಪತ್ರ…* *ಕೆಪಿಸಿಸಿಗೆ ನೂತನವಾಗಿ ಸಾರಥಿಯಾಗಿರುವ, ಹೋರಾಟ ಗುಣದ ವಿಶೇಷ ಸಂಘಟಕರಾದ ಶ್ರೀಯುತ ಬಿ.ಕೆ.ಹರಿಪ್ರಸಾದ್ ರವರಿಗೆ…* *(ಕಾಪಿ ಟೂ- ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ಶಿವಮೊಗ್ಗ)*
*ಶಿವಮೊಗ್ಗ ಜಿಲ್ಲೆಯ ಪ್ರಾಮಾಣಿಕ ಕಾಂಗ್ರೆಸ್ಸಿಗರ ಸಾಮೂಹಿಕ ಪತ್ರ…*
*ಕೆಪಿಸಿಸಿಗೆ ನೂತನವಾಗಿ ಸಾರಥಿಯಾಗಿರುವ, ಹೋರಾಟ ಗುಣದ ವಿಶೇಷ ಸಂಘಟಕರಾದ ಶ್ರೀಯುತ ಬಿ.ಕೆ.ಹರಿಪ್ರಸಾದ್ ರವರಿಗೆ…*
*(ಕಾಪಿ ಟೂ- ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ಶಿವಮೊಗ್ಗ)*
ಈ ಜಾಹಿರಾತನ್ನು ಇವತ್ತು ಎಲ್ಲಾ ಸ್ಥಳೀಯ ಪತ್ರಿಕೆಗಳಿಗೆ ಬಿಡುಗಡೆ ಮಾಡಲಾಗಿದೆ.
ಮೇಲಿನ ಸಾಲುಗಳಲ್ಲಿರೋ ನಾಯಕರದ್ದು ಫೋಟೋ ಹಾಕುವ ಅನಿವಾರ್ಯತೆಯಿಂದ ಹಾಕಿರಬಹುದು…
ಆದರೆ,
ಕೆಲವರಷ್ಟೇ ಜಿಲ್ಲಾ ಕಾಂಗ್ರೆಸ್ಸಿನ ಬ್ಯಾನರ್ ಬಳಸಿಕೊಂಡು ಈ ಜಾಹಿರಾತನ್ನು *ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧಿಕೃತ ಆಹ್ವಾನ* ಎಂಬಂತೆ ನೀಡಲಾಗಿದೆ.
ಈ ಬಗ್ಗೆ ವ್ಯಾಪಕ ಟೀಕೆ- ಟಿಪ್ಪಣಿ ಆರಂಭವಾಗಿದೆ. ಬರೀ ಜಿಲ್ಲಾಧ್ಯಕ್ಷರ ಫೋಟೋ ಇದ್ದಿದ್ದರೆ ಅಧಿಕೃತತೆಯ ಬಗ್ಗೆ ಇಲ್ಲಿ ಪ್ರಶ್ನೆಗಳು ಏಳುತ್ತಿರಲಿಲ್ಲ…
ಅಥವಾ ಖಾಸಗಿಯಾಗಿ ಕೆಲವರು ತಮ್ಮ ಮುಖ ಪ್ರಚಾರದ ಕಾರಣಕ್ಕೆ ಖಾಸಗಿಯಾಗಿ ಈ ಜಾಹಿರಾತು ಹಾಕಿಕೊಂಡಿದ್ದರೆ ಅಭ್ಯಂತರವಿರಲಿಲ್ಲ…
ಈ ಜಾಹಿರಾತು, ಬ್ಯಾನರ್ ಅಧಿಕೃತವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಶಿವಮೊಗ್ಗ ಎಂದು ಪ್ರಚಾರವೂ ಪ್ರಕಟವೂ ಆಗಿದೆ!
ಅಂದಹಾಗೆ, ಶಿವಮೊಗ್ಗ ಉತ್ತರ- ದಕ್ಷಿಣ ಬ್ಲಾಕ್ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಿದ್ದಾರೆ(ತಳ ಮಟ್ಟದಿಂದ ಸಂಘಟನೆ ಮಾಡುತ್ತಿರುವವರು)…ಇಲ್ಲಿ ಅವರದ್ಯಾವಾ ಫೋಟೋಗಳೂ ಇಲ್ಲ, ಅವರ ಹೆಸರಲ್ಲಿ ಆಹ್ವಾನವೂ ಇಲ್ಲ…
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ ಎಂದು ಬ್ಯಾನರ್- ಜಾಹಿರಾತಿನಲ್ಲಿದೆ. ಈ ಬ್ಯಾನರಿನಲ್ಲಿರುವ ಕೆಲವರು ತಮ್ಮ ಮನೆಯ ಒಬ್ಬೇ ಒಬ್ಬರನ್ನೂ ಈ ಕಾರ್ಯಕ್ರಮಕ್ಕೆ ಕರೆತರುವ ಶಕ್ತಿ, ಸಾಮರ್ಥ್ಯ ಹೊಂದಿದ್ದಾರೆಂದು ಅನಿಸುತ್ತಿಲ್ಲ…ಕಾರ್ಯಕರ್ತರ ಜೊತೆ ಇವರು ಯಾವ ಕಷ್ಟಸುಖಕ್ಕೆ ಸ್ಪಂದಿಸಿದ್ದಾರೆಂದು ಬರುತ್ತಾರೆ ಹೇಳಿ…(ಪ್ರೂ ಮಾಡಬಲ್ಲೆವು)…
ಈ ಥರದ ಅಪ್ರಯೋಜಕ ಕೆಲವರ ಫೋಟೋಗಳನ್ನು ಹಾಕಿಕೊಂಡು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ ಎಂದು ಕರೆದರೆ ಬರುವವರೂ ಈ ಕೆಲ ಮೂತಿಗಳನ್ನು ನೋಡಿ ಬರದೇ ಹೋಗುವ ಅಪಾಯಗಳೂ ಇವೆ…
ದೊಡ್ಡಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವಿದು . ಬೆಲೆ ಕೊಡುವುದು ಬಿಡುವುದು ಅವರವರಿಗೆ ಬಿಟ್ಟಿದ್ದು…ಪಕ್ಷದ ಆರೋಗ್ಯಕರ ಸಂಘಟನೆಯ ದೃಷ್ಟಿಯಿಂದ, ಅವರ ಪರವಾಗಿ ಇದನ್ನು ಜಾರಿ ಮಾಡಲಾಗಿದೆ…ಶುಭಾಶಯಗಳು
*ಶಿ.ಜು.ಪಾಶ*
ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ,
(27ನೇ ವಾರ್ಡ್, ಮಿಳಘಟ್ಟ,) ಶಿವಮೊಗ್ಗ
*ಮೊ- 8050112067*


