*ಅಪಘಾತಕ್ಕೆ ಮೂರು ತುಂಡಾದ ಕಾರು* *ಶಿವಮೊಗ್ಗ ಕುಂಬಾರಗುಂಡಿಯ ರಾಕೇಶ ಸಾವು*
*ಅಪಘಾತಕ್ಕೆ ಮೂರು ತುಂಡಾದ ಕಾರು*
*ಶಿವಮೊಗ್ಗ ಕುಂಬಾರಗುಂಡಿಯ ರಾಕೇಶ ಸಾವು*

ಶಿವಮೊಗ್ಗದ ಕುಂಬಾರಗುಂಡಿ( ಸೀಗೆಹಟ್ಟಿ ಸಮೀಪ) ನಿವಾಸಿ ರಾಕೇಶ್ @ ರಾಕಿ(23) ಕಾರು ಚಲಾಯಿಸುತ್ತಿದ್ದಾಗ ಬಿ.ಹೆಚ್.ರಸ್ತೆ ಹರಿಗೆ ಬಳಿಯ ಸಕ್ಕರೆ ಕಾರ್ಖಾನೆ ಹತ್ತಿರ ಮರಕ್ಕೆ ಡಿಕ್ಕಿ ಹೊಡೆದು ಸಾವು ಕಂಡ ಘಟನೆ ಬೆಳಗಿನ ಜಾವ ನಡೆದಿದೆ.
ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಭೀಕರತೆಗೆ ಕಾರು ಮೂರು ತುಂಡಾಗಿದೆ.


