ಕವಿಸಾಲು
01
ಕವಿಸಾಲು
Gm ಶುಭೋದಯ💐💐
*ಕವಿಸಾಲು*
1.
ಹಣತೆ ಹಚ್ಚುವ ಕೈಗಳಿಗೆ
ಹಣತೆಯದೇ ಬೆಂಕಿ ತಾಗುವುದಲ್ಲ ಹೃದಯವೇ…
2.
ಫುಟ್ ಬಾಲಿನಂತೆ ಬದುಕು
ಒದ್ದರಷ್ಟೇ
ಗುರಿ ತಲುಪುವುದು!
3.
ಹೃದಯದ ಲೋಕದಲ್ಲಿ ಇದೇನಿದು ಸಂತೆ ಸದ್ದು…
ಹುಡುಕಿದರೆ
ಒಬ್ಬರೂ ನನ್ನವರಿಲ್ಲ ಇಲ್ಲಿ!
4.
ನೀನು ಸಿಹಿಯಲ್ಲ ಎಂಬುದೇ ಸಂತೋಷ ಸಮುದ್ರವೇ…
ಇದ್ದಿದ್ದರೇ,
ಬಾಟಲಿಗಳಲ್ಲಿ ಬಂಧಿಸಿ ಮಾರಿ ಬಿಡುತ್ತಿದ್ದರು ನಿನ್ನ…



