*ಕವಿಸಾಲು*
(20/06/2026)
1.
ದ್ವೇಷ
ಸಾಧಿಸಿಯೇನು ಮಾಡುವೆ?
ತಾಳ್ಮೆ ತಗೋ
ದಯೆ ತೋರು
ಕ್ಷಮೆ ಕೊಡು
ಮರೆತು ಬಿಡು…
2.
ಹಸ್ತರೇಖೆಗಳು
ಎಷ್ಟೊಂದು ವಿಚಿತ್ರ…
ಮುಷ್ಠಿಯಲ್ಲಿವೆಯಾದರೂ
ಹಿಡಿತದಲ್ಲಿಲ್ಲ!!
3.
ಸತ್ತಾಗ ಸಿಕ್ಕ
ನಾಲ್ಕು ಹೆಗಲುಗಳ ಕಂಡು
ಮಮ್ಮಲ ಮರುಗಿತು ಹೆಣವು…
ಜೀವವಿದ್ದಾಗ ಸಿಕ್ಕಿದ್ದರೆ ಸಾಕಿತ್ತಲ್ಲ
ಒಂದೇ ಒಂದು ಹೆಗಲು!
– *ಶಿ.ಜು.ಪಾಶ*
8050112067