ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಹೂವು ಬೇಕೋ ಹೊಲಸು ಬೇಕೋ
ಆಯ್ಕೆ ನಿಮ್ಮದು…

ಜೇನ್ನೊಣವಾಗುವಿರೋ ನೊಣ ವಾಗಿರುವಿರೋ
ಆಯ್ಕೆ ನಿಮ್ಮದು…

2.
ಹೇಳುತ್ತಾರಲ್ಲ…

ದೀಪಾವಳಿಗೆ ಸಂತಸಗಳು ಮರಳಿ ಬರುತ್ತವೆಂದು!

ನೀ ಬರುತ್ತಿದ್ದೀಯೋ?

3.
ಎಷ್ಟು ದೂರದಿಂದ
ನೋಡುತ್ತೀಯೋ

ಜಗತ್ತು
ಅಷ್ಟು ಸುಂದರ ಕಾಣುವುದು!

– *ಶಿ.ಜು.ಪಾಶ*
8050112067
(4/11/2026)