*ಶಿವಮೊಗ್ಗದ ಟಿಪ್ಪುನಗರದಲ್ಲಿ ಸಹೋದರರ ಮೇಲೆ ಚಾಕುವಿನಿಂದ ಗುಂಪು ಹಲ್ಲೆ* *ಡಾಲರ್ ಬ್ರದರ್ಸ್ ಮೇಲೆ ಹಲ್ಲೆ*

*ಶಿವಮೊಗ್ಗದ ಟಿಪ್ಪುನಗರದಲ್ಲಿ ಸಹೋದರರ ಮೇಲೆ ಚಾಕುವಿನಿಂದ ಗುಂಪು ಹಲ್ಲೆ*

*ಡಾಲರ್ ಬ್ರದರ್ಸ್ ಮೇಲೆ ಹಲ್ಲೆ*

ಮೂರು ದ್ವಿಚಕ್ರವಾಹನಗಳಲ್ಲಿ ಬಂದ ಹುಡುಗರ ಗುಂಪೊಂದು ರಹಮತ್ ಉಲ್ಲಾ(ಡಾಲರ್) ಮತ್ತು ನ್ಯಾಮತ್ ಉಲ್ಲಾ ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಘಟನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಹಲ್ಲೆಗೊಳಗಾದ ಇಬ್ಬರಿಗೂ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಪ್ಪುನಗರದ ಗೌಸಿಯಾ ಸರ್ಕಲ್ ಬಳಿ ಘಟನೆ ನಡೆದಿದೆ. ಮಿಳಘಟ್ಟದ ಆಸಿಫ್ ಮತ್ತು ಕೆಲ ಹುಡುಗರು ಹಲ್ಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.