ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ರಿಯಾಜ್ ಅಹಮದ್‌ಗೆ ಜಿಲ್ಲಾಡಳಿತದಿಂದ ಪ್ರಶಂಸನಾ ಪತ್ರ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ರಿಯಾಜ್ ಅಹಮದ್‌ಗೆ ಜಿಲ್ಲಾಡಳಿತದಿಂದ ಪ್ರಶಂಸನಾ ಪತ್ರ

ಶಿವಮೊಗ್ಗ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR–2026) ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಜಿಲ್ಲಾಧಿಕಾರಿಗಳ ಕಚೇರಿಯ ಟೆಕ್ನಿಕಲ್ ಪ್ರೋಗ್ರಾಮರ್ ರಿಯಾಜ್ ಅಹಮದ್ ಅವರಿಗೆ ಜಿಲ್ಲಾಡಳಿತದ ವತಿಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ನಿಗದಿತ ಸಮಯದಲ್ಲಿ ಮತದಾರರ ಪಟ್ಟಿಯ ನಿಖರತೆ, ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಪಾಡುವ ಮಹತ್ವದ ಕಾರ್ಯದಲ್ಲಿ ರಿಯಾಜ್ ಅಹಮದ್ ಅವರು ಸಲ್ಲಿಸಿದ ಅಮೂಲ್ಯ ಸೇವೆ ಮತ್ತು ಕಾರ್ಯತತ್ಪರತೆಯನ್ನು ಜಿಲ್ಲಾಡಳಿತ ಶ್ಲಾಘಿಸಿದೆ.

ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ರಹಮತ್ತುಲ್ಲಾ ಅಸಾದಿ ಮೇಗರವಳ್ಳಿ ಮಸೀದಿಯ ಅಧ್ಯಕ್ಷರಾದ ಅಪ್ಸರ್. ರಿಯಾಜ್. ಮುಜೀಬ್ ಶಫಿ ಸಾಹೇಬ್ ಇತರರು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ರಿಯಾಜ್ ಅಹ್ಮದವರಿಗೆ ಶುಭಾಶಯ ಕೋರಿ ಅಭಿನಂದರಿಸಲಾಯಿತು