ಮಾ.20ರಿಂದ ಕಾಂಗ್ರೆಸ್ ಅಭ್ಯರ್ಥಿಯಿಂದ ಪ್ರಚಾರ ಆರಂಭ ಶ್ರೀಮತಿ ಗೀತಾಶಿವರಾಜ್‌ಕುಮಾರ್ ಗೆಲುವು ನಿಶ್ಚಿತ : ಮಧುಬಂಗಾರಪ್ಪ

ಮಾ.20ರಿಂದ ಕಾಂಗ್ರೆಸ್ ಅಭ್ಯರ್ಥಿಯಿಂದ ಪ್ರಚಾರ ಆರಂಭ
ಶ್ರೀಮತಿ ಗೀತಾಶಿವರಾಜ್‌ಕುಮಾರ್ ಗೆಲುವು ನಿಶ್ಚಿತ : ಮಧುಬಂಗಾರಪ್ಪ

ಶಿವಮೊಗ್ಗ :

ಮಾ.20ರಿಂದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪ್ರಚಾರ ಕಾರ್ಯಕ್ರಮ ಅಧಿಕೃತ ಚಾಲನೆ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ತಿಳಿಸಿದರು.
ಅವರು ಕಾಂಗ್ರೆಸ್ ಕಛೇರಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜಿಲ್ಲೆಯ ಎಲ್ಲಾ ಮುಖಂಡರೊಂದಿಗೆ ಚರ್ಚೆಸಲಾಗಿದೆ. ಪ್ರತಿಯೊಬ್ಬರ ಕಾಂಗ್ರೆಸ್ ಕಾರ್ಯಕರ್ತರ ಬೂತ ಮಟ್ಟದ ಪ್ರಚಾರ ಕಾರ್ಯ ಕೈಗೊಳ್ಳುವರ ಅವರ ಜೊತೆ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಭಾಗವಹಿಸುವವರು ಎಂದು ತಿಳಿಸಿದರು.
ಅಭ್ಯರ್ಥಿ ಜೊತೆ ಶಿವರಾಜ್‌ಕುಮಾರ್ ಸಾಥ್ ನೀಡಲಿದ್ದಾರೆ, ಹಾಗೂ ಮುಖ್ಯಮಂತ್ರಿ ಸಿದ್ದರಾಯಮ್ಮ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಕೂಡ ತಾಲ್ಲೂಕು ಕೇಂದ್ರ ಸಮಾವೇಶಕ್ಕೆ ಭೇಟಿ ಕೋಡಿಲಿದ್ದಾರೆ. ಹಾಗೂ ಹಲವಾರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಪ್ರಚಾರಕ್ಕೆ ಆಗಮಿಸುವ ನಿರೀಕ್ಷೆಯಿಂದೆ.
ಕಾಂಗ್ರೆಸ್ ಅಭ್ಯರ್ಥಿ ಪ್ರತಿಯೊಂದು ಗ್ರಾಮಪಂಚಾಯಿತಿಗೆ ಭೇಟಿ ಕೊಟ್ಟು ಪ್ರಚಾರ ಮಾಡಲಿದ್ದಾರೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದಾರೆಂದರು.
ಮಾ.೧೮ಕ್ಕೆ ಮೋದಿ ಬಂದು ಶಿವಮೊಗ್ಗದಲ್ಲಿ ಸುಳ್ಳುಗಳ ಭರವಸೆ ಕೊಟ್ಟು ಹೋಗುವ ನಿರೀಕ್ಷೆ ಅದರಿಂದ ಯಾವುದೇ ಪ್ರಯೋಜನ ಜನರಿಗೆ ಆಗುವುದಿಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳನ್ನು ನಮ್ಮ ಕೈ ಬಿಡುವುದಿಲ್ಲ. ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ, ಸಂಸದರಾದ ಮೇಲೆ ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದಾರೆಂದ ಭರವಸೆ ನೀಡಿದರು.

 

ಹತ್ತು ಗ್ಯಾರಂಟಿಗಳ ಮೂಲಕ ಗ್ಯಾರಂಟಿ ಗೆಲುವು

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಗೆಲುವಿಗೆ ಎಲ್ಲಾ ಕಾಂಗ್ರೆಸ್ ಮುಖಂಡರು ಕಾರ್ಯಪ್ರವೃತ್ತಾಗುವಂತೆ ಇಂದಿನ ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಯಿತು ಎಂದರು.
ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ, ಕೆಲವು ಬಿಜೆಪಿ ಮುಖಂಡರು ನಮ್ಮ ಪಕ್ಷದ ವಿರುದ್ದ ಅನವಶ್ಯಕವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಇದ್ದರಿಂದ ಪ್ರಯೋಜನವಿಲ್ಲಿ. ಈಗಾಗಲೇ ಬಿಜೆಪಿ ಗೊಂದಲ ಗೂಡಾಗಿದೆ. ಹಲವಾರು ಹಿರಿಯ ಮುಖಂಡರೇ ಬಂಡಾಯ ಎದ್ದು ಮನೆಯೊಂದು ೧೦ ಬಾಗಿಲು ಆಗಿದೆ ಎಂದರು.
ನಮ್ಮ ಕಾಂಗ್ರೆಸ್ ಚುನಾವಣೆ ಪೂರ್ವ ನೀಡಿದ ಐದು ಭರವಸೆಗಳನ್ನು ಈಡೇರಿಸಿದೆ. ಈ ಗ್ಯಾರಂಟಿಗಳೇ ನಮ್ಮ ಅಭ್ಯರ್ಥಿಗೆ ಶ್ರೀರಕ್ಷೆಯಾಗಲಿದೆ. ನಮ್ಮ ಯಾವುದೇ ಜಾತಿ-ಮತಗಳಿಗೆ ಸೀಮಿತವಾದ ಸರ್ಕಾರವಲ್ಲ, ಪ್ರತಿಯೊಬ್ಬರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿದ್ದೇವೆ ಎಂದರು.
ನಮ್ಮ ಜಿಲ್ಲಾ ಲೋಕಸಭಾ ಸದಸ್ಯರು ಯಾವುದೇ ಜನರಿಗೆ ಪ್ರಯೋಜನ ಅಗುವ ಯೋಜನೆಗಳನ್ನು ರೂಪಿಸಿಲ್ಲ, ಕೇವಲ ಕೆಲವು ಫ್ಲೆಓವರ್‌ಗಳನ್ನು ನಿರ್ಮಿಸಿ ಟೇಪ್ ಕಟ್ಟಮಾಡಿದ ಅದೇ ನನ್ನ ದೊಡ್ಡ ಸಾಧನೆಯಂತೆ ಬಿಂಬಿಸುತ್ತಿದ್ದಾರೆ ಇದ್ದರಿಂದ ಯಾವುದೇ ಪ್ರಯೋಜನ ಜನರಿಗಿಲ್ಲ ಎಂದರು.
ಸ್ಮಾರ್ಟ್‌ಸಿಟಿ ಕೋಟ್ಯಾಂತರ ರೂಪಾಯಿ ಹಗರಣ ನಡೆದರು ಒಂದು ದಿವಸವಾದರು ಸಂಸದರು ತುಟಿಪಿಟಿಕ್ ಎನ್ನಿಲಿಲ್ಲ. ಇಂತಹ ಜನಪ್ರತಿನಿಧಿಯಿಂದ ಜನರು ಏನು ನೀರಿಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಹಲವಾರು ಯೋಜನೆ ಘೋಷಣೆ ಮಾಡಿದೆ. ಎಲ್ಲಾ ಯೋಜನೆ ಬಡ ಜನರ ಉಪಯೋಗ ಆಗುವಂತೆ ಕಾರ್ಯಕ್ರಮಗಳು, ಸರ್ಕಾರದ ಬಂದ ತಕ್ಷಣ ಈ ಎಲ್ಲಾ ಯೋಜನೆಗಳನ್ನು ಈಡೇರಿಸಲಾಗುವುದು ಎಂದು ರಾಹುಲು ಗಾಂಧಿ ಹೇಳಿದ್ದಾರೆಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾಶಿವರಾಜ್‌ಕುಮಾರ್ ಗೆಲುವು ನಿಶ್ಚಿತ, ಅವರು ಈಗಾಗಲೇ ಪ್ರತಿಯೊಬ್ಬ ಬೂತ ಮಟ್ಟದ ನಾಯಕರೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ್, ಆಯನೂರು ಮಂಜುನಾಥ್, ಚಂದ್ರಭೂಪಾಲ್, ಚಂದನ, ಶಿ.ಜು.ಪಾಶ, ಪ್ರವೀಣ್‌ಕುಮಾರ್ ಉಪಸ್ಥಿತರಿದ್ದರು.