ಕ್ರಿಟಿಕಲ್ ಬೂತ್ ಪರಿಶೀಲಿಸಿದ ಚುನಾವಣಾ ವೀಕ್ಷಕರು*

*ಕ್ರಿಟಿಕಲ್ ಬೂತ್ ಪರಿಶೀಲಿಸಿದ ಚುನಾವಣಾ ವೀಕ್ಷಕರು*

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕ್ರಿಟಿಕಲ್, ವಲ್ನರಬಲ್ ಮತ್ತು ಶ್ಯಾಡೋ ಮತಗಟ್ಟೆಗಳಿಗೆ ಗುರುವಾರ (ಏ.25) ಭೇಟಿ ನೀಡಿದ ಚುನಾವಣಾ ಸಾಮಾನ್ಯ ವೀಕ್ಷಕರಾದ ಪೂನಂ ಅವರು ಅಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದರು.

ತೀರ್ಥಹಳ್ಳಿಯ ಸಹಾಯಕ ಚುನಾವಣಾಧಿಕಾರಿಗೆ ವಲ್ನರಬಲ್ ಮತಗಟ್ಟೆಗಳಲ್ಲಿ ಸರಿಯಾಗಿ ಮತದಾನ ಆಗುವಂತೆ ನೋಡಿಕೊಳ್ಳಲು ಕ್ರಮ ವಹಿಸುವಂತೆ ತಿಳಿಸಿದರು. ಮತದಾರರ ಮಾಹಿತಿ ಚೀಟಿ ವಿತರಣೆಯನ್ನು ಸಮರ್ಪಕವಾಗಿ ಎಲ್ಲಾ ಮತದಾರರಿಗೆ ತಲುಪಿಸಬೇಕು. ವಿಶೇಷ ಚೇತನ ಮತದಾರರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳು, ಫ್ಲೈಯಿಂಗ್ ಸ್ಕ್ವಾಡ್ ಟೀಮ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ಸೂಚನೆಗಳನ್ನು ನೀಡಿದರು.