ಆರ್.ಎಂ.ಮಂಜುನಾಥ ಗೌಡರ ಪತ್ರಿಕಾಗೋಷ್ಠಿ;ಶಾಸಕ ಮುನಿರತ್ನ ವಿರುದ್ಧ ಒಕ್ಕಲಿಗರಿಂದ ಒಕ್ಕೊರಳ ಖಂಡನೆ

ಆರ್.ಎಂ.ಮಂಜುನಾಥ ಗೌಡರ ಪತ್ರಿಕಾಗೋಷ್ಠಿ;

ಶಾಸಕ ಮುನಿರತ್ನ ವಿರುದ್ಧ ಒಕ್ಕಲಿಗರಿಂದ ಒಕ್ಕೊರಳ ಖಂಡನೆ

ನಾಡನ್ನು ಕಟ್ಟುವಲ್ಲಿ, ಸಾಹಿತ್ಯಿಕ, ಸಾಂಸ್ಕೃತಿಕ ಗೌರವ ತಂದುಕೊಟ್ಟ ಒಕ್ಕಲಿಗರ ವಿರುದ್ಧ ಮಾಜಿ ಸಚಿವ, ಶಾಸಕ ಮುನಿರತ್ನ ಕಳಂಕ ತರುವ ಮಾತಾಡಿದ್ದಾರೆ. ದಲಿತರ ಬಗ್ಗೆಯೂ ಹೇಯವಾಗಿ, ಕೆಟ್ಟದಾಗಿ ಮಾತಾಡಿದ್ದಾರೆ. ಈ ಹಿಂದೆಯೂ ಹೀಗೆಲ್ಲ ಮಾತಾಡಿ ಬುದ್ದಿ ಹೇಳಿಸಿಕೊಂಡಿದ್ದರು.
ಉರಿಗೌಡ, ನಂಜೇಗೌಡರ ಕುರಿತು ಸಿನೆಮಾ ತೆಗೆಯುವ ಮಾತಾಡಿ ಮುನಿರತ್ನ ಒಕ್ಕಲಿಗ ಸಮಾಜದ ವಿರುದ್ಧ ಕಿಡಿಕಾರಿದ್ದರು. ಕುವೆಂಪು, ಕೆಂಪೇಗೌಡರ ಒಕ್ಕಲಿಗ ಸಮಾಜ ಎಲ್ಲರಿಗೂ ಪ್ರೀತಿಯಿಂದ ನೋಡುವವರು. ಮುನಿರತ್ನ ಕಡೆಯಿಂದ ಸ್ವಾಭಿಮಾನಕ್ಕೆ ಪೆಟ್ಟುಕೊಡುವ ಕೆಲಸವಾಗಿದೆ.
ಹೆಣ್ಣನ್ನು ಅತ್ಯಂತ ಕೀಳುಮಟ್ಟದಲ್ಲಿ ಮಾತಾಡಿದ್ದಾರೆ. ನಾಡು ಕಟ್ಟಿದ ಕೆಂಪೇಗೌಡರ ಸಮಾಜಕ್ಕೆ ಅಗೌರವ ತೋರಿಸಿದ್ದಾರೆ. ಮುನಿರತ್ನ ವಿರುದ್ಧ ನಿರ್ಮಲಾನಂದ ಸ್ವಾಮೀಜಿ ಅತ್ಯಂತ ವಿನಯದಿಂದ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ಶಾಸಕ, ಮಂತ್ರಿಗಳು ಸಿಎಂರನ್ನು ಭೇಟಿ ಮಾಡಿ ನೋವು ತೋಡಿಕೊಂಡಿದ್ದಾರೆ.

ರೌಡಿ ಕೊರಂಗು ಸಹೋದರ ಆಗಿರುವ ಮುನಿರತ್ನ ವಿರುದ್ಧ ಬೇರೆ ಸಮಾಜದವರಾಗಿದ್ದರೆ ದೊಡ್ಡ ದುರಂತ ಮಾಡುತ್ತಿತ್ತು. ಒಕ್ಕಲು ಜನಾಂಗವನ್ನೇ ಅಗೌರವ ಮಾಡಿದ ಮುನಿರತ್ನ ವಿರುದ್ಧ ಕ್ರಮ ನಡೆಯುತ್ತಿದ್ದರೆ, ಅಷ್ಟು ತುರ್ತಿತ್ತಾ? ಎಂದು ಪ್ರಶ್ನಿಸುವ ರಾಜಕಾರಣಿಗಳು ಪಿತೂರಿ ಮಾಡುವುದನ್ನು ಬಿಡಬೇಕು.
ಒಕ್ಕಲಿಗರ ವಿರುದ್ಧ ನಡೆಯುತ್ತಿರುವ ದೊಡ್ಡ ಪಿತೂರಿ ಇದು. ಏಡ್ಸ್ ಹರಡಲು ಪ್ರಯತ್ನಿಸಿದ ಮುನಿರತ್ನ ನಮ್ಮ ರಾಜ್ಯದಲ್ಲಿರಬೇಕಾ?
ದೊಡ್ಡ ಸಂಖ್ಯೆಯಲ್ಲಿ ಒಕ್ಕಲಿಗರಾದ ನಾವಿದ್ದೇವೆ. ಎಲ್ಲರನ್ನೂ ಪ್ರೀತಿಸುವ ನಾವು ದೊಡ್ಡ ಪೆಟ್ಟಿಗೆ ಒಳಗಾಗಿದ್ದೇವೆ. ಗೌಡರ, ದಲಿತರ ವಿರುದ್ಧ ಮಾತಾಡಿದರೂ ಬಿಜೆಪಿ ಇನ್ನೂ ಒಳಗಿಟ್ಟುಕೊಂಡಿದೆ. ರಾಜಕೀಯದಲ್ಲಿ ಮುನಿರತ್ನ ಇರುವುದು ಸರಿಯಲ್ಲ.

ಮುಖ್ಯಮಂತ್ರಿಗಳ ಎಸ್ ಐ ಟಿ ತನಿಖೆ ತೀರ್ಮಾನಕ್ಕೆ ಸ್ವಾಗತ. ಮುನಿರತ್ನರವರ ಮೊದಲ ಘಟನೆ ಇದಲ್ಲ. ಹಂತಹಂತವಾಗಿ ಹೋರಾಟ ರೂಪಿಸಲಿದ್ದೇವೆ. ಎಸ್ ಐ ಟಿ ತನಿಖೆಯಲ್ಲಿ ಕೊರಂಗು, ಏಡ್ಸ್ ಹರಡೋ ಕಾರ್ಯ, ಉರಿಗೌಡ- ನಂಜೇಗೌಡ ಕಥೆ, ಬಿಬಿಎಂಪಿ ಕಡತ ಪ್ರಕರಣವೂ ಇರಬೇಕು.

ಮುನಿರತ್ನನೊಬ್ಬನ ಕೆಲಸ ಇದಲ್ಲ…ಈತನ ಹಿಂದೆ ಗುಂಪಿದೆ. ಆತನಿಗೆ ನಮ್ಮ ಸಮಾಜದ ಬಗ್ಗೆ ದ್ವೇಷವಿದೆ. ಈ ಸಮಾಜದ ಋಣದಿಂದ ಗೌರವ ಪಡೆದುಕೊಂಡವರು ಮುನಿರತ್ನ ವಿರುದ್ಧ ಹೋರಾಡಲೇಬೇಕು. ಪಕ್ಷಾತೀತ ಹೋರಾಟ ಆಗಬೇಕು.

ಧರ್ಮೇಶ್ ಸಿರಿಬೈಲು;
ಯಾವುದೇ ಧರ್ಮ, ಪಕ್ಷಕ್ಕೆ ಒಕ್ಕಲಿಗ ಜನಾಂಗ ಸೀಮಿತವಾಗಿಲ್ಲ. ಜಾತಿಧರ್ಮ ನೋಡದೇ ಸೇವೆ ಮಾಡುತ್ತಿದೆ. ಓರ್ವ ಜನಪ್ರತಿನಿಧಿ ಮುನಿರತ್ನ ಈ ರೀತಿ ಮಾತಾಡಬಹುದಾ? ಮಹಿಳೆಗೆ ಗೌರವ ಕೊಡದವನ ವಿರುದ್ಧ ಎಲ್ಲರೂ ಖಂಡಿಸಬೇಕು.
ಮುಂದೆ ಸ್ಪರ್ಧಿಸದಂತೆ ಕಾನೂನು ಹೋರಾಟ ನಡೆಯಬೇಕು.
ರಮೇಶ್ ಹೆಗಡೆ, ಭಾರತಿ ರಾಮಕೃಷ್ಣ, ಸುದರ್ಶನ, ಪುಟ್ಟಸ್ವಾಮಿ, ಆದಿಮೂರ್ತಿ, ಉಂಬಳೇಬೈಲು ಮೋಹನ್, ಪ್ರತಿಮಾ ಡಾಕಪ್ಪಗೌಡ, ಬಂಡೆ ವೆಂಕಟೇಶ್, ಚೇತನ್ ಗೌಡ, ಚಂದ್ರಕಾಂತ್, ಗುಂಡಪ್ಪ ಗೌಡ, ತೇಜಪ್ಪ, ಗೋ.ರಮೇಶ್ ಗೌಡ, ರಘುರಾಜ್ ಸೇರಿದಂತೆ ಹಲವರಿದ್ದರು.