ಹಸೆ ಚಿತ್ತಾರ ಕರಕುಶಲ ಕಲಾವಿದರಾದ ಸಿರಿವಂತೆ ಚಂದ್ರಶೇಖರ್ ರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಹಸೆ ಚಿತ್ತಾರ ಕರಕುಶಲ ಕಲಾವಿದರಾದ
ಸಿರಿವಂತೆ ಚಂದ್ರಶೇಖರ್ ರವರಿಗೆ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
÷÷÷÷÷÷÷÷÷÷÷÷÷÷÷÷÷÷÷÷÷÷÷
2024 ಸಾಲಿನ ಕನ್ನಡ ರಾಜ್ಯೋತ್ಸವದ
ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ
ಸರ್ಕಾರ ಪ್ರಕಟಿಸಿದೆ ಕರಕುಶಲ ವಿಭಾಗ
ದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ ಸಾಗರ
ತಾಲೂಕಿನ” ಸಿರಿವಂತೆ ಚಂದ್ರಶೇಖರ್ ”
ರವರ ಹೆಸರನ್ನು ಘೋಷಿಸಲಾಗಿದೆ.
ಸಿರಿವಂತೆ ಚಂದ್ರಶೇಖರ್ ರವರು ಹಸೆ
ಚಿತ್ತಾರ ಬಿಡಿಸುವ ಕಾರ್ಯದಲ್ಲಿ ತಮ್ಮ
ವೃತ್ತಿಯ ಸಾಧನೆಯಲ್ಲಿ ಪ್ರಶಂಸಿನಿಯ
ಮಹತ್ವದ ಕೆಲಸ ಮಾಡಿದ್ದಾರೆ . ಕಳೆದ
ಎರಡೂವರೆ ದಶಕದಿಂದ ಹಸೆ ಚಿತ್ತಾರ
ಗಳನ್ನುರಚಿಸಿ ಜನಪ್ರಿಯಗೊಳಿಸಿದ್ದಾರೆ
ಇದರಿಂದಾಗಿ ರಾಜ್ಯದಲ್ಲಿ ಹಸೆಚಿತ್ತಾರ
ಕಲೆಗೆ ಮತ್ತಷ್ಟು ಗೌರವ ಹೆಚ್ಚಾಗಿದೆ.
ಸಾಗರ ತಾಲೂಕಿನ ಸಿರಿವಂತೆ ಗ್ರಾಮ
ದಲ್ಲಿರುವ ಚಂದ್ರಶೇಖರ್ ಅವರ ಮನೆ
“ಹಸೆ ಚಿತ್ತಾರಗಳ ಕಲಾ ಕೇಂದ್ರ”ಎಂದು
ಬಣ್ಣಿಸಲಾಗಿದೆ ಭೂಮಿ ಹುಣ್ಣಿಮೆಗಾಗಿ
ಬೂಮಣ್ಣಿ ಬುಟ್ಟಿಗಳನ್ನುತಯಾರಿಸುವ
ಸಿರಿವಂತೆ ಚಂದ್ರಶೇಖರ್ ಅವರ ಕಲಾ
ಕೃತಿಗೆ ಕೃಷಿಕರಲ್ಲಿ ಮಹತ್ವ ಪಡೆದಿದೆ.
ರಾಜ್ಯಸರ್ಕಾರ ಕರಕುಶಲವಿಭಾಗದಲ್ಲಿ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ
ಶ್ರೀ ಸಿರಿವಂತೆ ಚಂದ್ರಶೇಖರ್ ರವರಿಗೆ
ಗ್ಯಾರಂಟಿ ಯೋಜನೆಗಳ ಅನುಷ್ಠಾನ
ಪ್ರಾಧಿಕಾರ ಜಿಲ್ಲಾಧ್ಯಕ್ಷರು ಶ್ರೀ ಸಿ.ಎಸ್
ಚಂದ್ರಭೂಪಾಲ ರವರು ಹಾರ್ದಿಕವಾ
ಗಿ ಅಭಿನಂದನೆ ಸಲ್ಲಿಸಿದ್ದಾರೆ.