ಪೌರಾಡಳಿತ ಸಚಿವರಿಂದ ಹೊಗಳಿಸಿಕೊಂಡಿದ್ದ ನಗರಪಾಲಿಕೆ ಆಯುಕ್ತೆಗೆ ನಗರಾಭಿವೃದ್ಧಿ ಸಚಿವರಿಂದ ಶಾಕ್!ಹೆಲ್ತ್ ಇನ್ಸ್ ಪೆಕ್ಟರ್ ವೇಣುಗೋಪಾಲ್ ಸಸ್ಪೆಂಡ್- ಕೂದಲೆಳೆಯಲ್ಲಿ ಬಚಾವಾದ ಟಪಾಲು ಮಧು!ಡಾಟಾ ಎಂಟ್ರಿ ಆಪರೇಟರ್ ಗಳ ಬಗ್ಗೆ ಏನಂದ್ರು ಸಚಿವ ಭೈರತಿ?
ಪೌರಾಡಳಿತ ಸಚಿವರಿಂದ ಹೊಗಳಿಸಿಕೊಂಡಿದ್ದ ನಗರಪಾಲಿಕೆ ಆಯುಕ್ತೆಗೆ ನಗರಾಭಿವೃದ್ಧಿ ಸಚಿವರಿಂದ ಶಾಕ್!
ಹೆಲ್ತ್ ಇನ್ಸ್ ಪೆಕ್ಟರ್ ವೇಣುಗೋಪಾಲ್ ಸಸ್ಪೆಂಡ್- ಕೂದಲೆಳೆಯಲ್ಲಿ ಬಚಾವಾದ ಟಪಾಲು ಮಧು!
ಡಾಟಾ ಎಂಟ್ರಿ ಆಪರೇಟರ್ ಗಳ ಬಗ್ಗೆ ಏನಂದ್ರು ಸಚಿವ ಭೈರತಿ?
ಮೊನ್ನೆ ಮೊನ್ನೆಯಷ್ಟೇ ಸುಳ್ಳೇ ಸುಳ್ಳು ಹೇಳಿ ರಾಜ್ಯ ಪೌರಾಡಳಿತ ಸಚಿವ ರೆಹಮಾನ್ ಖಾನ್ ರಿಂದ ಹೊಗಳಿಸಿಕೊಂಡಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಇದೀದ ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರವರ ಆಕಸ್ಮಿಕ ಭೇಟಿಯಿಂದ ಅವ್ಯವಸ್ಥೆಯ ಆಗರವಾಗಿರೋ ನಗರಪಾಲಿಕೆಯ ದರ್ಶನವಾಗಿದೆ.
ಶಿವಮೊಗ್ಗ ನಗರಕ್ಕೆ ಕನಕ ಸಮುದಾಯ ಭವನ ಶಂಕುಸ್ಥಾಪನೆ ಪ್ರಯುಕ್ತ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ನಂತರ ಇದ್ದಕ್ಕಿದ್ದಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ದಾಳಿ ಮಾಡಿದರು.
ಹೆಲ್ಪ್ ಲೈನ್, ಟಪಾಲು ವಿಭಾಗ ಎಂದೆಲ್ಲಾ ಓಡಾಡಿದ ಸಚಿವರು ವಿಚಾರಣೆಗೆ ನಿಂತರು. ಆಯುಕ್ತೆ ಕವಿತಾ ಯೋಗಪ್ಪನವರ್ ಕೂಡ ಜೊತೆಗಿದ್ದರು. ಹೆಲ್ಪ್ ಲೈನಿಗೆ ಕಾಲಿಟ್ಟು, ದೂರುದಾರರಿಗೆ ಫೋನಾಯಿಸಿದ ಸಚಿವರು ದಂಗಾದರು. ಸ್ವಚ್ಛತೆಗೆ ಬೆಲೆ ಕೊಡುತ್ತಿಲ್ಲ ಎಂಬ ದೂರುಗಳು ಬಂದಿದ್ದರಿಂದ ಕೂಡಲೇ ಹೆಲ್ತ್ ಇನ್ಸ್ ಪೆಕ್ಟರ್ ವೇಣುಗೋಪಾಲ್ ಗೆ ಕರೆದು ಛೀಮಾರಿ ಹಾಕಿ, ಸ್ಥಳದಲ್ಲೇ ಅಮಾನತಿಗೆ ಆದೇಶಿಸಿದರು.
ಇದಾದ ಮೇಲೆ, ಟಪಾಲು ಪರಿಶೀಲನೆಗೆ ಇಳಿದು ಮಧು ಎಂಬಾತನನ್ನು ತರಾಟೆಗೆ ತೆಗೆದುಕೊಂಡರು.ಕೂದಲೆಳೆ ಅಂತರದಲ್ಲಿ ಟಪಾಲು ವಿಭಾಗದ ಮಧು ಬಚಾವ್ ಆದರು.
ಅಲ್ಲೇ ಇದ್ದ ಸಾರ್ವಜನಿಕರ ಸಮಸ್ಯೆಗಳನ್ನೂ ಸಚಿವ ಭೈರತಿ ಆಲಿಸಿದರು. ಆಯುಕ್ತೆ ಕವಿತಾರಿಗೂ ಕೆಲ ವಿಚಾರಗಳಲ್ಲಿ ಕ್ಲಾಸ್ ತೆಗೆದುಕೊಂಡರು. ಇ- ಸ್ವತ್ತು ವಿರುದ್ಧ ಜನಾಕ್ರೋಶ ಕಂಡ ಸಚಿವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟರು.
ಪತ್ರಕರ್ತ ಚಂದ್ರಶೇಖರ್ ಸಚಿವರ ಗಮನಕ್ಕೆ ತಂದ ಡಾಟಾ ಎಂಟ್ರಿ ಅಕ್ರಮ ನೇಮಕಾತಿ ವಿಚಾರದ ಬಗ್ಗೆ ಮಾಹಿತಿ ಪಡೆದುಕೊಂಡರು.
ಅಂತೂ ಪೌರಾಡಳಿತ ಸಚಿವರಿಂದ ಸ್ವಚ್ಛತೆ ಬಗ್ಗೆ ಹೊಗಳಿಸಿಕೊಂಡಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ, ನಗರಾಭಿವೃದ್ಧಿ ಸಚಿವರು ಸ್ವಚ್ಛತೆ ವಿಚಾರದಲ್ಲಿಯೇ ದಿಢೀರ್ ಸಸ್ಪೆಂಡ್ ಮಾಡಿದ್ದರಿಂದ ಬೆಚ್ಚಿಬೀಳುವಂತಾಯ್ತು!