ಆಶ್ರಯ ಬಡಾವಣೆಯಲ್ಲಿ ಗೋವಿಂದಾಪುರ ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಹೇಳಿಕೆ* *ಒಂದೂವರೆ ತಿಂಗಳಲ್ಲಿ ಬ್ಯಾಂಕ್ ಸಾಲದ ಹಣ ವಾಪಸ್* *ಬಡವರಿಗೆಲ್ಲ ಸೂರು ನೀಡಲೆಂದೇ ಈ ವಸತಿ ಖಾತೆ ಪಡೆದಿದ್ದೇನೆ ಎಂದ ಜಮೀರ್*

*ಆಶ್ರಯ ಬಡಾವಣೆಯಲ್ಲಿ ಗೋವಿಂದಾಪುರ ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಹೇಳಿಕೆ*

*ಒಂದೂವರೆ ತಿಂಗಳಲ್ಲಿ ಬ್ಯಾಂಕ್ ಸಾಲದ ಹಣ ವಾಪಸ್*

*ಬಡವರಿಗೆಲ್ಲ ಸೂರು ನೀಡಲೆಂದೇ ಈ ವಸತಿ ಖಾತೆ ಪಡೆದಿದ್ದೇನೆ ಎಂದ ಜಮೀರ್*

ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ನೀಡಿಲ್ಲವೆಂದಾದರೆ ನಾವುಗಳು ಇಲ್ಲಿರಲು ಸಾಧ್ಯವಾಗುತ್ತಿರಲಿಲ್ಲ

ಭಾಷಣಕ್ಕೂ ಮುನ್ನ ಜೈ ಭೀಮ್, ಜೈ ಭೀಮ್ ಎಂದು ಘೋಷಣೆ ಕೂಗಿದ ಸಚಿವ ಜಮೀರ್

ಈ ಆಶ್ರಯ ಬಡಾವಣೆ ಬಗ್ಗೆ ಈಗಾಗಲೇ ಬಹಳಷ್ಟು ಬಾರಿ ಚರ್ಚೆ ನಡೆಸಿದ್ದೆವೆ

ಈಗಾಗಲೇ 3 ಸಾವಿರ ಮನೆಗಳ ನಿರ್ಮಾಣದಲ್ಲಿ 652 ಮನೆಗಳು ಹಂಚಿಕೆ ಮಾಡಲಾಗುತ್ತಿದೆ

ಈ ಹಿಂದೆ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ಕೂಡ ಕೆಲವರಿಗೆ ಇಲ್ಲಿ ಮನೆಗಳ ಹಂಚಿಕೆ ಮಾಡಿದ್ದರು

ನಾನು ಮಂತ್ರಿಯಾದ ಬಳಿಕ ಈ ಬಡಾವಣೆ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ

ಫಲಾನಭವಿಗಳಿಗೆ ಮನೆಗಳ ಹಣ 2 ಲಕ್ಷ ರೂ. ಹೆಚ್ಚುವರಿಯಾಗಿ ಕಟ್ಟುವಂತಾಗಿದೆ

ಈಗ 7 ವರೆ ಲಕ್ಷ ರೂ. ಗೆ ಬಡವರಿಗೆ ಮನೆ ಸಿಗುವಂತಾಗಿದೆ

ಬಡವರಿಗೆ ಸರ್ಕಾರದಿಂದ ಮನೆ ಕಟ್ಟಲು ಹಣ ಸಹಕಾರ ಮಾಡಲಾಗಿದೆ

9 ವರೆ ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ

ಸ್ಲಂ ಬೋರ್ಡ್ ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆಯಿಂದ ಹಣ ಬಿಡುಗಡೆ ಮಾಡಿ ಬಡವರಿಗೆ ಮನೆ ನೀಡಲಾಗಿದೆ

ಬ್ಯಾಂಕ್ ಗೆ ಸಾಲ ಪಡೆದು ಕಟ್ಟಿರುವ ಮನೆಗಳ ಫಲಾನುಭವಿಗಳಿಗೆ ಮುಂದಿನ ಒಂದುವರೆ ತಿಂಗಳಲ್ಲಿ ಹಣ ನೀಡಲಾಗುವುದು

ಸರ್ಕಾರದಿಂದ ಅಗತ್ಯ ಹಣ ಬಿಡುಗಡೆ ಮಾಡಲಾಗುವುದು

ಆಗ ಬಡವರು ಬ್ಯಾಂಕ್ ಗೆ ಹಣ ವಾಪಾಸ್ ಕಟ್ಟಿ ಸಾಲ ತೀರಿಸಬಹುದು

ಬಡವರು ಸಾಲ ಮುಕ್ತ ಜೀವನ ನಡೆಸಬಹುದು

ಬಡವರಿಗೆ ಸೂರು ಕೊಡುವುದು ಸರ್ಕಾರದ ಕರ್ತವ್ಯ

ಬೆಂಗಳೂರಿನ ಆಟೋ ಚಾಲಕರು ಸೇರಿದಂತೆ ಬಡವರಿಗೆ ಮನೆ ನಿರ್ಮಿಸಲು 1600 ಎಕರೆ ಜಾಗ ಖರೀದಿ ಮಾಡಲಾಗಿದೆ

2016 ರಲ್ಲಿ ಸಿಎಂ ಸಿದ್ಧರಾಮಯ್ಯ ಅವರು, ಸರ್ಕಾರದ ಮೂಲಕ ಜಾಗ ಖರೀದಿ ಮಾಡಿ ರಾಜೀವ್ ಗಾಂಧಿ ವಸತಿ ಯೋಜನೆಗೆ ನೀಡಲಾಗಿದೆ

ಬೆಂಗಳೂರಿನ ಬಡವರಿಗೆ 6 ವರೆಯಿಂದ 7 ಲಕ್ಷ ರೂ. ಗಳಿಗೆ ಮನೆ ನಿರ್ಮಿಸಿಕೊಡಲು ಯೋಜಿಸಲಾಗಿದೆ

ನಾನು ಪಕ್ಷ ಭೇದ, ಜಾತಿ ಭೇದ ಮಾಡಲ್ಲ

ನಾನು ಮುಸ್ಲಿಂ ಇರಬಹುದು ಆದರೆ ಜಾತಿ ಮಾಡಲ್ಲ

ರಾಜಕೀಯಕ್ಕೆ ಬಂದ ಮೇಲೆ ಜಾತಿಯತೆ ಮಾಡಬಾರದು

ಯಾರು ಒಳ್ಳೆಯ ಕೆಲಸ ಮಾಡಿದ್ದಾರೋ ಅದನ್ನು ಒಪ್ಪಿಕೊಳ್ಳಬೇಕು

ಹಿಂದೆ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ

ಅದನ್ನು ಕೂಡ ನಾವು ಒಪ್ಪಿಕೊಳ್ಳಬೇಕು

ಈ ಹಿಂದೆ ಸ್ಲಂನಿಂದ ಅವರು ಬಡವರಿಗೆ ಮನೆಗಳನ್ನು ನೀಡಬೇಕಿತ್ತು

ಆದರೆ ಅವರು ಮನೆಗಳನ್ನು ಬಡವರಿಗೆ ನೀಡಿಲ್ಲ

ಬೇಜಾರಾಬೇಡಿ ಚೆನ್ನಿಯವರೇ ಎಂದ ಸಚಿವ ಜಮೀರ್

ಆದರೆ ನಮ್ಮ ಸಿಎಂ ಸಿದ್ಧರಾಮಯ್ಯನವರು ಗ್ಯಾರಂಟಿ ಯೋಜನೆಗಳ ನಡುವೆಯೂ ಬಡವರಿಗೆ ಮನೆಗಳನ್ನು ನೀಡುತ್ತಿದ್ದಾರೆ

ಬಡವರಿಗೆ ಮನೆಗಳನ್ನು ನೀಡಿಲ್ಲವೆಂದಾದರೆ ದೇವರು ಮೆಚ್ಚಲ್ಲ

ಬಡವರಿಗೆ ಮನೆ ನೀಡದೇ ವಂಚಿಸಿದರೆ, ನಮ್ಮ ಮಕ್ಕಳಿಗೆ ಒಳ್ಳೆದಾಗಲ್ಲ

ನಾನು ವಸತಿ ಇಲಾಖೆ ಕೊಡಿ ಅಂತಾನೆ ಕೇಳಿದ್ದೆ

ಬಡವರಿಗೆ ಸೂರುಗಳನ್ನು ನೀಡಬೇಕೆಂದೇ ಈ ಇಲಾಖೆ ಪಡೆದಿದ್ದೆನೆ

ಮನೆಗಳನ್ನು ಪಡೆದವರು ಒಂದು ಲಕ್ಷ ರೂ. ಗೂ ಹೆಚ್ಚು ನೀಡಿದ್ದಲ್ಲಿ
ಅದನ್ನು ಸರ್ಕಾರದಿಂದ ವಾಪಾಸ್ ನೀಡುವ ಕೆಲಸ ನಾವು ಮಾಡುತ್ತೇವೆ.

*ಆಶ್ರಯ ಬಡಾವಣೆಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿಕೆ*

*ಮುಂದಿನ ದಿನಗಳಲ್ಲಿ ಸಂಪೂರ್ಣ ಮೂಲಭೂತ ಸೌಲಭ್ಯ*

ಮನೆ ಹಂಚಿಕೆಗೆ ಈ ಹಿಂದೆ ದಿನಾಂಕ ನಿಗಧಿಯಾಗಿತ್ತು

ಆದರೆ ಸಂಪೂರ್ಣವಾಗಿ ಕಾಮಗಾರಿ ಹಾಗೂ ವಿದ್ಯುತ್ ಬಂದ ಬಳಿಕ ಮನೆ ಹಂಚಿಕೆ ಮಾಡಲಾಗಿದೆ

ಬಂಗಾರಪ್ಪನವರು ಆಶ್ರಯ ಬಡಾವಣೆ ಯೋಜನೆ ಜಾರಿಗೆ ತಂದಿದ್ದರು

ಈ ಸಂದರ್ಭದಲ್ಲಿ ಅವರನ್ನು ನೆನೆಸಿಕೊಳ್ಳಲೇಬೇಕು

ಈ ನೂತನ ಆಶ್ರಯ ಬಡಾವಣೆಗೆ ಸರ್ಕಾರಿ ಬಸ್ ಸೌಲಭ್ಯ ನೀಡಲು ಸೂಚಿಸಲಾಗಿದೆ

ನೇರವಾಗಿ ನಿಮ್ಮ ಖಾತೆಗೆ ಹಣ ಬರುತ್ತಿದೆ

ವಿದ್ಯುತ್ ಸಂಪೂರ್ಣ ಉಚಿತ ನೀಡಲಾಗುತ್ತಿದೆ

ಬಡವರಿಗಾಗಿ ನಮ್ಮ ಸಿದ್ಧರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ

ಈ ಕಾರ್ಯಕ್ರಮದ ಮೂಲಕ ನಾನು ಇದನ್ನು ಸ್ಪಷ್ಟಪಡಿಸುತ್ತಿದ್ದೆನೆ

ಸಚಿವರಾದ ಜಮೀರ್ ಅಹಮದ್ ಅವರು ಮತ್ತೆ ಆಶ್ರಯ ಬಡಾವಣೆಗೆ ಹಣ ಬಿಡುಗಡೆ ಮಾಡಲು ಒಪ್ಪಿದ್ದಾರೆ

ಕೇವಲ ಸೊರಬವಲ್ಲದೇ, ಶಿವಮೊಗ್ಗ ಜಿಲ್ಲೆಯಲ್ಲೆಡೆ ಆಶ್ರಯ ಬಡಾವಣೆ ಸ್ಥಾಪನೆಯಾಗಬೇಕು

ಈ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಲಾಗುತ್ತಿದೆ

ಈ ಹೊಸ ಆಶ್ರಯ ಬಡಾವಣೆಯಲ್ಲಿ ಸುಮಾರು ಮೂರು ಸಾವಿರ ಮನೆಗಳು ಬಡವರಿಗಾಗಿ ನಿರ್ಮಾಣವಾಗುತ್ತಿದೆ

ಈ ಆಶ್ರಯ ಬಡಾವಣೆಯಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ನಾನು ಸೂಚಿಸುತ್ತಿದ್ದೆನೆ

ಇಲ್ಲಿ ಜಾಗ ತೋರಿಸಿ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ ಸಚಿವ ಮಧು ಬಂಗಾರಪ್ಪ

ಮಕ್ಕಳು ಕೂಡ ಅದೆ ಶಾಲೆಗೆ ಬರುವಂತೆ ನೋಡಿಕೊಳ್ಳಿ.

*ಗೋವಿಂದಾಪುರದಲ್ಲಿ ನಿರ್ಮಿಸಲಾಗಿರುವ ಮನೆಗಳ ಹಂಚಿಕೆ ಕಾರ್ಯಕ್ರಮ ಯಶಸ್ವಿ*

ಮನೆಗಳ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಸತಿ ಸಚಿವ ಜಮೀರ್ ಅಹಮ್ಮದ್

ಶಿವಮೊಗ್ಗದ ಗೋವಿಂದಾಪುರದಲ್ಲಿ ನಿರ್ಮಿಸಲಾಗಿರುವ 652 ಮನೆಗಳು

ಲಾಟರಿ ಮೂಲಕ ಆಯ್ಕೆ ಮಾಡುವ ಕಾರ್ಯಕ್ರಮ

3000 ಜಿ+2 ಗುಂಪು ಮನೆಗಳಲ್ಲಿ ಪೂರ್ಣಗೊಂಡ 652 ಮನೆಗಳು

ಅರ್ಹ ಫಲಾನುಭವಿಗಳಿಗೆ ಬ್ಲಾಕ್ ಸಂಖ್ಯೆ ಹಾಗೂ ಫ್ಲಾಟ್ ಸಂಖ್ಯೆ ನೀಡಿದ ಸಚಿವ ಜಮೀರ್ ಅಹಮದ್

ಪ್ರಧಾನಮಂತ್ರಿ ಆವಾಜ್ ಯೋಜನೆ, ರಾಜ್ಯ ವಸತಿ ಯೋಜನೆಯೊಂದಿಗೆ ನಿರ್ಮಿಸಲಾಗಿರುವ ಮನೆಗಳು

ಗೋವಿಂದಾಪುರದಲ್ಲಿ ನಡೆಸಲಾಗುತ್ತಿರುವ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಂಎಲ್ ಸಿ ಬಲ್ಕೀಶ್ ಬಾನು, ಶಾರದಾ ಪೂರ್ಯಾನಾಯ್ಕ್, ಡಾ. ಧನಂಜಯ್ ಸರ್ಜಿ, ಡಿ.ಎಸ್. ಅರುಣ್, ಡಿಸಿ, ಎಸ್.ಪಿ., ಸೇರಿದಂತೆ ಹಲವಾರು ಮುಖಂಡರು ಭಾಗಿ..