ಸಾಗರ ಗ್ರಾಮಾಂತರದಲ್ಲಿ ಕೊಲೆ- ದರೋಡೆ ಪ್ರಕರಣ;* *ಮೂವರಿಗೆ ಜೀವಾವಧಿ ಶಿಕ್ಷೆ*
*ಸಾಗರ ಗ್ರಾಮಾಂತರದಲ್ಲಿ ಕೊಲೆ- ದರೋಡೆ ಪ್ರಕರಣ;*
*ಮೂವರಿಗೆ ಜೀವಾವಧಿ ಶಿಕ್ಷೆ*
2020 ರ ಆಗಸ್ಟ್ 12ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರವಂತೆ ಗ್ರಾಮದ ವಾಸಿ 44 ವರ್ಷದ ಮಹಿಳೆಯೊಬ್ಬಳನ್ನು ಚಾಕುವಿನಿಂದ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿ, ಆಕೆಯ ಬಳಿ ಇದ್ದ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿದ್ದ ಮೂವರಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ.
ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ಠಾಣಾ ಗುನ್ನೆ ಸಂಖ್ಯೆ 276/2020 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು ಪೊಲೀಸರು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಸಾಗರ ಗ್ರಾಮಾಂತರ ವೃತ್ತದ ಸಿಪಿಐ ಸುನಿಲ್ ಕುಮಾರ್ .ಎಂ. ಪ್ರಕರಣದ *ತನಿಖೆ ಪೂರೈಸಿ* ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಅಣ್ಣಪ್ಪ ನಾಯಕ್ ಜಿ, (ಸರ್ಕಾರಿ ಅಭಿಯೋಜಕರು) ಪ್ರಕರಣದ ವಾದ ಮಂಡಿಸಿದ್ದು, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧಿಶರಾದ ಶ್ರೀಮತಿ ಪ್ರಭಾವತಿ ರವರು ಫೆ.24ರ ಸೋಮವಾರದಂದು ಪ್ರಕರಣದ ಆರೋಪಿತರಾದ ಅರುಣ @ ಗೆಂಡೆ ಅರುಣ,( 27 ವರ್ಷ, ಸಾಗರ ಟೌನ್), ಅಭಿಜಿತ್( 28 ವರ್ಷ, ಸಾಗರ ಟೌನ್) ಮತ್ತು ಇರ್ಫಾನ್ (20 ವರ್ಷ, ಸಾಗರ ಟೌನ್) ಇವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 10,000/- ದಂಡ ವಿಧಿಸಿ* ಆದೇಶಿಸಿದ್ದಾರೆ.