ಶಿವಮೊಗ್ಗದ ಸಂತ ಥಾಮಸ್ ಸಮುದಾಯ ಭವನದಲ್ಲಿ ನಡೆಯುತ್ತಿರುವ* *2024ರ ಶಿವಮೊಗ್ಗ ಲೋಕಸಭಾ* *ಚುನಾವಣೆಯ ಪೂರ್ವ ತಯಾರಿ ಸಭೆಯಲ್ಲಿ ಏನಂದ್ರು ಮಂತ್ರಿ ಮಧು ಬಂಗಾರಪ್ಪ? ಹೇಗಿದೆ ಎಲೆಕ್ಷನ್ ತಯಾರಿ?*
*ಶಿವಮೊಗ್ಗದ ಸಂತ ಥಾಮಸ್ ಸಮುದಾಯ ಭವನದಲ್ಲಿ ನಡೆಯುತ್ತಿರುವ*
*2024ರ ಶಿವಮೊಗ್ಗ ಲೋಕಸಭಾ* *ಚುನಾವಣೆಯ ಪೂರ್ವ ತಯಾರಿ ಸಭೆಯಲ್ಲಿ ಏನಂದ್ರು ಮಂತ್ರಿ ಮಧು ಬಂಗಾರಪ್ಪ? ಹೇಗಿದೆ ಎಲೆಕ್ಷನ್ ತಯಾರಿ?*
*ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು*
ಶಿವರಾಜ್ ಕುಮಾರ್ ಮೊದಲ ಬಾರಿಗೆ ರಾಜಕೀಯ ಪ್ರಚಾರ ಮಾಡಿದ್ದೇ ನಮಗೆ. ಈಗಲೂ ಬಹಳಷ್ಟು ಕಡೆ ಅವರೇ ಪ್ರಚಾರ ಮಾಡುತ್ತಾರೆ.
ಸರ್ವೇ ವರದಿ ಪ್ರಕಾರ ಪಕ್ಷ ತೀರ್ಮಾನ ಮಾಡಿ ಗೀತಕ್ಕನಿಗೆ ಅಭ್ಯರ್ಥಿಯಾಗಿಸಲಾಗಿದೆ. ನನ್ನಿಂದ ಅವರಿಗೆ ಸ್ಥಾನ ಸಿಕ್ಕಿಲ್ಲ.
ಗೀತಕ್ಕ ನನಗಿಂತಲೂ ಮೋರ್ ಪವರ್ ಫುಲ್.ಪಕ್ಷ ಅದಕ್ಕಾಗಿ ಆಯ್ಕೆ ಮಾಡಿದೆ.
ನನ್ನ ಬೂತ್ ನನ್ನ ಜವಾಬ್ದಾರಿ ಮಾಡಿರುವ ಉದ್ದೇಶ ಅರ್ಥ ಮಾಡಿಕೊಳ್ಳಿ. ಕಾಲಹರಣ ಮಾಡಬೇಡಿ. ಮನೆ ಮನೆಗೆ ಭೇಟಿ ಆಗಬೇಕು.
ಬ್ಲಾಕ್ ಉಸ್ತುವಾರಿ ಮಾಡಿದ್ದೇವೆ.ಬೂತ್ ಗಳಿಗೇ ಭೇಟಿ ಕೊಟ್ಟು ಸಭೆ ನಡೆಸಿ. ಫಲಾನುಭವಿಗಳನ್ನೇ ಬೂತಿನ ಶಕ್ತಿಯಾಗಿಸಿ. ಹಿರಿಯರನ್ನು ಭೇಟಿ ಮಾಡಿ ಮನವೊಲಿಸಿ. ಹಿರಿಯರು ಒಮ್ಮೆ ನಿರ್ಧರಿಸಿದರೆ ಅವರು ಬದಲಾಗೋದಿಲ್ಲ.
ಜೆಡಿಎಸ್ ಈಗ ಬಿಜೆಪಿ ಬಿ ಟೀಂ ಆಗೋಗಿದೆ. ಸೋಲಿಗೆ ಆ ಪಕ್ಷವೇ ಕಾರಣ. ಈಗ ಕಾಂಗ್ರೆಸ್ ನಿಂದ ಗೆದ್ದು ಗೌರವ ಉಳಿಸಿಕೊಂಡಿದ್ದೇನೆ.
ಮಹಿಳೆ ಮೋಸ ಮಾಡಲ್ಲ. ಗೃಹಲಕ್ಷ್ಮೀ ಪಡೆಯುತ್ತಿರುವವರು ಕಾಂಗ್ರೆಸ್ ಗೇ ಮತ ಹಾಕುವಂತೆ ನೋಡಿಕೊಳ್ಳಿ.
*ಹೆಚ್.ಎಸ್.ಸುಂದರೇಶ್, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ*
– ಯಾರಿಗೂ ನಿರ್ಲಕ್ಷ್ಯ ಮಾಡುವಂತಿಲ್ಲ. ಚುನಾವಣೆ ಆರಂಭವಾಗಿದೆ.
ಪ್ರತಿ ಗ್ರಾ ಪಂ ಮಟ್ಟದಲ್ಲೂ ಕೂಡ ಪಂಚ ಗ್ಯಾರಂಟಿಗಳ ಸಫಲತೆ ಹೇಳಬೇಕು. ವಿಧಾನಸಭೆಯಲ್ಲಿ ಜಯಭೇರಿ ಬಾರಿಸಿದ್ದೇವೆ. ಸರ್ಕಾರ ಬಂದ ಆರು ತಿಂಗಳಲ್ಲೇ ಭರವಸೆ ಈಡೇರಿಸಿದ್ದೇವೆ. ಧೈರ್ಯವಾಗಿ ಮತ ಕೇಳಬಹುದು. ಕೇಂದ್ರ ನಾಯಕ ರಾಹುಲ್ ಗಾಂಧಿಯವರು ಮತ್ತೆ ಐದು ಗ್ಯಾರಂಟಿ ಘೋಷಿಸಿದ್ದಾರೆ. ಅವೂ ಕೂಡ ಗಮನ ಸೆಳೆಯುತ್ತಿವೆ.
25-30000 ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿದೆ.
ಮೋದಿ ಸರ್ಕಾರ ಹತ್ತು ವರ್ಷದಿಂದ ಇದೆ. ಪ್ರಯೋಜನವಿಲ್ಲ. ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಕೆಲವೇ ಕೆಲವು ಶ್ರೀಮಂತರಿಗೆ ದೇಶ ಒತ್ತೆಯಿಡಲಾಗಿದೆ.
ಮೋದಿ ಸುಳ್ಳು ಹೇಳಿದ್ದೇ ಜಾಸ್ತಿ. ಕಪ್ಪು ಹಣ ಇನ್ನೂ ಶೇ.50 ರಷ್ಟು ಹೆಚ್ಚಾಗಿದೆ.
ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ. ಆದರೆ, ಕೇಂದ್ರ ಸಾಲದಲ್ಲಿದೆ.
ಎಂ.ಶ್ರೀಕಾಂತ್, ಕಿಮ್ಮನೆ ರತ್ನಾಕರ್, ಆರ್.ಪ್ರಸನ್ನ ಕುಮಾರ್, ಆಯನೂರು ಮಂಜುನಾಥ್, ಆರ್.ಎಂ.ಮಂಜುನಾಥ ಗೌಡ, ಎನ್.ರಮೇಶ್, ಬಲ್ಕೀಷ್ ಬಾನು, ಅನಿತಾ ಕುಮಾರಿ, ಎಸ್ ಪಿ ದಿನೇಶ್, ಹೆಚ್.ಸಿ.ಯೋಗೇಶ್, ಕಲಗೋಡು ರತ್ನಾಕರ್, ಶಿವಕುಮಾರ್, ಕಲೀಂ ಪಾಷ, ಕಲಗೋಡು ರತ್ನಾಕರ್ ಸೇರಿದಂತೆ ಬಹುತೇಕ ನಾಯಕರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.