Gm ಶುಭೋದಯ💐💐
*ಕವಿಸಾಲು*
1.
ಆರಾಮಿದ್ದೀನಿ
ಅಂತ ಹೇಳುವ ಎಲ್ಲರ ಹಿಂದೆಯೂ
ಒಂದೊಂದು
ಸತ್ಯವಿದೆ- ಸುಳ್ಳಿದೆ,
ಒಂದೊಂದು ಕಥೆಯಿದೆಯಲ್ಲ
ಹೃದಯವೇ…
2.
ಎಷ್ಟು
ಆಳದ ಮೋಹವೋ
ಅಷ್ಟೇ
ಆಳದ ನೋವೂ
3.
ಬೆನ್ನ ಹಿಂದೆ ನಗುವವನೇ…
ಇವತ್ತಿನ
ಗಾಳಿ ನಿನ್ನದಾದರೆ
ನಾಳೆಯ
ಬಿರುಗಾಳಿ ನನ್ನದೇ!
– *ಶಿ.ಜು.ಪಾಶ*
8050112067
(23/6/2025)