ದೇಶ್ ನೀಟ್ ಅಕಾಡೆಮಿಯ ಅಕ್ರಮ ಲೋಕದಲ್ಲಿ-1* *ಮತ್ತೆ ಬಾಗಿಲು ತೆರೆಯಲು ಹೊರಟ ದೇಶ್ ನೀಟ್ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಮಿಸ್ಟರ್ ಅವಿನಾಶ್ ಎ.ಆರ್…* *ದೇಶ್ ನೀಟ್ ಅಕಾಡೆಮಿಯ ಒಳಗೇನಿದೆ? ಈ ಅಕಾಡೆಮಿ ಯಾಕೆ ಕಾನೂನು ಬಾಹಿರ?* *ದೇಶ್ ನೀಟ್ ಅಕಾಡೆಮಿಯಲ್ಲಿ NEET ಆಸೆಗೆ ಬಿದ್ದು ಹಣ ಕಟ್ಟಿ ನೋಂದಣಿ ಮಾಡಿಸಿಕೊಳ್ಳುವ ಮುನ್ನ ಇದೊಮ್ಮೆ ಓದಿ ಪಿ.ಯು. ವಿದ್ಯಾರ್ಥಿಗಳೇ…ಅವರ ಪೋಷಕರೇ…* *ಈಗೇನು ಕ್ರಮ ಕೈಗೊಳ್ಳುವರು ಶಿವಮೊಗ್ಗ ಜಿಲ್ಲಾ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ?*

*ದೇಶ್ ನೀಟ್ ಅಕಾಡೆಮಿಯ ಅಕ್ರಮ ಲೋಕದಲ್ಲಿ-1*

*ಮತ್ತೆ ಬಾಗಿಲು ತೆರೆಯಲು ಹೊರಟ ದೇಶ್ ನೀಟ್ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಮಿಸ್ಟರ್ ಅವಿನಾಶ್ ಎ.ಆರ್…*

*ದೇಶ್ ನೀಟ್ ಅಕಾಡೆಮಿಯ ಒಳಗೇನಿದೆ? ಈ ಅಕಾಡೆಮಿ ಯಾಕೆ ಕಾನೂನು ಬಾಹಿರ?*

*ದೇಶ್ ನೀಟ್ ಅಕಾಡೆಮಿಯಲ್ಲಿ NEET ಆಸೆಗೆ ಬಿದ್ದು ಹಣ ಕಟ್ಟಿ ನೋಂದಣಿ ಮಾಡಿಸಿಕೊಳ್ಳುವ ಮುನ್ನ ಇದೊಮ್ಮೆ ಓದಿ ಪಿ.ಯು. ವಿದ್ಯಾರ್ಥಿಗಳೇ…ಅವರ ಪೋಷಕರೇ…*

*ಈಗೇನು ಕ್ರಮ ಕೈಗೊಳ್ಳುವರು ಶಿವಮೊಗ್ಗ ಜಿಲ್ಲಾ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ?*

ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಮತ್ತೆ ಅನಧಿಕೃತವಾಗಿ ಗರಿ ಬಿಚ್ಚುತ್ತಿದೆ!

ಸಂಬಂಧ ಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ, ಸರ್ಕಾರದ ಕಾನೂನನ್ನು ಉಲ್ಲಂಘನೆ ಮಾಡಿ ದಕ್ಷಾಸ್ ಎಜುಕೇಷನಲ್ ಸರ್ವೀಸಸ್ ಹೋಲಿಸ್ಟಿಕ್, ಎಲ್ ಎಲ್ ಆರ್(ರಿ.,) ಮತ್ತೆ ಪಿಯುಸಿ ಸೈನ್ಸ್ ಮುಗಿಸಿದ ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ long term NEET ತರಬೇತಿಗಾಗಿ ಬುಟ್ಟಿಗೆ ಬೀಳಿಸಿಕೊಳ್ಳಲು ಪ್ರಯತ್ನ ಆರಂಭಿಸಿದೆ!

ಈಗಾಗಲೇ ವಿದ್ಯಾರ್ಥಿಗಳನ್ನು ಬರ ಸೆಳೆದುಕೊಳ್ಳಲಾರಂಭಿಸಿರುವ ದೇಶ್ ನೀಟ್ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್, ಫಿಸಿಕ್ಸ್ ಸೀನಿಯರ್ ಫ್ಯಾಕಲ್ಟಿ ಮಿಸ್ಟರ್ ಅವಿನಾಶ್ ಎ.ಆರ್. ದೊಡ್ಡ ದೊಡ್ಡ ಜಾಹಿರಾತು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ದಾರಿತಪ್ಪಿಸುತ್ತಿದ್ದಾರಾ?

ಶಿವಮೊಗ್ಗದ ಹಿರಿಯ ಅನುಭವಿ ಉಪನ್ಯಾಸಕರ ತಂಡ ನಮ್ಮೂರಿನಲ್ಲೇ ಏಕೆ ವ್ಯವಸ್ಥಿತವಾದ Long term ಕೋಚಿಂಗ್ ಸೆಂಟರ್ ಆರಂಭಿಸಬಾರದೆಂಬ ಆಲೋಚನೆಯಲ್ಲಿ ಹುಟ್ಟಿದ್ದೇ Daksha’s Educational Services Holistic, LLP- ದೇಶ್ ನೀಟ್ ಅಕಾಡೆಮಿ.
ಎರಡೂವರೆ ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಸುಸಜ್ಜಿತವಾದ NEET Coaching Campus ಶಿವಮೊಗ್ಗದ ಹೃದಯ ಭಾಗದಲ್ಲಿರುವ ಗಂಧರ್ವ ನಗರದಲ್ಲಿ ತಲೆ ಎತ್ತಿ ನಿಂತಿದೆ.
– ಹೀಗೆಂದು, ತನ್ನ ಜಾಹಿರಾತಿನಲ್ಲಿ ಅದರ ಎಂ.ಡಿ. ಅವಿನಾಶ್ ಹೇಳಿಕೊಂಡಿದ್ದಾರೆ.

ಆದರೆ, ಈ ಎರಡೂ ವರ್ಷಗಳಿಂದಲೂ ದೇಶ್ ನೀಟ್ ಅಕಾಡೆಮಿ ಸರ್ಕಾರದ ಆದೇಶದ ಪ್ರಕಾರ ಅನುಮತಿಯನ್ನೇ ಪಡೆದಿಲ್ಲ! ಅನುಮತಿ ಕೊಡಿ, ಹಿಂದೆ ಅನುಮತಿ ತಗೋಬೇಕು ಅನ್ನೋ ಮಾಹಿತಿ ಇರಲಿಲ್ಲ. ಈಗ ಅನುಮತಿ ಕೊಡಿ ಅಂತ ದೇಶ್ ನೀಟ್ ಅಕಾಡೆಮಿಯ ಎಂ.ಡಿ.ಅವಿನಾಶ್ ಕೋರಿಕೊಂಡು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ಕ್ಕೆ ದಾಖಲೆಗಳನ್ನೆಲ್ಲ ಜೊತೆಗಿರಿಸಿ ಅನುಮತಿಗಾಗಿ ಅರ್ಜಿ ಹಾಕಿದ್ದರಲ್ಲ…

ಆ ಅರ್ಜಿಯನ್ನು ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ತಿರಸ್ಕರಿಸಿ ಅನುಮತಿ ನೀಡಿಲ್ಲ!

ಆದರೂ, ದೇಶ್ ನೀಟ್ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಅವಿನಾಶ್ ಎ.ಆರ್. ಅದ್ಯಾವ ಧೈರ್ಯದ ಮೇಲೆ ದೇಶ್ ನೀಟ್ ಅಕಾಡೆಮಿಯ ಹೆಸರಲ್ಲಿ ಮತ್ತೆ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದಾರೆ?

ದೇಶ್ ನೀಟ್ ಅಕಾಡೆಮಿಗೆ ಯಾವುದೇ ಅನುಮತಿಯನ್ನು ನೀಡಿಲ್ಲ. ಇಲಾಖೆಯಿಂದ ಅನುಮತಿ ಪಡೆಯದೇ ಕೋಚಿಂಗ್ ಸೆಂಟರ್ ನಡೆಸುವುದು ಕರ್ನಾಟಕ ಟುಟೋರಿಯಲ್ಸ್ ಇನ್ಟಿಟ್ಯೂಷನ್( ನೋಂದಣಿ ಮತ್ತು ನಿಯಂತ್ರಣ) ನಿಯಮಗಳು 2001ನ್ನು ಉಲ್ಲಂಘನೆ ಮಾಡಿದಂತಲ್ಲವೇ ಮಿಸ್ಟರ್ ಎಂ.ಡಿ.ಅವಿನಾಶ್?

ಯಾಕೆ NEET ಆಸೆಯಲ್ಲಿರುವ ವಿದ್ಯಾರ್ಥಿಗಳಿಗೆ ಖೆಡ್ಡಾಕ್ಕೆ ಕೆಡವಲಾಗುತ್ತಿದೆ? ಲಕ್ಷಾಂತರ ರೂ.,ಗಳನ್ನು ನೀಡಿ NEET ಗಾಗಿ ಬರುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಈ ರೀತಿಯ ಚೆಲ್ಲಾಟವೇಕೆ?

ಶಿವಮೊಗ್ಗ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ ದೇಶ್ ನೀಟ್ ಅಕಾಡೆಮಿ ಹಾಗೂ ಅನುಮತಿ ಇಲ್ಲದೇ ಅನಧಿಕೃತವಾಗಿ ನಡೆಸಲು ಹೊರಟಿರುವ ಅದರ ಎಂ.ಡಿ.ಅವಿನಾಶ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವರೇ?

ಸಂಪೂರ್ಣ ದಾಖಲೆಗಳೊಂದಿಗೆ ದೇಶ್ ನೀಟ್ ಅಕಾಡೆಮಿ ವಿರುದ್ಧ ಹೋರಾಟ ಆರಂಭವಾಗಿದೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಎಚ್ಚರವಹಿಸಬೇಕಿದೆ…