ಶಿವಮೊಗ್ಗ ಜಿಲ್ಲೆಯಲ್ಲಿ ಉಪ ಲೋಕಾಯುಕ್ತರಿಗೆ ದಾರಿ ತಪ್ಪಿಸಲಾಗುತ್ತಿದೆಯೇ? ಆ ಅಧಿಕಾರಿಗಳು ಯಾರು? ಯಾಕೆ ದಾರಿ ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ?!

*ಕಂದಾಯ/ ಪಾಲಿಕೆಯ ಜೊತೆ ಉಪ ಲೋಕಾಯುಕ್ತರು ಭ್ರಷ್ಟ ಜನ ಇರೋ ಕಡೇನೂ ಬರಬೇಕಿದೆ…*

*ಶಿವಮೊಗ್ಗಕ್ಕೆ ಉಪ ಲೋಕಾಯುಕ್ತರು ಬಂದಿದ್ದಾರೆ…ಅವರನ್ನು ಭ್ರಷ್ಟಾಚಾರ ಇಲ್ಲದ ಕಡೆಯೇ ಹೆಚ್ಚು ತಿರುಗಿಸಲಾಗುತ್ತಿದೆ…ನೀವು ಹೇಳಿ…ಅವರೆಲ್ಲಿ ಬರಬೇಕು? ಚಾನಲ್ಲು, ಗಾಂಧಿಪಾರ್ಕು ಓಕೆ …ಮುಂದೇನು?*

*ಆರ್ ಟಿ ಓ ಕಚೇರಿ/ ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗ, ಸಬ್ ರಿಜಿಸ್ಟ್ರಾರ್ ಕಚೇರಿ, ಸ್ಮಾರ್ಟ್ ಸಿಟಿ, ಕೆಲವೊಂದು ಪೊಲೀಸ್ ಠಾಣೆಗಳು, ಶಿವಮೊಗ್ಗದ ಬಹುದೊಡ್ಡ ಸಮಸ್ಯೆಗಳಾಗಿರುವ ಮರಳು, ಓಸಿ, ಮಣ್ಣು ಮಾಫಿಯಾ…*