ತನಿಖಾ ವರದಿ ಭಾಗ-1* *ಶಿವಮೊಗ್ಗದ ಎಪಿಎಂಸಿಯ ನೂತನ ವಾಣಿಜ್ಯ ಸಂಕೀರ್ಣದ A ಬ್ಲಾಕ್ ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ- ಹರಾಜಿನಲ್ಲಿ ನಡೆಯಿತಾ ರಿಂಗಾ ರಿಂಗಾ?* *ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಾಸ್ಪದ ರೀತಿಯಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜು…* *ಮರು ಹರಾಜಿಗೆ ನಡೆಯಲಿದೆ ಹೋರಾಟ!*
*ತನಿಖಾ ವರದಿ ಭಾಗ-1*
*ಶಿವಮೊಗ್ಗದ ಎಪಿಎಂಸಿಯ ನೂತನ ವಾಣಿಜ್ಯ ಸಂಕೀರ್ಣದ A ಬ್ಲಾಕ್ ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ- ಹರಾಜಿನಲ್ಲಿ ನಡೆಯಿತಾ ರಿಂಗಾ ರಿಂಗಾ?*
*ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಾಸ್ಪದ ರೀತಿಯಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜು…*
*ಮರು ಹರಾಜಿಗೆ ನಡೆಯಲಿದೆ ಹೋರಾಟ!*
ಶಿವಮೊಗ್ಗದ ಎಪಿಎಂಸಿಯು ಗರಿಷ್ಠ 55 ತಿಂಗಳಿಗೆ ಲೀವ್ ಅಂಡ್ ಲೈಸೆನ್ಸ್ ಶುಲ್ಕದ ಆಧಾರದ ಮೇಲೆ ಹೊಸ ವಾಣಿಜ್ಯ ಸಂಕೀರ್ಣದ A ಬ್ಲಾಕಿನ ಅಷ್ಟೂ ಮಳಿಗೆಗಳಿಗೆ ಟೆಂಡರ್- ಕಂ- ಹರಾಜು ಪ್ರಕ್ರಿಯೆಯನ್ನು ಮಾ.19ರ ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೆ ನಡೆಸಿದೆ.
ಕೆಳ ಅಂತಸ್ತಿನವರೆಗೆ ಪ್ರಾಮಾಣಿಕವಾಗಿ ನಡೆದ ಹರಾಜು ಪ್ರಕ್ರಿಯೆ ಮಧ್ಯಾಹ್ನವಾಗುತ್ತಿದ್ದಂತೆಯೇ ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ- ಹರಾಜು ಪ್ರಕ್ರಿಯೆ ಅನುಮಾನಾಸ್ಪದವಾಗಿ ನಡೆದಿದೆ ಎಂದು ಆರೋಪಿಸಲಾಗುತ್ತಿದೆ.
ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಕೆಲವು ವಾಣಿಜ್ಯ ವ್ಯವಹಾರ ಮಾಡುವ ಕಚೇರಿಗಳು ಇಲ್ಲಿ ತೆರೆಯಲ್ಪಡುತ್ತಿವೆ ಎಂದು ಗೊತ್ತಾದ ಕೂಡಲೇ ಶಿವಮೊಗ್ಗ ಎಪಿಎಂಸಿಯ A ಬ್ಲಾಕಿನ ವಾಣಿಜ್ಯ ಮಳಿಗೆಗೆ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿಹೋಯ್ತು.
ನೆಲ ಅಂತಸ್ತಿನ ಮಳಿಗೆಗಳು ಆಕಾಶ ಮುಟ್ಟುವ ದರಗಳಿಗೆ ಟೆಂಡರ್ ಗೆ ಒಳಗಾದವು. ಇನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಾಸ್ಪದ ರೀತಿಯಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜಾಗಿರುವುದು ಎಪಿಎಂಸಿ ಅಧಿಕಾರಿಗಳ ಪ್ರಾಮಾಣಿಕತೆ ಮೇಲೆ ಬೆರಳು ತೋರಿಸುತ್ತಿವೆ.
ಸಬ್ ರಿಜಿಸ್ಟ್ರಾರ್ ಕಚೇರಿಗೇನೇ ಎರಡು ಲಕ್ಷಕ್ಕಿಂತ ಹೆಚ್ಚಿನ ದರಕ್ಕೆ ಮಳಿಗೆಗಳಾದ 108,109 ನ್ನು ನೀಡಿದ್ದಾರೆಂದು ಹೇಳಲಾಗುತ್ತಿದೆ. ಇದರ ಅಕ್ಕಪಕ್ಕದಲ್ಲೇ ಬರುವ 101, 103, 104,106, 107 ಸಂಖ್ಯೆ ಮಳಿಗೆಗಳು ಸಾವಿರದ ಬೆಲೆಯಲ್ಲಿ ಅಂದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಟೆಂಡರ್- ಕಂ- ಹರಾಜಾಗಿವೆ!
ಈ ಮಳಿಗೆಗಳ ಹರಾಜು ವಿಚಾರದಲ್ಲಿ ಎಪಿಎಂಸಿಯ ಕೆಲ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ಇದ್ದು, ಮೊದಲ ಮಹಡಿಯ ಈ 5 ಮಳಿಗೆಗಳ ಮರು ಹರಾಜು ಕರೆಯಬೇಕು. ಇಲ್ಲದಿದ್ದರೆ, ಸಾರ್ವಜನಿಕರು ದೊಡ್ಡ ಹೋರಾಟವನ್ನು ಎಪಿಎಂಸಿ ಅಧಿಕಾರಿಗಳ ವಿರುದ್ಧ ಮಾಡುವುದು ಅನಿವಾರ್ಯವಾಗುವುದು.