ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಪತ್ರಿಕಾಗೋಷ್ಠಿ* *ಎಲ್ಲಾ ಅಧ್ಯಕ್ಷರ ಕಾಲದ ಕಾಮಗಾರಿಗಳ ತನಿಖೆ ನಡೆಯಲಿ* *ನನ್ನ ಅವಧಿಯಲ್ಲಿ ಪಾರ್ಕ್ ಗಳ ಅಭಿವೃದ್ಧಿಯಷ್ಟೇ* *ಭ್ರಷ್ಟಾಚಾರ ಮಾಡಿದ್ರೆ ಶಿಕ್ಷೆ ಅನುಭವಿಸ್ತಾರೆ*
*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಪತ್ರಿಕಾಗೋಷ್ಠಿ*
*ಎಲ್ಲಾ ಅಧ್ಯಕ್ಷರ ಕಾಲದ ಕಾಮಗಾರಿಗಳ ತನಿಖೆ ನಡೆಯಲಿ*
*ನನ್ನ ಅವಧಿಯಲ್ಲಿ ಪಾರ್ಕ್ ಗಳ ಅಭಿವೃದ್ಧಿಯಷ್ಟೇ*
*ಭ್ರಷ್ಟಾಚಾರ ಮಾಡಿದ್ರೆ ಶಿಕ್ಷೆ ಅನುಭವಿಸ್ತಾರೆ*

ಸೂಡಾದಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಎಲ್ಲಾ ಅಧ್ಯಕ್ಷರ ಕಾಲದ ಕಾಮಗಾರಿಗಳ ತನಿಖೆ ನಡೆಯಲಿ ಎಂದು ಸವಾಲು ಹಾಕಿದರು.
2021ರಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಆರೋಪಗಳು ಬಂದಿವೆ. ಆ ಪ್ರಕರಣ ಲೋಕಾಯುಕ್ತದಲ್ಲಿದೆ. ಯಾರು ಬೇಕಾದರೂ ತನಿಖೆ ಮಾಡಬಹುದು. ನನ್ನ ಅವಧಿಯಲ್ಲಿ ಆದ ಭ್ರಷ್ಟಾಚಾರ ಇದಲ್ಲ. ನನ್ನ ಅವಧಿಯಲ್ಲಿ ಉದ್ಯಾನವನಗಳ ಅಭಿವೃದ್ಧಿ ಆಗುತ್ತಿದೆ ಎಂದರು.
ತಪ್ಪಿತಸ್ಥರು ನನ್ ಮಾವ ಆಗಿದ್ರೂ ತಪ್ಪೇ. ತನಿಖೆಯಿಂದ ನಮ್ಮ ಪ್ರಾಧಿಕಾರಕ್ಕೆ ಅನುಕೂಲವಾಗಬೇಕಷ್ಟೇ. ತಪ್ಪಿತಸ್ಥರಾಗಿದ್ರೆ, ಹಣ ಅಪಬಳಕೆ ಆಗಿದ್ರೆ ಶಿಕ್ಷೆ ಆಗಲಿ…ತಪ್ಪಿತಸ್ಥರ ವಿರುದ್ಧ ಕ್ರಮ ಆಗುವುದು ಮುಖ್ಯ ಎಂದರು.
##################
[03/02, 11:30 am] ಶಿ.ಜು.ಪಾಶ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಮೃತ್ ಸಿಟಿ ಯೋಜನೆಯಡಿ GIS ಆಧಾರಿತ ಮಹಾಯೋಜನೆ ಪರಿಷ್ಕೃತ-2 2041 ರ ತಾತ್ಕಾಲಿಕ ಅನುಮೋದನೆಗೆ ಆಯುಕ್ತಾಲಯಕ್ಕೆ ಸಲ್ಲಿಸಲಾಗಿದೆ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.
ವಿವಿಧ ಅಭಿವೃದ್ಧಿ ಕೆಲಸಗಳ ಕುರಿತು ಮಾತನಾಡಿದ ಅವರು,
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲು ಉದ್ದೇಶಿಸಿರುವ ಪ್ರಾಧಿಕಾರದ ಮಾಲೀಕತ್ವದ ಶಿವಮೊಗ್ಗ ತಾಲ್ಲೂಕು ನಿಧಿಗೆ ಗ್ರಾಮದ ಸ.ನಂ.25 ರ ವಿಸ್ತೀರ್ಣ 3ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆಯ ಅಭಿವೃದ್ಧಿ ಕಾಮಗಾರಿಯ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಸಲ್ಲಿಸಲಾಗಿರುತ್ತದೆ ಎಂದರು.
ಶಿವಮೊಗ್ಗ ತಾಲ್ಲೂಕು ಕಸಬಾ ಹೋಬಳಿ ಗೋಪಿಶೆಟ್ಟಿ ಗ್ರಾಮದ ವಿವಿಧ ಸ.ನಂ.ಗಳಲ್ಲಿ ಒಟ್ಟು 30ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸುವ ಸಂಬಂಧ ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ಸಂಬಂಧ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಶಿವಮೊಗ್ಗ ತಾಲ್ಲೂಕು ನಿಧಿಗೆ ಹೋಬಳಿ ಊರಗಡೂರು ಗ್ರಾಮದ ಉದ್ದೇಶಿತ ವಸತಿ ಬಡಾವಣೆಯಲ್ಲಿ ಸುಮಾರು 4ಎಕರೆ ವಿಸ್ತೀರ್ಣದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಸಂಬಂಧ ಪೂರ್ವಾನುಮತಿಗೆ ಆಯುಕ್ತಾಲಯಕ್ಕೆ ಸಲ್ಲಿಸಲಾಗಿದೆ.
ಭದ್ರಾವತಿ ತಾಲ್ಲೂಕು ಕಸಬಾ ಗ್ರಾಮದ ಸ.ನಂ.118/1 ಹಾಗೂ ಇತರೆ ಒಟ್ಟು 32ಎ-21ಗುಂಟೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸುವ ಸಂಬಂಧ ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ಸಂಬಂಧ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಸಲ್ಲಿಸಲಾಗಿದೆ.
ಅಂದಾಜುಪಟ್ಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಆಯುಕ್ತಾಲಯಕ್ಕೆ ಸಲ್ಲಿಸಲಾಗಿರುವ ವಿವರವನ್ನು ಹಂಚಿಕೊಂಡ ಅವರು,
ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ಶಿವಮೊಗ್ಗ ತಾಲ್ಲೂಕು ದೇವಕಾತಿಕೊಪ್ಪ ಗ್ರಾಮದ ಸ.ನಂ.47 ರಲ್ಲಿರುವ 22ಎ-30ಗು ವಿಸ್ತೀರ್ಣದ ಕೆರೆಯನ್ನು ಅಭಿವೃದ್ಧಿಪಡಿಸುವುದು. (ಶಿವಮೊಗ್ಗ-ರಾಮನಗರ ಮುಖ್ಯ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ) ವಿಸ್ತೀರ್ಣದ ಕೆರೆಯನ್ನು ಅಭಿವೃದ್ಧಿಪಡಿಸುವುದು.
ಶಿವಮೊಗ್ಗ ತಾಲ್ಲೂಕು ಚನ್ನಮುಂಭಾಪುರ ಗ್ರಾಮದ ಸ.ನಂ.11 ರಲ್ಲಿರುವ 10ಎ-23ಗು| ವಿಸ್ತೀರ್ಣದ ಕೆರೆಯನ್ನು ಅಭಿವೃದ್ಧಿಪಡಿಸುವುದು. (ಅಕ್ಷರಗ್ರೂಪ್ ಆಫ್ ಇನ್ಸಿಟ್ಯೂಷನ್ ಮತ್ತು ಗುಳ್ಳಮ್ಮ ದೇವಸ್ಥಾನದ ಹತ್ತಿರ).
ಶಿವಮೊಗ್ಗ ತಾಲ್ಲೂಕು ಬೊಮ್ಮನಕಟ್ಟೆ ಗ್ರಾಮದ ಸ.ನಂ.114 ರಲ್ಲಿರುವ 24ಎ-14ಗು ವಿಸ್ತೀರ್ಣದ ಕೆರೆಯನ್ನು ಅಭಿವೃದ್ಧಿಪಡಿಸುವುದು.
ಶಿವಮೊಗ್ಗ ತಾಲ್ಲೂಕು ಆಲ್ಕೊಳ ಗ್ರಾಮದ ಸ.ನಂ.10ರ ವಿಸ್ತೀರ್ಣದ 01ಎ-02ಗುಂಟೆ ಕೆರೆಯ ಮುಂದುವರೆದ ಕಾಮಗಾರಿ.
ಭದ್ರಾವತಿ ತಾಲ್ಲೂಕು ಹೊಸೂರು ಸಿದ್ದಾಪುರ ಗ್ರಾಮದ (ತಾಂಡ) ಸ.ನಂ.110ರ 24ಎ-19ಗುಂಟೆ ಕೆರೆ ಅಭಿವೃದ್ಧಿಪಡಿಸುವುದು ನಡೆದಿದೆ ಎಂದು ಸುಂದರೇಶ್ ಹೇಳಿದರು.


