ಇ- ಸ್ವತ್ತು ಹೆಸರಲ್ಲಿ ಉಪ ಆಯುಕ್ತ(ಆಡಳಿತ) ತುಷಾರ್ ಎಡವಟ್ಟು!**ಆಯುಕ್ತೆ ಅನುಮೋದನೆ ಕೊಟ್ಟಿದ್ದು ಸರೀನಾ?**ಸರ್ಕಾರಿ ರಜೆ ಇದ್ದರೂ ಇ- ಸ್ವತ್ತು ಹೆಸರಲ್ಲಿ ರೆವಿನ್ಯೂ ವಿಭಾಗ ಆ್ಯಕ್ಟೀವ್!**ಆ 12 ಜನ ಮಹಿಳಾ ಕಂಪ್ಯೂಟರ್ ಆಪರೇಟರ್ ಗಳನ್ನೇ ಆಯ್ಕೆ ಮಾಡಿಕೊಂಡಿದ್ಯಾಕೆ ಅಧಿಕಾರಿ ತುಷಾರ್?**ಪತ್ರಕರ್ತರ ಮುಂದೆಯೇ ನಡೆಸುವರಾ ಇ- ಸ್ವತ್ತು ಕಾರ್ಯ?!*

*ಇ- ಸ್ವತ್ತು ಹೆಸರಲ್ಲಿ ಉಪ ಆಯುಕ್ತ(ಆಡಳಿತ) ತುಷಾರ್ ಎಡವಟ್ಟು!*

*ಆಯುಕ್ತೆ ಅನುಮೋದನೆ ಕೊಟ್ಟಿದ್ದು ಸರೀನಾ?*

*ಸರ್ಕಾರಿ ರಜೆ ಇದ್ದರೂ ಇ- ಸ್ವತ್ತು ಹೆಸರಲ್ಲಿ ರೆವಿನ್ಯೂ ವಿಭಾಗ ಆ್ಯಕ್ಟೀವ್!*

*ಆ 12 ಜನ ಮಹಿಳಾ ಕಂಪ್ಯೂಟರ್ ಆಪರೇಟರ್ ಗಳನ್ನೇ ಆಯ್ಕೆ ಮಾಡಿಕೊಂಡಿದ್ಯಾಕೆ ಅಧಿಕಾರಿ ತುಷಾರ್?*

*ಪತ್ರಕರ್ತರ ಮುಂದೆಯೇ ನಡೆಸುವರಾ ಇ- ಸ್ವತ್ತು ಕಾರ್ಯ?!*

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಗೆದಷ್ಟು ಹಗರಣಗಳು ಬಯಲಾಗುತ್ತಿವೆ. ಇ- ಸ್ವತ್ತಿಗೆ ಸಂಬಂಧಿಸಿದಂತೆ ಲಂಚಾವತಾರ ಮಿತಿ‌ ಮೀರುತ್ತಿದೆ ಎಂಬ ಗಂಭೀರ ಆರೋಪಗಳಿದ್ದರೂ, ಜನವರಿ 11ರ ಶನಿವಾರ ಸರ್ಕಾರಿ ರಜೆ ಇದ್ದರೂ ಶಿವಮೊಗ್ಗ ಮಹಾನಗರ ಪಾಲಿಕೆಯ ಲಂಚಾವತಾರದ ಗೂಡಾಗಿರುವ ರೆವಿನ್ಯೂ ವಿಭಾಗ ತೆರೆದೇ ಇರುತ್ತೆ!

ಪಾಲಿಕೆಯ ಉಪ ಆಯುಕ್ತ(ಆಡಳಿತ) ತುಷಾರ್ ರವರು ಆಯುಕ್ತರ ಅನುಮೋದನೆ ಮೇರೆಗೆ ಎಂದು ಒಕ್ಕಣೆ ಬರೆದು ರಜೆ ದಿನವಾದ ಶನಿವಾರದಂದು ಇ- ಸ್ವತ್ತಿನ ಕೆಲಸ ಯಾಕೆ ಮಾಡಿಸುತ್ತಿದ್ದಾರೋ?

ಒಟ್ಟು 12 ಜನ ರೆವಿನ್ಯೂ ವಿಭಾಗದ ಹೆಣ್ಣು ಮಕ್ಕಳು ಕಂಪ್ಯೂಟರ್ ಆಪರೇಟರ್ ಗಳನ್ನೇ (ಪೂರ್ಣ ಪಟ್ಟಿಯಲ್ಲಿ ಇರುವ 12 ಜನರಲ್ಲಿ 12 ಜನರೂ ಹೆಣ್ಣು ಮಕ್ಕಳು)(ಪುರುಷ ಕಂಪ್ಯೂಟರ್ ಆಪರೇಟರ್ ಗಳಿಲ್ಲವೇ?- ಪ್ರಶ್ನೆ ಹಾಗೇ ಇಟ್ಟುಕೊಳ್ಳಿ…ಅದರ ಕಥೆ ಬೇರೆ ಇದೆ) ಗುರಿಯಾಗಿಸಿಕೊಂಡು ಈ ಇ- ಸ್ವತ್ತು ಕಾರ್ಯಕ್ರಮ ಯಾಕೆ ಹೆಣೆಯಲಾಗಿದೆ? ರಜೆ ದಿನವೂ ಈ ಹೆಣ್ಣು ಮಕ್ಕಳು ತುಷಾರ್ ರವರ ಆದೇಶದ ಮೇರೆಗೆ ಪಾಲಿಕೆಯ ರೆವಿನ್ಯೂ ವಿಭಾಗಕ್ಕೆ ಹಾಜರಾಗಬೇಕಾದ ಅನಿವಾರ್ಯತೆ ಬಂದಿದೆ. ತುಷಾರ್ ರವರು ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ ಅಂತ ಬೇರೆ ಆ ಆದೇಶ ಪತ್ರದಲ್ಲಿ ದಾಖಲಿಸಿರುವುದು ಸಾವಿರ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಇ- ಸ್ವತ್ತು ಹೆಸರಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಲಫಡಾಗಳೇ ನೂರಾರಿವೆ. ಈ ನಡುವೆ ಸರ್ಕಾರಿ ರಜೆ ದಿನವೂ ಇ- ಸ್ವತ್ತಿನ ಕಾರ್ಯಕ್ಕೆ ಈ ರೀತಿ ಪಟ್ಟಿ ಬಿಡುಗಡೆ ಮಾಡಿರುವುದು, ಈ ಪಟ್ಟಿಯಲ್ಲಿ ಬರೀ ಹೆಣ್ಣು ಮಕ್ಕಳೇ ಇರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ…

– *ಶಿ.ಜು.ಪಾಶ*
8050112067