ಜಾನುವಾರು ರೋಗಗಳಿಗೆ ಮನೆ ಮದ್ದು ಮತ್ತು ವೈಜ್ಞಾನಿಕ ಹೈನುಗಾರಿಕೆ ನಿರ್ವಹಣಾ ಕ್ರಮಗಳ ಕುರಿತು ಕೃಷಿ ವಿದ್ಯಾರ್ಥಿಗಳಿಂದ ಆಂದೋಲನ*
*ಜಾನುವಾರು ರೋಗಗಳಿಗೆ ಮನೆ ಮದ್ದು ಮತ್ತು ವೈಜ್ಞಾನಿಕ ಹೈನುಗಾರಿಕೆ ನಿರ್ವಹಣಾ ಕ್ರಮಗಳ ಕುರಿತು ಕೃಷಿ ವಿದ್ಯಾರ್ಥಿಗಳಿಂದ ಆಂದೋಲನ*
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ . ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 2024-25 ಹಳೇಮುಗಳಗೆರೆ ಗ್ರಾಮ. ಇಂದು ಗ್ರಾಮದಲ್ಲಿ ಜಾನುವಾರು ರೋಗಗಳಿಗೆ ಮನೆ ಮದ್ದು ಮತ್ತು ವೈಜ್ಞಾನಿಕ ಹೈನುಗಾರಿಕೆ ವಿಷಯದ ಕುರಿತು ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪಶು ವೈದ್ಯಾಧಿಕಾರಿ ಡಾ||ವಿಲಾಸ್ ಜಾಥಾಗೆ ಚಾಲನೆ ನೀಡಿದರು ನಂತರ ಕಾರ್ಯಕ್ರಮದಲ್ಲಿ
ಮಾತನಾಡಿದ ಅವರು
ನಮ್ಮ ಪರಿಸರದಲ್ಲೇ ಇರುವ ಗಿಡಮೂಲಿಕೆಗಳು ಹಾಗೂ ಹಲವು ನೈಸರ್ಗಿಕ ಪದ್ಧತಿಗಳ ಬಳಕೆಯಿಂದ ಯಶಸ್ವಿಯಾಗಿ ಅಂತಹಾ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೇ ಇಂಗ್ಲಿಷ್ ಔಷಧಿಗಳಿಂದ ವಾಸಿಯಾಗದ ಹಲವು ರೋಗಗಳು ಜನಪದ ಪಶುವೈದ್ಯದಿಂದ ವಾಸಿಯಾಗಿದೆ. ಹೊಟ್ಟೆ ಉಬ್ಬರ, ಉಣ್ಣೆ ಉಪಟಳಕ್ಕೆ, ಬೇದಿ, ಕೆಚ್ಚಲು ಬಾವು, ಅಜೀರ್ಣ, ಕೆಮ್ಮು, ಗಾಯಗಳಿಗೆ ಹುಳು ಬಿದ್ದಾಗ, ಇನ್ನು ಹಲವು ರೋಗಗಳಿಗೆ ಮನೆ ಮದ್ದುಗಳು ಮತ್ತು ಔಷಧಿ ಸಸ್ಯಗಳ ಸಂಕ್ಷೀಪ್ತ ಮಾಹಿತಿ ರೈತರಿಗೆ ವಿವರಿಸಿದರು ಮತ್ತು ಕೆಲವು ಔಷಧಿ ಸಸ್ಯಗಳನ್ನು ತೋರಿಸಿ ಅವುಗಳ ಮಹತ್ವ ತಿಳಿಸಿಕೊಟ್ಟರು. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ರೈತರ ಉಪಯೋಗವಾಗಲು NDDB ಅಂತರ್ಜಾಲದಲ್ಲಿ ಮಾಹಿತಿ ನೀಡಿದ್ದಾರೆ ಮತ್ತು ಯು ಟ್ಯೂಬ್ ಚಾನಲ್ ನಲ್ಲಿ ಮದ್ದು ತಯಾರಿಸುವ ವಿಧಾನವನ್ನು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿ ತಿಳಿಸಿದ್ದಾರೆ. ಇದನ್ನು ನೋಡಿ ಎಂದು ರೈತರಿಗೆ ಮಾಹಿತಿ ನೀಡಿದರು. ಊರಿನ ಗ್ರಾಮಸ್ಥರು ಮತ್ತು ಅನೇಕ ರೈತರು ಪಾಲ್ಗೊಂಡು ತಮ್ಮ ಪೂರ್ವಜರು ಮನೆ ಮದ್ದುಗಳನ್ನು ತಯಾರಿಸುತ್ತಿದ್ದರು ನಾವು ಮರೆತಿದ್ದೇವೆ ಎಂದರು. ಜಾಥಾದಲ್ಲಿ
“ದೇಶದ ಬೆನ್ನೆಲುಬು ರೈತ ರೈತನ ಬೆನ್ನೆಲುಬು ಹೈನುಗಾರಿಕೆ ”
“ಹಾಲು ಉತ್ಪಾದನೆ ಹೆಚ್ಚಿಸಿ ರೈತನ ಆರ್ಥಿಕತೆ ವೃದ್ಧಿಸಿ”
“ತಪ್ಪದೆ ಲಸಿಕೆ ಹಾಕಿಸಿ ”
“ಆಕಳು ಒಂದನ್ನು ಸಾಕಿ ಅದು ಮನೆಯವರನ್ನೆಲ್ಲ ಸಾಕುತ್ತದೆ” ಎಂಬ ಘೋಷ ವಾಕ್ಯಗಳು ಕೇಳಿ ಬಂದವು.