ಮಹಿಳೆಯರ ಆರೋಗ್ಯದ ಕಾಳಜಿ: ತಜ್ಞರಿಂದ ಮಾರ್ಗದರ್ಶನ ಮತ್ತು ಉಪಾಯಗಳು*

*ಮಹಿಳೆಯರ ಆರೋಗ್ಯದ ಕಾಳಜಿ: ತಜ್ಞರಿಂದ ಮಾರ್ಗದರ್ಶನ ಮತ್ತು ಉಪಾಯಗಳು*

ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಗುರುವಾರದಂದು  *’ಸಧೃಡ ಸ್ತ್ರೀ’* ಎಂಬ ಶೀರ್ಷಿಕೆಯ ಆರೋಗ್ಯ ಅಭಿಯಾನ ಆಯೋಜಿಸಿದ್ದು ಕಾರ್ಯಕ್ರಮಕ್ಕೆ ಡಾ.ಚಂದುಶ್ರೀ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಡಾ.ಶಶಿಕಲಾ ಸಹಾಯಕ ಪ್ರಾಧ್ಯಪಕಿ ಕೃಷಿ ವಿಸ್ತರಣಾ ವಿಭಾಗ ಅವರು ಆಗಮಿಸಿದ್ದರು.

ಅಭಿಯಾನವನ್ನು ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದರು.
ಡಾ. ಶಶಿಕಲಾ ಅವರು ಮಾತನಾಡಿ, “ಮಹಿಳೆಯರು ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಗಮನ ಹರಿಸಬೇಕು. ಕುಟುಂಬ ಮತ್ತು ಸಮಾಜದಲ್ಲಿ ಅವರ ಪಾತ್ರ ಬಹಳ ಪ್ರಮುಖವಾಗಿದೆ” ಎಂದು ತಿಳಿಸಿದರು.

ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರು ಡಾ. ಚಂದುಶ್ರೀ ಅವರು ಹೆರಿಗೆ ಮತ್ತು ಕಿಶೋರಾವಸ್ಥೆಯಲ್ಲಿ ಆರೋಗ್ಯದ ಮೇಲಿನ ಗಮನದ ಮಹತ್ವವನ್ನು ವಿವರಿಸಿದರು. “ಮಹಿಳೆಯರು ಈ ಅವಧಿಯಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು ಮತ್ತು ಅಗತ್ಯವಾದ ಮಾತ್ರೆ( folicacid and calcium)ಗಳನ್ನುಬಳಸಬೇಕು. ಸ್ವಚ್ಛತೆಯ ಮೇಲೂ ಆದ್ಯತೆ ನೀಡಬೇಕು” ಎಂದು ಸಲಹೆ ನೀಡಿದರು.ಅವರು ಇನ್ನೂ ಮುಂದುವರಿದು, ಕ್ಯಾನ್ಸರ್ ನಿರೋಧಕ ಲಸಿಕೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. “ಈ ಲಸಿಕೆಗಳು ಮಹಿಳೆಯ ಆರೋಗ್ಯವನ್ನು ರಕ್ಷಿಸಲು ಅನಿವಾರ್ಯವಾಗಿವೆ” ಎಂದು ಅವರು ಹೇಳಿದರು.ಈ ಅಭಿಯಾನದ ಭಾಗವಾಗಿ, ಗರ್ಭಧಾರಣೆಗೆ ಸಂಬಂಧಿಸಿದ ಸಲಹೆಗಳು, ಮಾಸಿಕ ಚಕ್ರದ ಸಮಸ್ಯೆಗಳನ್ನು ಪರಿಹರಿಸುವ ಸಲಹೆಗಳನ್ನು ನೀಡಲಿದೆ. ಅವರೇನು ಸರಿಯಾದ ಆಹಾರ ತೆಗೆದುಕೊಳ್ಳಬೇಕು, ಶಾರೀರಿಕ ಚಟುವಟಿಕೆ ಹಾಗೂ ಮಾನಸಿಕ ಆರೈಕೆ ಮಾಡುವುದರ ಬಗ್ಗೆ ಮಾಹಿತಿ ನೀಡಿದರು.

ಹಾಗೂ ಋತುಬಂಧದ (menopause) ಸಮಯದಲ್ಲಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯದತ್ತ ಹೆಚ್ಚಿನ ಗಮನಹರಿಸಬೇಕು. ಈ ಅವಧಿಯಲ್ಲಿ ಆಹಾರ,ವಿಶ್ರಾಂತಿ ಮತ್ತು ಆರೋಗ್ಯಪೂರ್ಣ ಜೀವನಶೈಲಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಯುವತಿಯರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿದರು.