*ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಈಶ್ವರಪ್ಪನವರ ಸೇವೆ ಸ್ಮರಿಸಿದ ತರಳಬಾಳು ಜಗದ್ಗುರುಗಳು*
*ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಈಶ್ವರಪ್ಪನವರ ಸೇವೆ ಸ್ಮರಿಸಿದ ತರಳಬಾಳು ಜಗದ್ಗುರುಗಳು*
ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ-2026 ರಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪನವರನ್ನು ಶ್ರೀ ತರಳಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಿಶೇಷವಾಗಿ ಸ್ಮರಿಸಿಕೊಂಡರು.
ಈ ಕುರಿತು ಮಾತನಾಡಿದ ಅವರು, ಈ ಹಿಂದೆ ದಾವಣಗೆರೆ ಭಾಗದ ರೈತರು ಮತ್ತು ಹಲವು ಮಠಾಧೀಶರು ನೀರಿಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿರುವಾಗ ಸ್ಥಳಕ್ಕೆ ಭೇಟಿ ನೀಡಿದ ಈಶ್ವರಪ್ಪನವರು ರೈತರ ಸಮಸ್ಯೆಯನ್ನು ಬಗೆಹರಿಸುವುದಾಗಿ ಲಿಖಿತ ಪತ್ರ ಬರೆದು ಕೊಡುವುದಾಗಿ ವಾಗ್ಧಾನ ಮಾಡಿದ್ದರು.
ಆಗ ನಾವು ಲಿಖಿತ ಪತ್ರದ ಅವಶ್ಯಕತೆಯಿಲ್ಲ. ನೀವು ಈ ನೀರಾವರಿ ಯೋಜನೆಯನ್ನು ಕಾರ್ಯರೂಪಗೊಳಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅದರ ಪತ್ರದ ಪ್ರತಿಯನ್ನು ನಮಗೆ ನೀಡಿದರೆ ಸಾಕು ಎಂದು ಹೇಳಿದ್ದೆವು. ಅದರಂತೆ ಈಶ್ವರಪ್ಪನವರು ಕೊಟ್ಟ ಮಾತಿನಂತೆ ನೀರಾವರಿ ಯೋಜನೆಯನ್ನು ಸಚಿವ ಸಂಪುಟದಲ್ಲಿಟ್ಟು, ಆಗಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಮೇಲೆ ಒತ್ತಡ ತಂದು ಮಂಜೂರು ಮಾಡಿಸಿದ್ದರು ಎಂದು ಶ್ರೀಗಳು ಈಶ್ವರಪ್ಪನವರ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
ಈ ಹಿಂದೆಯೂ ಸಹಾ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಶ್ವರಪ್ಪನವರನ್ನು ಶ್ರೀಗಳು ಈ ಭಾಗದ “ಆಧುನಿಕ ಭಗೀರಥ” ಎಂದು ಕರೆದಿದ್ದನ್ನು ಸ್ಮರಿಸಿಕೊಳ್ಳಬಹುದು.


