ಭದ್ರಾವತಿ; 4ಲಕ್ಷ ರೂ.,ಗಳ ಮೌಲ್ಯದ ಗಾಂಜಾ ವಶ- ಓರ್ವನ ಬಂಧನ*

*ಭದ್ರಾವತಿ; 4ಲಕ್ಷ ರೂ.,ಗಳ ಮೌಲ್ಯದ ಗಾಂಜಾ ವಶ- ಓರ್ವನ ಬಂಧನ*

ಬೊಮ್ಮನಕಟ್ಟೆ ಗ್ರಾಮದಲ್ಲಿ ಮಾದಕ ವಸ್ತು ಗಾಂಜಾವನ್ನು ಹುಲ್ಲಿನ ಬಣವೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ, ಗಾಂಜಾ ವಶಪಡಿಸಿಕೊಂಡಿದ್ದಾರೆ.

ಗಾಂಜಾವನ್ನು ಹುಲ್ಲಿನ‌ ಬಣವೆಯಲ್ಲಿಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಭದ್ರಾವತಿಯ ಪಿಎಸ್ಐ ಪೇಪರ್ ಟೌನ್ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ದಾಳಿ ನಡೆಸಿ, ಆರೋಪಿ ಅಬ್ದುಲ್ ಖದ್ದೂಸ್ ನನ್ನು ದಸ್ತಗಿರಿ ಮಾಡಿದ್ದಾರೆ.

*ಆರೋಪಿಯಿಂದ ಅಂದಾಜು ಮೌಲ್ಯ 4,03,000/- ರೂ.,ಗಳ 8 ಕೆಜಿ 60 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿರುತ್ತಾರೆ.*

ಆರೋಪಿ ವಿರುದ್ಧ ಠಾಣಾ *ಅಪರಾಧ ಸಂಖ್ಯೆ 0016/2026 ಕಲಂ – 8(c),20(b) (ii) B) NDPS ಕಾಯ್ದೆ ರೀತ್ಯಾ* ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.