ಕೆ.ಎಸ್. ಈಶ್ವರಪ್ಪ ಜೊತೆ ಮಾತುಕತೆ; ಮೋದಿ- ಶಾ ಫೋನ್ ಮಾಡಿ ಹೇಳಿದ್ರೂ ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ…ಹಿಂದೆ ಸರಿಯೋ ಪ್ರಶ್ನೆ ಇಲ್ವೇ ಇಲ್ಲ…ಯಡಿಯೂರಪ್ಪ ಎಷ್ಟು ಶಕ್ತಿವಂತ ಅಂತ ತೋರ್ಸೇ ತೋರಿಸ್ತೀನಿ
ಕೆ.ಎಸ್. ಈಶ್ವರಪ್ಪ ಜೊತೆ ಮಾತುಕತೆ;
ಮೋದಿ- ಶಾ ಫೋನ್ ಮಾಡಿ ಹೇಳಿದ್ರೂ ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ…ಹಿಂದೆ ಸರಿಯೋ ಪ್ರಶ್ನೆ ಇಲ್ವೇ ಇಲ್ಲ…ಯಡಿಯೂರಪ್ಪ ಎಷ್ಟು ಶಕ್ತಿವಂತ ಅಂತ ತೋರ್ಸೇ ತೋರಿಸ್ತೀನಿ
ಯಡಿಯೂರಪ್ಪ ಇಲ್ಲಾಂದ್ರೆ ಲಿಂಗಾಯತರ ಓಟ್ ಬರಲ್ಲ, ಯಡಿಯೂರಪ್ಪ ಇಲ್ಲಾಂದ್ರೆ ಪಕ್ಷ ಬೆಳೆಯೋಲ್ಲ ಅಂತ ಭ್ರಮೆ ಇದೆ.
ನಾನು ಕುಟುಂಬ ರಾಜಕಾರಣ ಮಾಡ್ತಿಲ್ಲ. ಒಂದು ಕುಟುಂಬದಿಂದ ಒಬ್ಬ ವ್ಯಕ್ತಿ ರಾಜಕಾರಣ ಮಾಡಲಿ ಎಂದು ಮೋದಿ ಹೇಳುತ್ತಾರೆ. ಅದರಂತೆ ಮಗನಿಗೆ ಟಿಕೇಟ್ ಕೇಳಿದ್ದೀನಿ. ನಾನೇನೂ ಅಲ್ವಲ್ಲ ಈಗ…
ರಾಜ್ಯಾಧ್ಯಕ್ಷ ತನ್ನ ಮಗನೇ ಆಗಬೇಕೆಂದು ಆರು ತಿಂಗಳ ಕಾಲ ಖಾಲಿ ಇರೋ ಹಾಗೆ ಯಡಿಯೂರಪ್ಪ ನೋಡಿಕೊಂಡರು. ರಾಜ್ಯಾಧ್ಯಕ್ಷ ಮಾಡೋಕೆ ಬೇರೆಯವರಿರಲಿಲ್ವಾ?
ಹೈಕಮಾಂಡ್ ಯಡಿಯೂರಪ್ಪರನ್ನ ನಂಬಿಕೊಂಡಿದೆ. ಅದನ್ನು ಅವರು ಅಪಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲಿಂಗಾಯತರಿಗೂ ನ್ಯಾಯ ಸಿಗುತ್ತಿಲ್ಲ. ತಮ್ಮ ಕುಟುಂಬ, ತಮ್ಮದೇ ಸ್ವಾರ್ಥ, ತಮ್ಮದೇ ಕಪಿಮುಷ್ಠಿ ಅಂತ ಯಡಿಯೂರಪ್ಪ ಇದಾರೆ. ಇದನ್ನು ವಿರೋಧಿಸಿ ನಿಲ್ತಿದೀನಿ.
ಕೇಂದ್ರ ನಾಯಕರಿಗೂ ಅರ್ಥವಾಗಬೇಕು. ಹಿಂದುತ್ವಕ್ಕೆ ತೊಂದರೆ ಆಗ್ತಿದೆ ಅಂತ ನೂರಾರು ಜನ ಫೋನ್ ಮಾಡ್ತಿದಾರೆ. ಹಿಂದಕ್ಕೆ ಸರೀಬೇಡಿ ಅಂತಿದ್ದಾರೆ. ಸ್ಪರ್ಧೇ ಮಾಡೋದೇ…
ಮಗನಿಗೆ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನಿದೆ. ಹಾವೇರಿ ಕೊಟ್ಟಿದ್ದರೆ ಉತ್ತರ ಕರ್ನಾಟಕಕ್ಕೆ ಅನುಕೂಲವಾಗೋದು. ನನ್ನಪ್ಪ ಎಂಎಲ್ಎ ಆಗಿರೋತನಕ ತಾನು ಎಂಪಿ, ಎಂಎಲ್ ಎ ಸ್ಥಾನಕ್ಕೆ ನಿಲ್ಲೋಲ್ಲ ಅಂತಾನೇ ಕಾಂತೇಶನೂ ನಿರ್ಧರಿಸಿದ್ದ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಅಂತ ಮೋದಿ ಹೇಳ್ತಿದಾರೆ. ಅದರ ಹಿನ್ನೆಲೆಯಲ್ಲಿ ನಾನು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದೆ. ಮಗನಿಗೆ ಎಲ್ಲರ ಒಪ್ಪಿಗೆಯ ಮೇಲೆ ಹಾವೇರಿಯಲ್ಲಿ ಓಡಾಡಿಸಿದೆ.
ಬಿಜೆಪಿಗೆ ಲಿಂಗಾಯತರಷ್ಟೇ ಸಾಕಾ? ಹಿಂದುಳಿದ ವರ್ಗ, ದಲಿತರು ಬೇಡವೇ? ಅವರನ್ನೇಕೆ ನಿರ್ಲಕ್ಷ್ಯಿಸಲಾಗ್ತಿದೆ. ನಾನು ಮೊದಲಿಂದಲೂ ಮಾದರಿಯಾಗಿ ಇದ್ದೇನೆ. ಈಗಲೂ ಮಾದರಿಯಾಗಿರಲು ಬಯಸಿದ್ದೇನೆ.
ಎಲ್ಲಿ ಮೂಗು ಹಿಡಿದ್ರೆ ಎಲ್ಲಿ ಬಾಯಿ ತಕ್ಕೋಳತ್ತೆ ಅಂತ ನನಗೆ ಗೊತ್ತಿದೆ. ಹಾಗಾಗಿ, ಶಿವಮೊಗ್ಗದಲ್ಲಿ ಸ್ಪರ್ಧಿಸುತ್ತಿದ್ದೇನೆ. ರಾಘವೇಂದ್ರನಿಗೆ ಎಲ್ಲಾ ಲಿಂಗಾಯತರು ಓಟ್ ಹಾಕಿಬಿಡ್ತಾರಾ?
ಶಿವಮೊಗ್ಗ ಜಿಲ್ಲೆಯಲ್ಲೂ ಕಾಂಗ್ರೆಸ್ ನಾಶವಾಗ್ತಿದೆ. ಮೋದಿ ಶಿವಮೊಗ್ಗದ ಕಾರ್ಯಕ್ರಮ
ಮೋದಿಯವರಿಗೆ ಪತ್ರ ಬರೆದಿದ್ದೆ. ಕೂಡಲೇ ಪಿಎಂ ಆಫೀಸಿಂದ, ಅಮಿತ್ ಶಾ ಆಫೀಸಿಂದ ಫೋನ್ ಬಂತು. ಕರ್ನಾಟಕದ ರಾಜಕಾರಣದ ಬಗ್ಗೆ ಏನು ಹೇಳಬೇಕೋ ಹೇಳಿದ್ದೇನೆ.
ಶೋಭಾ ಅಭ್ಯರ್ಥಿ ಮೊದಲೇ ಘೋಷಿಸಿಬಿಟ್ಟಿದ್ರು ಯಡಿಯೂರಪ್ಪ. ಗೋ ಬ್ಯಾಕ್ ಅಂದಾಗ ಬೇರೆ ಕಡೆ ಕೊಡಿಸಿದ್ರಲ್ಲ. ಸಿ.ಟಿ.ರವಿ, ಪ್ರತಾಪ್ ಸಿಂಹರಿಗೂ ಬೇರೆ ಕಡೆ ಸೀಟ್ ಕೊಡಿಸಬಹುದಿತ್ತಲ್ಲ…
ಪಕ್ಷದಿಂದ, ಮೋದಿಯಿಂದ ಆ ಭಗವಂತನೂ ಬೇರೆ ಮಾಡಲು ಸಾಧ್ಯವಿಲ್ಲ. ಈಗ ಸ್ಪರ್ಧೆ ಖಚಿತ. ನೋಟಿಸ್ ಕೊಟ್ಟು ಈಗ ಸಸ್ಪೆಂಡ್ ಮಾಡಬಹುದು. ಗೆದ್ದಾದ ಮೇಲೆ ಮತ್ತೆ ಬಿಜೆಪಿಯಲ್ಲೇ ಮುಂದುವರೀತೇನೆ.
ಪಕ್ಷ ಶುದ್ಧೀಕರಣಕ್ಕಾಗಿ ಸ್ಪರ್ಧೆ ಮಾಡ್ತಿದೀನಿ. ಮೋದಿ ಕನಸು ನನಸು ಮಾಡಲು ನನ್ನ ಸ್ಪರ್ಧೆ. ಮೋದಿ, ಅಮಿತ್ ಶಾ ಸ್ವತಃ ಕರೆ ಮಾಡಿದರೂ ಈ ಸ್ಪರ್ಧೆ ಖಚಿತ, ಹಿಂದೆ ಸರಿಯಲ್ಲ. ದಯವಿಟ್ಟು ಕ್ಷಮಿಸಿ, ಗೆದ್ದ ಮೇಲೆ ನಿಮ್ಮ ಪಾದಕ್ಕೇ ಬಂದು ಸೇರ್ಕೋತೀನಿ ಅಂತ ಅವರಿಗೆ ಹೇಳ್ತೀನಿ…
ಮೂಗಿಗೆ ತುಪ್ಪ ಒರೆಸೋದೇ ಯಡಿಯೂರಪ್ಪನ ಕೆಲಸ. ಎಂಪಿ, ಎಂಎಲ್ ಸಿ ಗಾಗಿ ಈ ಹೋರಾಟ,ಸ್ಪರ್ಧೆ ಅಲ್ಲ. ಪಕ್ಷ ಪರಿಶುದ್ಧತೆಗಾಗಿ, ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ.