ಶಿವಮೊಗ್ಗ ವಿನೋಬ ನಗರ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಕಲಾ ಸಸ್ಪೆಂಡ್! ಅಡಿಷನಲ್ ಎಸ್ ಪಿ ಭೂಮರೆಡ್ಡಿ ಠಾಣೆಗೆ ಹೋದಾಗ ಕಂಡಿದ್ದೇನು? ಅಮಾನತ್ತು ಆಗುವಂಥದ್ದು ಚಂದ್ರಕಲಾ ಮಾಡಿದ್ದೇನು?
ಶಿವಮೊಗ್ಗ ವಿನೋಬ ನಗರ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಕಲಾ ಸಸ್ಪೆಂಡ್!
ಅಡಿಷನಲ್ ಎಸ್ ಪಿ ಭೂಮರೆಡ್ಡಿ ಠಾಣೆಗೆ ಹೋದಾಗ ಕಂಡಿದ್ದೇನು?
ಅಮಾನತ್ತು ಆಗುವಂಥದ್ದು ಚಂದ್ರಕಲಾ ಮಾಡಿದ್ದೇನು?
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಚಂದ್ರಕಲಾರವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಮೂರು ದಿನಗಳ ಹಿಂದೆ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಕಲಾ ರವರ ಅಧಿಕಾರವಿದ್ದ ವಿನೋಬನಗರ ಪೊಲೀಸ್ ಠಾಣೆಗೆ ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದರು.
ಇಲಾಖಾ ತನಿಖೆಯ ವೇಳೆ ಪಿ ಐ ಚಂದ್ರಕಲಾ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಕೇಸ್ ಫೈಲ್ ಗಳ ಮೈಂಟೆನೆನ್ಸ್, ದಾಖಲೆಗಳ ಮೈಂಟೆನೆನ್ಸ್ ಗಳಲ್ಲಿ ಆಸಕ್ತಿ ತೋರದೇ ನಿರ್ಲಕ್ಷ್ಯ ವಹಿಸುತ್ತಿದ್ದರು. ಅಲ್ಲದೇ, ಹಿರಿಯ ಅಧಿಕಾರಿಗಳು ಬಂದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರಲಿಲ್ಲ ಎಂದು ಆರೋಪ ಹೊರಿಸಿ ಸಸ್ಪೆಂಡ್ ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಒಂದು ತಿಂಗಳ ಮಟ್ಟಿಗೆ ಸಸ್ಪೆಂಡ್ ಆಗಿರುವ ಪಿ ಐ ಚಂದ್ರಕಲಾ ರವರನ್ನು ರೂಲ್ ನಂ. 7 ಪ್ರಕಾರ ತನಿಖೆಗೊಳಪಡಿಸಲಾಗಲಿದೆ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ವಿನೋಬನಗರ ಪ್ರಭಾರ ಪಿಐ ಆಗಿ ಜಯನಗರ ಪಿಐ ಸಿದ್ದೇಗೌಡರು ಕಾರ್ಯನಿರ್ವಹಿಸುತ್ತಿದ್ದಾರೆ.