*ಶಿವಮೊಗ್ಗ ದುರ್ಗಿಗುಡಿಯ ತೃಪ್ತಿ ಹೆಲ್ತ್ ಕೇರ್ ನಲ್ಲಿ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಪಾಸಣಾ ಶಿಬಿರ* *ಜೆಸಿಐ ಶಿವಮೊಗ್ಗ ರಾಯಲ್ಸ್ ನ 40 ಕ್ಕೂ ಹೆಚ್ಚು ಸದಸ್ಯರ ಆರೋಗ್ಯ ತಪಾಸಣೆ* *ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸಂಪೂರ್ಣ ಉಚಿತ ಆಗಬೇಕೆಂದು ಒತ್ತಾಯಿಸಿದ ಡಾ.ಚಂದ್ರಶೇಖರ್*

*ಶಿವಮೊಗ್ಗ ದುರ್ಗಿಗುಡಿಯ ತೃಪ್ತಿ ಹೆಲ್ತ್ ಕೇರ್ ನಲ್ಲಿ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಪಾಸಣಾ ಶಿಬಿರ*

*ಜೆಸಿಐ ಶಿವಮೊಗ್ಗ ರಾಯಲ್ಸ್ ನ 40 ಕ್ಕೂ ಹೆಚ್ಚು ಸದಸ್ಯರ ಆರೋಗ್ಯ ತಪಾಸಣೆ*

*ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸಂಪೂರ್ಣ ಉಚಿತ ಆಗಬೇಕೆಂದು ಒತ್ತಾಯಿಸಿದ ಡಾ.ಚಂದ್ರಶೇಖರ್*

ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ಉಚಿತವಾಗಿ ದೊರೆಯುವಂತಾಗಬೇಕೆಂದು ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಜ್ಞ ಡಾ.ಚಂದ್ರಶೇಖರ್ ಹೇಳಿದರು.

ದುರ್ಗಿಗುಡಿಯ ತೃಪ್ತಿ ಹೆಲ್ತ್ ಕೇರ್ ಜೆಸಿಐ ಶಿವಮೊಗ್ಗ ರಾಯಲ್ಸ್ ಸದಸ್ಯರಿಗೆ ಇಂದು ಹಮ್ಮಿಕೊಂಡಿದ್ದ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಆರೋಗ್ಯದ ಜಾಗೃತಿ ಮೂಡಿಸುವುದು ಈ ಸಂದರ್ಭದ ತುರ್ತು ಅಗತ್ಯ ಎಂದರು.

ಜೆಸಿಐ ಸಂಸ್ಥೆಯ ಅಧ್ಯಕ್ಷೆ ಗಾನವಿ, ಕಾರ್ಯದರ್ಶಿ ತೇಜಸ್ವಿನಿ, ತಾಯಿಮನೆಯ ಸುದರ್ಶನ್, ಸಾಧನ ಟ್ರೇಡಿಂಗ್ಸ್ ನ ರಂಗನಾಥ್, ಚಿತ್ರಕೂಟ ಶ್ರೀನಿವಾಸ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿದ್ದರು.

40 ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆಯನ್ನು ಡಾ.ಚಂದ್ರಶೇಖರ್ ಮಾಡಿದರು.