ಶಿವಮೊಗ್ಗದಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್ ಉದ್ಘಾಟನೆ *ಕೌಶಲ್ಯದಿಂದ ಬದುಕು ಸದೃಢ*
ಶಿವಮೊಗ್ಗದಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್ ಉದ್ಘಾಟನೆ
*ಕೌಶಲ್ಯದಿಂದ ಬದುಕು ಸದೃಢ*
ವಿನ್ಯಾಸ ಕೌಶಲ್ಯಾಭಿವೃದ್ಧಿಯ ಅಂತರರಾಷ್ಟ್ರೀಯ ಮಟ್ಟದ ತರಬೇತಿ ನೀಡುತ್ತಿರುವ ನೆಲೆಂಬೋ ಸಂಸ್ಥೆಯ ಪ್ರಾಂಚೈಸಿ ಪಡೆದ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್(ಐಎನ್‌ಎಸ್‌ಡಿ)ಕಾಲೇಜನ್ನು ಶಿವಮೊಗ್ಗ ಶಾಸಕ ಎಸ್. ಎನ್. ಚನ್ನಬಸಪ್ಪ ಉದ್ಘಾಟಿಸಿದರು.
ಶಿವಮೊಗ್ಗದಂತಹ ಮಲೆನಾಡು ಭಾಗದಲ್ಲಿ ಇಂತಹದೊಂದು ಶಿಕ್ಷಣ ಸಂಸ್ಥೆ ಆರಂಭವಾಗಿರೋದು ಶ್ಲಾಘನೀಯ, ಇದು ಸಾವಿರಾರು ಪ್ರತಿಭಾನ್ವಿತರಿಗೆ ಬದುಕು ಕಟ್ಟಿಕೊಡಲಿ ಎಂದು ಅವರು ಶಿವಮೊಗ್ಗದ ವಿನೋಬನಗರ ಕಲ್ಲಹಳ್ಳಿಯ ತಿಮ್ಮಕ್ಕ ಲೇಔಟ್‌ನ ಮೂರನೇ ತಿರುವಿನಲ್ಲಿರುವ ಶ್ರೀ ಸೋಮೇಶ್ವರ ಸಭಾ ಭವನದಲ್ಲಿ ಕಾಲೇಜು ಉಧ್ಘಾಟಿಸಿ ತಿಳಿಸಿದರು.
ಹಿಂದಿನ ಪತ್ರಿಕಾ ಜಗತ್ತು ಮೊಳೆ ಜೋಡಿಸಿ ಬೆಳೆದಿತ್ತು, ಈಗ ಅದು ಆದುನಿಕವಾಗಿದೆ. ಎಲ್ಲಾ ರಂಗಗಳಲ್ಲೂ ಹೊಸತನದ ಆವಿಷ್ಕಾರಗಳೇ ಈ ಕೌಶಲ್ಯದ ಕಲಿಕೆಯಲ್ಲಿ ಅಡಗಿದೆ ಎಂದರು.
ಪರಿಸರವಾದಿ ಪ್ರೊ. ಡಿ. ಎಂ. ಕುಮಾರಸ್ವಾಮಿ ಮಾತನಾಡುತ್ತಾ,
ಉದ್ಯೋಗದಲ್ಲಿ ತಾಂತ್ರಿಕತೆ, ಕೌಶಲ್ಯ ಅನಿವಾರ್ಯ
ಮುಂದೆ ನೆಲ ಅಗಿಯೋ ಕೆಲಸ ಸಿಗೊಲ್ಲ, ತಾಂತ್ರಿಕತೆ ಬೆಳೆದದ್ದು
ನಿರುದ್ಯೋಗಿ ಯುವಕರೇ ಒಂದು ಅಪಾಯದ ಶಕ್ತಿಯಾಗುತ್ತಿರುವುದು ದುರಂತ ಎಂದರು.
ಎಲ್ಲರಿಗೂ ಸರ್ಕಾರ ಕೆಲಸ ಕೊಡಲು ಆಗೊಲ್ಲ. ಅದನ್ನು ನಾವು ಪಡೆಯಬೇಕು. 21 ಶತಮಾನದಲ್ಲಿ ಅನಕ್ಷರಸ್ಥರೆಂದರೆ ಓದದವರಲ್ಲ, ಹೊಸ ತಾಂತ್ರಿಕತೆ ಕಲಿಯಬೇಕು, ಹಳೆಯದನ್ನ ಬಿಡಬೇಕು ಅದಾಗದಿದ್ದರೆ ಅವರೇ ಅನಕ್ಷರಸ್ಥರಾಗುತ್ತಾರೆಂದರು.
ಬೇರೆ ಬೇರೆ ಕೌಶಲ್ಯಗಳನ್ನ ಕಲಿಯಬೇಕು. ಆಗ ನಮ್ಮಲ್ಲಿ ಬೇಕಾದಷ್ಟು ಕೆಲಸಗಳಿವೆ. ಆದರೆ, ಅದಕೆ ಪೂರಕವಾದ ಕೌಶಲ್ಯದ ಯುವಕರಿಲ್ಲ ಎನ್ನುತ್ತಿರುವುದು ನಮ್ಮ ಕೌಶಲ್ಯದ ಕೊರತೆಯಿಂದ ಎಂದರು.
ಸ್ಕಿಲ್ ಢವಲಪ್ ಮೆಂಟ್ ಮುಖ್ಯ, ಬೀದಿಯಲ್ಲಿ ತರಕಾರಿ ಮಾರೋರು ಪೋನ್ ಬಳಸಲು ಹೆದರೊಲ್ಲ ಎಂದರೆ ಅದು ಬದುಕಿಗಾಗಿ ಕಲಿತ ಕೌಶಲ್ಯ, ಇಂತಹದೊಂದು ಗುಣಮಟ್ಟದ ಅಂತರರಾಷ್ಟ್ರೀಯ ಮಟ್ಟದ ಕಾಲೇಜು ಆರಂಭವಾಗಿದ್ದು, ನಮ್ಮ ಯುವ ಪ್ರತಿಭೆಗಳು ಇದನ್ನ ಬಳಸಿಕೊಂಡು ಬೆಳೆಯಿರಿ ಎಂದರು.
ಸಂಸ್ಥೆಯ ಪಾಲುದಾರ ಅರವಿಂದ ಪಿ.ಎ. ಪ್ರಾಸ್ತಾವಿಕವಾಗಿ ಮಾತನಾಡುತ್ತಾ,
ಇದೊಂದು ವಿಶಿಷ್ಟವಾದ ತರಗತಿಯಾಗಿದೆ. ಇಲ್ಲಿ ಫ್ಯಾಷನ್, ಇಂಟಿರಿಯರ್, ಗ್ರಾಫಿಕ್ ಡಿಸೈನ್, ಅನಿಮೇಷನ್, ಬ್ಯೂಟಿ ಅಂಡ್ ಮೇಕಪ್‌ಗೆ ಸಂಬಂಧಿಸಿದಂತೆ ವಿಶೇಷ ತರಬೇತಿಯನ್ನು ನೀಡಲಾಗುವುದು. ಇಂತಹ ವಿಷಯಗಳ ಸರಿಯಾದ ಅಧ್ಯಯನಕ್ಕೆ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಮಾತ್ರ ಅವಕಾಶವಿತ್ತು. ಆದರೆ ಅಲ್ಲೂ ಕೂಡ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುವುದೇ ಕಷ್ಟವಾಗುತ್ತಿತ್ತು. ಈಗ ಈ ತರಗತಿಗಳು ಶಿವಮೊಗ್ಗದಂತಹ ನಗರಗಳಲ್ಲಿ ಬಂದಿರುವುದರಿಂದ ಇದು ಅನುಕೂಲವಾಗುತ್ತದೆ ಎಂದರು.
ಮನೋವೈದ್ಯೆ ಹಾಗೂ ಕಲಾವಿದರೂ ಆದ ಡಾ.ಕೆ.ಎಸ್. ಪವಿತ್ರಾ ಅವರು ಮಾತನಾಡುತ್ತಾ ಕೌಶಲ್ಯದ ಕಾರ್ಯ ನಮ್ಮ ನಡುವಿನ ಶ್ರಮ ಕುಗ್ಗಿಸಿ, ವಿಶೇಷತೆ ಮೂಡಿಸುತ್ತದೆ. ಮಾನಸಿಕವಾದ ಸಿದ್ದತೆಗಳ ಮೂಲಕ ಕೌಶಲ್ಯ ಕಲಿಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಶಾಸಕ ಡಾ. ಧನಂಜಯ ಸರ್ಜಿ, ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಉಪಸ್ಥಿತರಿದ್ದರು.
ಸಂಸ್ಥೆಯ ಪಾಲುದಾರರಾದ ಜಿ. ಪದ್ಮನಾಭ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪಾಲುದಾರರಾದ ಲತಾ ಕೆ.ಆರ್. ರವೀಂದ್ರ,
ಮಂಗಳಾ ಜಗದೀಶ್, ಸಲಹೆಗಾರರಾದ ರವೀಂದ್ರ, ಜಗದೀಶ್ ಉಪಸ್ಥಿತರಿದ್ದರು. ಕೃಷ್ಣಾನಂದ ಅವರು ಕಾರ್ಯಕ್ರಮ ನಿರೂಪಿಸಿದರು.
ಒಂದಿಷ್ಟು ಮಾಹಿತಿ:
ಎಸ್‌ಎಸ್‌ಎಲ್‌ಸಿ ನಂತರದ ಡಿಪ್ಲಮೋ ಕೋರ್ಸಿಗೆ ಇದನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಪಿಯುಸಿ ಆದ ನಂತರ ಯಾವುದೇ ವಿಭಾಗದ ಮಕ್ಕಳು ನಾಲ್ಕು ವರ್ಷದ, ಮೂರು ವರ್ಷದ ಕೋರ್ಸನ್ನು ಆಯ್ಕೆಮಾಡಿಕೊಳ್ಳಬಹುದು. ಪದವಿ ಪಡೆದವರು ಕೂಡ ಎಂಡಿಇಎಸ್ ಕೋರ್ಸಿಗೆ ಸೇರಬಹುದು. ಇದು ಎರಡು ವರ್ಷದ ಕೋರ್ಸ್ ಆಗಿರುತ್ತದೆ. ಮೇಲಿನ ಎಲ್ಲಾ ಕೋರ್ಸುಗಳನ್ನು ಪ್ರತ್ಯೇಕ ಭಾಗಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ. ಇವೆಲ್ಲವೂ ಉದ್ಯೋಗ ಆಧಾರಿತ ಕೋರ್ಸುಗಳಾಗಿರುತ್ತವೆ. ಹೆಚ್ಚಿನ ವಿವರಕ್ಕೆ ಮೊ. ೭೮೯೨೬೭೩೦೩೪ನ್ನು ಸಂಪರ್ಕಿಸಬಹುದಾಗಿದೆ ಎಂದರು.