ಡಾ. ಶುಭಾ ಮರವಂತೆಯವರಿಗೆ ಗಾಂಧಿ ಭವನದ ಸೇವಾ ರಾಜ್ಯ ಪ್ರಶಸ್ತಿ
ಡಾ. ಶುಭಾ ಮರವಂತೆಯವರಿಗೆ ಗಾಂಧಿ ಭವನದ ಸೇವಾ ರಾಜ್ಯ ಪ್ರಶಸ್ತಿ
ಖ್ಯಾತ ಗಾಂಧಿವಾದಿ, ಗಾಂಧಿ ಚಿಂತಕರಾದ ಪ್ರೊ. ಜಿ. ಬಿ. ಶಿವರಾಜು ಅವರ ಹೆಸರಿನಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗಾಂಧಿ ಭವನ ಬೆಂಗಳೂರಿನಲ್ಲಿ ಸ್ಥಾಪಿಸಿರುವ 2025 ನೇ ಸಾಲಿನ “ರಾಜ್ಯದ ಉತ್ತಮ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸೇವಾ ಪ್ರಶಸ್ತಿ” ಗೆ ಕುವೆಂಪು ವಿಶ್ವ ವಿದ್ಯಾಲಯದ ರಾಷ್ಟ್ರೀಯ ಸೇವಾ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆಯವರು ಆಯ್ಕೆಯಾಗಿದ್ದಾರೆ.
ಸಮಾಜಮುಖಿಯಾಗಿ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅತ್ಯುತ್ತಮ ವ್ಯಕ್ತಿತ್ವ ಹೊಂದಿ ಜನಮಾನಸದಲ್ಲಿ ವಿಶೇಷವಾಗಿ ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಿ ಉತ್ತಮ ಸಂಸ್ಕಾರವನ್ನು ಬಿತ್ತಿ ಸಾರ್ಥಕ ಸೇವೆಯಲ್ಲಿ ಮುಂದುವರಿಯುತ್ತಿರುವ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಿಗೆ ಕೊಡಮಾಡುವ ಈ ಪ್ರಶಸ್ತಿಯು ನಗದು ಬಹುಮಾನ, ಸ್ಮರಣಿಕೆಯನ್ನೊಳಗೊಂಡಿದೆ.
ಅಕ್ಟೋಬರ್ ಎರಡರಂದು ಗಾಂಧಿ ಜಯಂತಿ ಅಹಿಂಸಾ ದಿನದಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗಾಂಧಿ ಭವನದ ಪ್ರಕಟಣೆ ತಿಳಿಸಿದೆ.