ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನಾ ನಿನ್ನ ಪಯಣಿಗ
ಓ ಬದುಕೇ…

ನೀ ಎಲ್ಲಿ
ಹೇಳುವೆಯೋ
ಅಲ್ಲಿ ಇಳಿದು ಬಿಡುವೆ!

2.
ಎರಡೆರಡು
ಮುಖಗಳನ್ನಿಟ್ಟುಕೊಂಡು
ಬದುಕುವವನೇ

ಸತ್ತಾಗ
ತೋರಿಸುವ
ಮುಖ ಯಾವುದೋ…

3.
ಪ್ರತಿಯೊಂದು
ಕ್ಷಣ ಬದುಕಬೇಕಿದೆ

ಅದೊಂದು ಕ್ಷಣ
ಹೋಗಲೇಬೇಕಿದೆ!

4.
ಸುಮ್ಮನಿರುವುದರಿಂದ
ಸಂಬಂಧಗಳೂ
ಸಾಯುವವು…

– *ಶಿ.ಜು.ಪಾಶ*
8050112067
(28/09/2025)