ನೆಲೆಂಬೋ ವತಿಯಿಂದ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್(ಐಎನ್‌ಎಸ್‌ಡಿ)ಕಾಲೇಜಿನ ಉದ್ಘಾಟನೆ ನಾಳೆ*

*ನೆಲೆಂಬೋ ವತಿಯಿಂದ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್(ಐಎನ್‌ಎಸ್‌ಡಿ)ಕಾಲೇಜಿನ ಉದ್ಘಾಟನೆ ನಾಳೆ*

ವಿನ್ಯಾಸ ಕೌಶಲ್ಯಾಭಿವೃದ್ಧಿಯ ನೆಲೆಂಬೋ ವತಿಯಿಂದ ಸೆ.28ರಂದು ಬೆಳಿಗ್ಗೆ 11.30ಕ್ಕೆ ವಿನೋಬನಗರದ ಕಲ್ಲಹಳ್ಳಿಯ ತಿಮ್ಮಕ್ಕ ಲೇಔಟ್‌ನ ಮೂರನೇ ತಿರುವಿನಲ್ಲಿರುವ ಸ್ವಯಂಭೂ ಶ್ರೀ ಸೋಮೇಶ್ವರ ಸಭಾ ಭವನದಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್(ಐಎನ್‌ಎಸ್‌ಡಿ)ಕಾಲೇಜಿನ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪಾಲುದಾರ ಅರವಿಂದ ಪಿ.ಎ. ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ವಿಶಿಷ್ಟವಾದ ತರಗತಿಯಾಗಿದೆ. ಇಲ್ಲಿ ಫ್ಯಾಷನ್, ಇಂಟಿರಿಯರ್, ಗ್ರಾಫಿಕ್ ಡಿಸೈನ್, ಅನಿಮೇಷನ್, ಬ್ಯೂಟಿ ಅಂಡ್ ಮೇಕಪ್‌ಗೆ ಸಂಬಂಧಿಸಿದಂತೆ ವಿಶೇಷ ತರಬೇತಿಯನ್ನು ನೀಡಲಾಗುವುದು. ಇಂತಹ ವಿಷಯಗಳ ಸರಿಯಾದ ಅಧ್ಯಯನಕ್ಕೆ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಮಾತ್ರ ಅವಕಾಶವಿತ್ತು. ಆದರೆ ಅಲ್ಲೂ ಕೂಡ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುವುದೇ ಕಷ್ಟವಾಗುತ್ತಿತ್ತು. ಈಗ ಈ ತರಗತಿಗಳು ಶಿವಮೊಗ್ಗದಂತಹ ನಗರಗಳಲ್ಲಿ ಬಂದಿರುವುದರಿಂದ ಇದು ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಐಎನ್‌ಎಸ್‌ಡಿಯ ಶಿವಮೊಗ್ಗ ಕೇಂದ್ರವನ್ನು ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರುಗಳಾದ ಚನ್ನಬಸಪ್ಪ, ಶಾರದಾಪೂರ್‍ಯಾನಾಯ್ಕ, ಡಿ.ಎಸ್. ಅರುಣ್, ಧನಂಜಯ ಸರ್ಜಿ, ಬಲ್ಕೀಶ್‌ಬಾನು ಮುಂತಾದವರು ಉಪಸ್ಥಿತರಿರುವರು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ. ಬಿ.ಎಸ್. ಕುಮಾರಸ್ವಾಮಿ, ಡಾ.ಕೆ.ಎಸ್. ಪವಿತ್ರಾ ಭಾಗವಹಿಸುವರು, ಬಳ್ಳೆಕೆರೆ ಸಂತೋಷ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಂಸ್ಥೆಯ ಪಾಲುದಾರ ಕೆ.ಆರ್. ರವೀಂದ್ರ ಮಾತನಾಡಿ, ಎಸ್‌ಎಸ್‌ಎಲ್‌ಸಿ ನಂತರದ ಡಿಪ್ಲಮೋ ಕೋರ್ಸಿಗೆ ಇದನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಪಿಯುಸಿ ಆದ ನಂತರ ಯಾವುದೇ ವಿಭಾಗದ ಮಕ್ಕಳು ನಾಲ್ಕು ವರ್ಷದ, ಮೂರು ವರ್ಷದ ಕೋರ್ಸನ್ನು ಆಯ್ಕೆಮಾಡಿಕೊಳ್ಳಬಹುದು. ಪದವಿ ಪಡೆದವರು ಕೂಡ ಎಂಡಿಇಎಸ್ ಕೋರ್ಸಿಗೆ ಸೇರಬಹುದು. ಇದು ಎರಡು ವರ್ಷದ ಕೋರ್ಸ್ ಆಗಿರುತ್ತದೆ. ಮೇಲಿನ ಎಲ್ಲಾ ಕೋರ್ಸುಗಳನ್ನು ಪ್ರತ್ಯೇಕ ಭಾಗಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ. ಆಯಾ ಕೋರ್ಸಿಗೆ ಸಂಬಂಧಪಟ್ಟಂತೆ ವರ್ಷಕ್ಕೆ ಒಂದು ಲಕ್ಷದಿಂದ 1.7 ಲಕ್ಷದವರೆಗೆ ಶುಲ್ಕವಿರುತ್ತದೆ. ಇವೆಲ್ಲವೂ ಉದ್ಯೋಗ ಆಧಾರಿತ ಕೋರ್ಸುಗಳಾಗಿರುತ್ತವೆ. ಹೆಚ್ಚಿನ ವಿವರಕ್ಕೆ ಮೊ. 7892673034 ನ್ನು ಸಂಪರ್ಕಿಸಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪಾಲುದಾರರಾದ ಜಿ. ಪದ್ಮನಾಭ್, ರಮೇಶ್‌ಕುಮಾರ್ ಜೆ. ಉಪಸ್ಥಿತರಿದ್ದರು.