ಶಿವಮೊಗ್ಗ ಮಹಾನಗರ ಪಾಲಿಕೆ; ಇ- ಸ್ವತ್ತು ಹೆಸರಲ್ಲಿ 15 ಸಾವಿರ ಲಂಚ ಪಡೆದಳಾ ಆ ಕರೆಂಟು ವಿಭಾಗದ ಹುಡುಗಿ?!**ಶಾಸಕರಿಗೆ- ಆಯುಕ್ತರಿಗೆ- ಅಧಿಕಾರಿಗೆ ಬಂದ ದೂರು ಅರ್ಜಿಯ ಕಥೆ ಏನು?*
*ಶಿವಮೊಗ್ಗ ಮಹಾನಗರ ಪಾಲಿಕೆ; ಇ- ಸ್ವತ್ತು ಹೆಸರಲ್ಲಿ 15 ಸಾವಿರ ಲಂಚ ಪಡೆದಳಾ ಆ ಕರೆಂಟು ವಿಭಾಗದ ಹುಡುಗಿ?!*
*ಶಾಸಕರಿಗೆ- ಆಯುಕ್ತರಿಗೆ- ಅಧಿಕಾರಿಗೆ ಬಂದ ದೂರು ಅರ್ಜಿಯ ಕಥೆ ಏನು?*
ಛೋಟೀಸೀ ಆಶಾ ಅನ್ಕೊಂಡೇ ದೊಡ್ಡ ದೊಡ್ಡ ಲಂಚಕ್ಕೆ ಕೈ ಹಾಕುತ್ತಿದ್ದಾರಾ ಇ- ಸ್ವತ್ತು ಹೆಸರಲ್ಲಿ ಪಾಲಿಕೆಯ ಕೆಲವರು?!
ಈ ಬಗ್ಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಚನ್ನಬಸಪ್ಪ, ಆಯುಕ್ತರಾದ ಕವಿತಾ ಯೋಗಪ್ಪನವರ್, ಅಧಿಕಾರಿ ನಾಗೇಂದ್ರ ಸೇರಿದಂತೆ ಬಹಳಷ್ಟು ಜನರಿಗೆ ಎಲೆಕ್ಟ್ರಿಕ್ ವಿಭಾಗದ ಕರೆಂಟು ಲೇಡಿಯೊಬ್ಬಳು ಇ- ಸ್ವತ್ತಿನ ಹೆಸರಲ್ಲಿ ಮೇಲಿನ ಅಧಿಕಾರಿಗಳಿಗೆಲ್ಲ ಪಾಲು ಕೊಡಬೇಕೆಂದು ಬರೋಬ್ಬರಿ 15 ಸಾವಿರ ಹಣ ಎತ್ತಿರೋ ವಿಷಯಹೊತ್ತ ಮೂಕರ್ಜಿ ಚರ್ಚೆಗೊಳಗಾಗಿದೆ.
ಈ ಬಗ್ಗೆ ಪತ್ರಿಕೆ ಶಾಸಕರಾದ ಚೆನ್ನಿಯವರಿಗೆ ಮಾತಾಡಿಸಿತು. ಅವರು ಮೂಕರ್ಜಿ ಬಂದಿದೆ. ಇಂಥ ವಿಚಾರಗಳಲ್ಲಿ ಯಾವುದೇ ಭಯ, ಆತಂಕವಿಲ್ಲದೇ ನಿಜವಾದ ಸಂತ್ರಸ್ತರು ನೇರವಾಗಿ ನನ್ನನ್ನು ಕಾಣಬಹುದು. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪಾಲಿಕೆ ಅಧಿಕಾರಿ ನಾಗೇಂದ್ರರವರಿಗೆ ಫೋನ್ ಮಾಡಿದರೂ ಅವರು ಫೋನ್ ರಿಸೀವ್ ಮಾಡಿಲ್ಲ.
ಎಲೆಕ್ಟ್ರಿಕ್ ವಿಭಾಗದಲ್ಲೂ ಇ- ಸ್ವತ್ತಿನ ಲಂಚಾವತಾರದ ಕರಾಮತ್ತು ನಡೆಯುತ್ತಿದೆಯೇ? ಮೂಕರ್ಜಿ ಅಷ್ಟೇ ಎಂಬ ಕಾರಣಕ್ಕೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇದ್ದರೆ ಅನಾಹುತಗಳೇ ಸಂಭವಿಸಬಹುದು.
ಆಯುಕ್ತರು, ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರಾದ ಚೆನ್ನಿಯವರು ನಿರ್ದೇಶನ ನೀಡಿ ವಾಸ್ತವ ಹೊರಕ್ಕೆ ತರುವಂತಾಗಬೇಕಿದೆ. ಅಲ್ಲದೇ, ಈ ಕರೆಂಟ್ ಲೇಡಿಯನ್ನು ಪ್ರಕರಣದಿಂದ ಉಳಿಸಲು ಪ್ರಯತ್ನಿಸುತ್ತಿರುವ ರಿರೀಶ- ಪಪನೂ ರಂಥವರ ವಿರುದ್ಧವೂ ಕ್ರಮ ಕೈಗೊಳ್ಳುವಂತಾಗಲಿ…
ಕರೆಂಟ್ ಲೇಡಿಗೆ ಇ- ಸ್ವತ್ತಿನ ಹೆಸರಲ್ಲಿ ಎತ್ತಿದ ಲಂಚಕ್ಕಾಗಿ ಈ ಹೊತ್ತಲ್ಲಿ ಕರೆಂಟ್ ನೀಡುವುದು, ಆಕೆಯನ್ನು ಮನೆಗೆ ರವಾನಿಸುವುದು ಪಾಲಿಕೆಯ ಆರೋಗ್ಯಕ್ಕೆ ಒಳ್ಳೆಯದು.