*10 ಗ್ರಾಂ ಚಿನ್ನದ ಸರ ಅಪಹರಿಸಿದ್ದ ಇಬ್ಬರು ಯುವಕರ ಬಂಧನ* *ಭದ್ರಾವತಿ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ*
*10 ಗ್ರಾಂ ಚಿನ್ನದ ಸರ ಅಪಹರಿಸಿದ್ದ ಇಬ್ಬರು ಯುವಕರ ಬಂಧನ*
*ಭದ್ರಾವತಿ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ*
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಡ್ಡ ಹಾಕಿ ಬಂಗಾರದ ಸರ ಅಪಹರಿಸಿದ್ದ ಇಬ್ಬರನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಶಂಕರಘಟ್ಟದ ಶಿವಮೊಗ್ಗ- ತರಿಕೆರೆ ರಾಜ್ಯ ಹೆದ್ದಾರಿಯಲ್ಲಿ ಜ.30 ರಂದು ಈ ಘಟನೆ ನಡೆದಿದ್ದು, ಭದ್ರಾವತಿ ಮಲ್ಲಿಗೇನಹಳ್ಳಿ ಕ್ಯಾಂಪಿನ ಚಂದನ್ ನಾಯ್ಕ(20) ಮತ್ತು ವೇಣುಗೋಪಾಲ್(26) ಬಂಧನಕ್ಕೊಳಗಾದವರು.
ಜಯಂತ್ ರವರ 1.50 ಲಕ್ಷ ರೂ.,ಗಳ ಮೌಲ್ಯದ ಚಿನ್ನದ ಸರ ಅಪಹರಿಸಿದ್ದನ್ನು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದಿದ್ದು, ಸುಲಿಗೆಗೆ ಬಳಸಿದ್ದ ಬೈಕನ್ನು ಕೂಡ ಅಮಾನತು ಪಡಿಸಿಕೊಂಡಿದ್ದಾರೆ.
ಎಸ್ ಪಿ ನಿಖಿಲ್.ಬಿ., ಹೆಚ್ಚುವರಿ ಎಸ್ ಪಿ ಗಳಾದ ಎ.ಜಿ.ಕಾರಿಯಪ್ಪ, ಎಸ್.ರಮೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಭದ್ರಾವತಿ ಡಿವೈಎಸ್ ಪಿ ಪ್ರಕಾಶ್ ರಾಠೋಡ್ ಮೇಲ್ವಿಚಾರಣೆಯಲ್ಲಿ ಭದ್ರಾವತಿ ಗ್ರಾಮಾಂತರ ಇನ್ಸ್ ಪೆಕ್ಟರ್ ಚಿದಾನಂದ್ ನೇತೃತ್ವದಲ್ಲಿ ಎಎಸ್ ಐ ದಿವಾಕರರಾವ್, ಸಿಪಿಸಿ ಯದುನಂದನ, ಸಂತೋಷ್ ಕುಮಾರ್ ರವರನ್ನೊಳಗೊಂಡ ತನಿಖಾ ತಂಡ ಈ ಕಾರ್ಯಾಚರಣೆ ಮಾಡಿದೆ.
ಎಸ್ ಪಿ ನಿಖಿಲ್ ಅಭಿನಂದಿಸಿದ್ದಾರೆ.


