Gm ಶುಭೋದಯ💐💐
*ಕವಿಸಾಲು*
1.
ಪುಸ್ತಕ
ಮುಚ್ಚಿಡುವುದರಿಂದ
ಕಥೆಗಳು
ಕೊನೆಗೊಳ್ಳುವುದಿಲ್ಲ!
2.
ಎಲ್ಲರೂ
ಬದಲಾಗುವವರೇ ಇಲ್ಲಿ;
ಕೆಲವರು
ಒಳ್ಳೆ ಸಮಯದಲ್ಲಿ…
ಮತ್ತೆ ಕೆಲವರು
ಕೆಟ್ಟ ಸಮಯದಲ್ಲಿ!
3.
ನೋವಿನ ಬೆಲೆ
ಎಷ್ಟೆಂದು ಕೇಳಿದರೆ
ನಾನೇನು ಹೇಳಲಿ?
ಎಲ್ಲರೂ ಉಚಿತವಾಗೇ
ಕೊಟ್ಟರದನ್ನು!
– *ಶಿ.ಜು.ಪಾಶ*
8050112067
(3/2/2026)