ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ”* ಇಂದು ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ  ಡಾ. ಶರಣಪ್ರಕಾಶ ಪಾಟೀಲ್ ಅವರೊಂದಿಗೆ “ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ” ನಡೆಸಿದ ಸಚಿವ ಮಧು ಬಂಗಾರಪ್ಪ ಹಲವು ಮಹತ್ತರ ಸುಧಾರಣೆಗಳ ಕುರಿತು ಚರ್ಚೆ ಏನೆಲ್ಲಾ ಅಭಿವೃದ್ಧಿಯಾಗಲಿದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ?

*”ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ”*

ಇಂದು ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ  ಡಾ. ಶರಣಪ್ರಕಾಶ ಪಾಟೀಲ್ ಅವರೊಂದಿಗೆ “ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ” ನಡೆಸಿದ ಸಚಿವ ಮಧು ಬಂಗಾರಪ್ಪ

ಹಲವು ಮಹತ್ತರ ಸುಧಾರಣೆಗಳ ಕುರಿತು ಚರ್ಚೆ

ಏನೆಲ್ಲಾ ಅಭಿವೃದ್ಧಿಯಾಗಲಿದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ?

ಶಿವಮೊಗ್ಗ ಮೆಗ್ಗಾನ್ ಬೋಧನಾ ಆಸ್ಪತ್ರೆ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅಗತ್ಯವಾದ ಮೂಲಸೌಕರ್ಯ, ಹುದ್ದೆ ಭರ್ತಿ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

*”ಸಭೆಯಲ್ಲಿ ಚರ್ಚಿಸಲಾದ ವಿಷಯಗಳು”*

🔹ಈಗಾಗಲೇ ಮುಕ್ತಾಯ ಹಂತದಲ್ಲಿರುವ ಹೈಟೆಕ್ ಶವಗಾರ ನಿರ್ಮಾಣ ಕಾಮಗಾರಿ ಸೇರಿದಂತೆ ಎಂ.ಸಿ.ಹೆಚ್ ಬ್ಲ್ಯಾಕ್ (Phase-1), ಪರಿಶಿಷ್ಟ ಜಾತಿ ಮತ್ತು ಪಂಗಡದ ಬಾಲಕ ವಿದ್ಯಾರ್ಥಿನಿಲಯದ ಕಟ್ಟಡ ಕಾಮಗಾರಿ ಹಾಗೂ ಕೇಂದ್ರೀಯ ಗ್ರಂಥಾಲಯ ನಿರ್ಮಾಣ ಮಾಡುವ ಕುರಿತು.

🔹ನೂತನವಾಗಿ ಪ್ರತ್ಯೇಕ ಒ.ಪಿ.ಡಿ ಬ್ಲಾಕ್ ತೆರೆಯುವುದು.

🔹ರೋಗಿಗಳು ಮತ್ತು ರೋಗಿಗಳ ಸಹಾಯಕರಿಗೆ ಅನುಕೂಲವಾಗುವಂತೆ Dormitory (ವಸತಿ ನಿಲಯ ಕೊಠಡಿ) ನಿರ್ಮಿಸುವ ಬಗ್ಗೆ.

🔹 ಎಂ.ಸಿ.ಹೆಚ್ ಬ್ಲಾಕ್ ನ 2ನೇ ಹಂತದ ಕಟ್ಟಡ ಕಾಮಗಾರಿ ನಿರ್ಮಿಸುವುದು.

🔹 ಮಕ್ಕಳ ವಿಭಾಗ ಹಾಗೂ ಒ.ಬಿ.ಜಿ ವಿಭಾಗದ ದುರಸ್ತಿ ಕಾಮಗಾರಿ ಮಾಡುವ ಕುರಿತು.

🔹 ಮೆಗ್ಗಾನ್ ಆಸ್ಪತ್ರೆಯ ಕಾಂಪೌಂಡ್ ನಿರ್ಮಾಣ ಮಾಡುವುದು.

🔹 ಹೊಸದಾಗಿ 600 ಕೆ.ಎಲ್.ಡಿ ಹಾಗೂ ಇ.ಟಿ.ಪಿ ನಿರ್ಮಿಸುವ ಬಗ್ಗೆ.

🔹 30 ರಿಂದ 50 ಹಾಸಿಗೆ ಸಾಮರ್ಥ್ಯವುಳ್ಳ “ಟ್ರಾಮಾ ಸೆಂಟರ್” ಪ್ರಾರಂಭಿಸುವ ಬಗ್ಗೆ.

🔹 ಹೊಸ “ಡಯಾಲಿಸಿಸ್ ಯಂತ್ರ” ಗಳನ್ನು ಒದಗಿಸುವುದು.

🔹ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU) ಹಾಗೂ ಅದಕ್ಕೆ ಅವಶ್ಯವಿರುವ ಮಾನವ ಸಂಪನ್ಮೂಲ (Man Power) ಒದಗಿಸುವ ಕುರಿತು.

🔹ಶೀಘ್ರದಲ್ಲಿಯೇ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿವಿಧ ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಆರಂಭಿಸುವುದನ್ನು ಸೇರಿದಂತೆ ಅನೇಕ ಅಭಿವೃದ್ದಿ ವಿಷಯಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ  ಮಹಮದ್ ಮೊಹಿಸಿನ್, ನಿರ್ದೇಶಕರಾದ ಶ್ರೀಮತಿ ಡಾ. ಬಿ.ಎಲ್ ಸುಜಾತಾ ರಾಥೋಡ್, ಆಪ್ತ ಕಾರ್ಯದರ್ಶಿ  ಕಿಶೋರ್ ಕುಮಾರ್, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕರಾದ  ಡಾ. ತಿಮ್ಮಪ್ಪ ಸೇರಿದಂತೆ ಸಿಮ್ಸ್ ನ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.