ಸಿಗಂದೂರು ದೇವಸ್ಥಾನ; ಸಚಿವ ಮಧು ಬಂಗಾರಪ್ಪ ಹೇಳಿಕೆ ತಿರುಚಿದ ಬಿಜೆಪಿ- ಎಸ್ ಪಿ ಗೆ ದೂರು*

*ಸಿಗಂದೂರು ದೇವಸ್ಥಾನ; ಸಚಿವ ಮಧು ಬಂಗಾರಪ್ಪ ಹೇಳಿಕೆ ತಿರುಚಿದ ಬಿಜೆಪಿ- ಎಸ್ ಪಿ ಗೆ ದೂರು*

ಸಿಗಂದೂರು ಸೇತುವೆ (Sigandur bridge) ಉದ್ಘಾಟನೆ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರುಗಳ ನಡುವೆ ಆರೋಪ-ಪ್ರತ್ಯಾರೋಗಳ ನಡುವೆ ಶಿವಮೊಗ್ಗ (Shivamogga) ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರದ್ದು ಎನ್ನಲಾದ ಹೇಳಿಕೆಯೊಂದು ಭಾರೀ ವಿವಾದಕ್ಕೀಡಾಗಿದೆ.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಡಿಯೋ ವೈರಲ್ ಆಗಿದೆ. ಸಿಗಂದೂರು ದೇವಸ್ಥಾನ ಒಂದು ತಿಂಗಳಲ್ಲಿ ಹೇಗೆ ಹಾಳು ಮಾಡುತ್ತೇನೆ ಎನ್ನುವ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಶಿವಮೊಗ್ಗ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ ವೈರಲ್ ಮಾಡಿದೆ.

ಅಜ್ಞಾನಿ ವಿದ್ಯಾ ಮಂತ್ರಿ..ನಾಲಿಗೆಗೆ ತಾಯಿ ಬರೆ ಹಾಕುವ ದೇವರ ಚಿತ್ರವಿದೆ. ಇದನ್ನು ಬಿಜೆಪಿಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ವಿರುದ್ಧ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘ ಹಾಗೂ ಶ್ರೀಕ್ಷೇತ್ರ ಸಿಂಗದೂರು ಚೌಡೇಶ್ವರಿದೇವಿ ಭಕ್ತ ಮಂಡಳಿ ಶಿವಮೊಗ್ಗ ಆಕ್ರೋಶ ವ್ಯಕ್ತಪಡಿಸಿದ್ದು, ವಿಡಿಯೋ ತಿರುಚಿ ವೈರಲ್ ಮಾಡಲಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರಿಗೆ ದೂರು ನೀಡಿದೆ.