*ಶಿವಮೊಗ್ಗದ ಜೈಲಿನ ಕಾಂಪೌಂಡ್ ಒಳಗೆ ಸಿಗರೇಟ್,ಬೀಡಿ, ಮೊಬೈಲ್ ಎಸೆದು ಪರಾರಿಯಾಗಿದ್ದ ಮೂವರು ಯುವಕರ ಬಂಧನ*

*ಶಿವಮೊಗ್ಗದ ಜೈಲಿನ ಕಾಂಪೌಂಡ್ ಒಳಗೆ ಸಿಗರೇಟ್,ಬೀಡಿ, ಮೊಬೈಲ್ ಎಸೆದು ಪರಾರಿಯಾಗಿದ್ದ ಮೂವರು ಯುವಕರ ಬಂಧನ*

ಶಿವಮೊಗ್ಗ ಸೋಗಾನೆಯ ಜೈಲಿನೊಳಗೆ ಮೊಬೈಲ್, ಸಿಗರೇಟ್ ಮತ್ತು ಬೀಡಿ ಪ್ಯಾಕೇಟುಗಳನ್ನು ಎಸೆದಿದ್ದ ಟಿಪ್ಪು ನಗರದ ಇಬ್ಬರು, ಅಂಬೇಡ್ಕರ್ ನಗರದ ಓರ್ವನನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ.

ಜ.31ರಂದು ಸಿಗರೇಟ್, ಬೀಡಿ, ಮೊಬೈಲನ್ನು ಗಮ್ ಟೇಪಿನಿಂದ ಸುತ್ತಿ ಟಿಪ್ಪುನಗರದ ಇಮ್ರಾನ್ ಪಾಷ @ ಇಮ್ಮು, ಸೈಯದ್ ಮಲ್ಲಿಕ್ @ ತಬ್ರೇಜ್ @ ತಂಬಲ್, ಅಂಬೇಡ್ಕರ್ ನಗರದ ಅಲ್ಲಾಬಕಶ್ @ ಪೊಟ್ಯಾಟೋ ಎಂಬುವವರನ್ನು ಬಂಧಿಸಲಾಗಿದೆ.

ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ನೀಡಿದ ದೂರಿನ ಮೇರೆಗೆ ಮೊಕದ್ದಮೆ ದಾಖಲಾಗಿತ್ತು.

ತುಂಗಾನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದಲ್ಲಿ ಪಿಎಸ್ ಐ ಗಾದಿ ಲಿಂಗಗೌಡರ್,ರಘುವೀರ್, ಸಿಬ್ಬಂದಿಗಳಾದ ಅರುಣ್, ಕಿರಣ್, ರಂಗನಾಥ್ ತಮ್ಮಣ್ಣ ಜಂಬಗಿ ಈ ಪ್ರಕರಣ ಭೇದಿಸಿದ್ದಾರೆ.