ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಇವತ್ತು ಚಳಿ ಬಿಡಿಸಿದ್ದು ಯಾರಿಗೆ?* *ಬೆವರು ಹರಿದಿದ್ದು ಯಾರದು?*…ಶಿವಮೊಗ್ಗದ ಡಂಪಿಂಗ್ ಯಾರ್ಡ್ ಕಸದ ಸಮಸ್ಯೆ- ಪೊಲೀಸ್ ಕ್ಯಾಬಿನ್ ಬಳಸಿಕೊಳ್ಳದ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವೆ; ಉಪ ಲೋಕಾಯುಕ್ತರು*
*ಶಿವಮೊಗ್ಗದ ಡಂಪಿಂಗ್ ಯಾರ್ಡ್ ಕಸದ ಸಮಸ್ಯೆ- ಪೊಲೀಸ್ ಕ್ಯಾಬಿನ್ ಬಳಸಿಕೊಳ್ಳದ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವೆ; ಉಪ ಲೋಕಾಯುಕ್ತರು*

ಕೆಲವು ದೂರುಗಳು ಡಂಪಿಂಗ್ ಯಾರ್ಡ್ ಬಗ್ಗೆ ಬಂದಿದ್ದವು. ನೊಣ, ಸೊಳ್ಳೆ, ನಾಯಿಗಳ ಕಾಟದ ಸಮಸ್ಯೆ ಇದೆ ಎಂಬುದು ಸತ್ಯ. ನಾಲ್ಕು ತಿಂಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದು ಸುಳ್ಳಾಗಿದೆ ಎಂಬ ದೂರುಗಳನ್ನು ಕೂಡಲೇ ಬಗೆಹರಿಸಲು ಸೂಚಿಸಿದ್ದೇನೆ ಎಂದು ಗುರುವಾರ ಬೆಳಿಗ್ಗೆ ಅನುಪಿನ ಕಟ್ಟೆಯಲ್ಲಿರುವ ಕಸದ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿದ ನ್ಯಾ.ಕೆ.ಎನ್.ಫಣೀಂದ್ರ ಹೇಳಿದರು.
ಗಿಡ ಮರ ತೋಟಗಳಿಗೆ ಇಲ್ಲಿಂದ ಯಾವುದೇ ತೊಂದರೆಯಾಗಿಲ್ಲ. ವೈಜ್ಞಾನಿಕವಾಗಿ ತನಿಖೆ ಮಾಡಿ ಸಮಸ್ಯೆ ಬಗೆಹರಿಸಲು ಸೂಚಿಸಿದ್ದೇನೆ. ಕಸ ಸಂಸ್ಕರಣೆಗೆ ಇನ್ನೊಂದು ಪ್ಲಾಂಟ್ ಹಾಕಲು ಹೇಳಿದ್ದೀನಿ. ಸುಮೋಟೋ ಕೇಸ್ ದಾಖಲಿಸಿಕೊಳ್ಳುತ್ತೇನೆ. ಪ್ರತಿ ಒಂದು- ಎರಡು ತಿಂಗಳಲ್ಲಿ ವರದಿ ತರಿಸಿಕೊಳ್ಳುತ್ತೇನೆ ಎಂದರು.
ಶಿವಮೊಗ್ಗದಲ್ಲಿ ಪೊಲೀಸ್ ಚೌಕಿ ಪರಿಶೀಲಿಸಿದ್ದೇನೆ. 18-20 ಚೌಕಿಗಳಿವೆ. ಆ ಚೌಕಿಗಳ ಅವಶ್ಯಕತೆ ಇರಲಿಲ್ಲ ಎಂದು ಎಸ್ ಪಿ ಹೇಳಿದ್ದಾರೆ. ಚೌಕಿಗಳನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗುವುದು ಎಂದಿದ್ದಾರೆ. ಆದರೂ ಸುಮೋಟೋ ಕೇಸ್ ದಾಖಲಿಸಿಕೊಳ್ಳುವುದು ಅನಿವಾರ್ಯ ಎಂದರು.
ಬಸ್ ನಿಲ್ದಾಣದ ಸಮಸ್ಯೆ ಬಗ್ಗೆಯೂ ಕೇಳಿದ್ದೆ. ಬಹಳ ಕ್ಲೀನಿದೆ. ನೀರಿನ ಸಮಸ್ಯೆ ಇಲ್ಲ ಅಂತ ಪ್ರಯಾಣಿಕರನ್ನು ಮಾತಾಡಿಸಿದಾಗಲೂ ಗೊತ್ತಾಗಿದೆ. ಕೆಲವರ ಪ್ರಕಾರ, ನೀವು ಬರ್ತಿದ್ದೀರಾ ಅಂತ ಕ್ಲೀನಾಗಿದೆ ಅಂದಿದ್ದಾರೆ. ಅದಕ್ಕೂ ಕ್ರಮ ಕೈಗೊಳ್ಳುವೆ. ನಾನು ಬಂದ ಸಂದರ್ಭ ಹೊರತು ಪಡಿಸಿಯೂ ಇಷ್ಟೇ ಸ್ವಚ್ಛತೆ ಇಲ್ಲಿರುತ್ತಾ? ಎಂಬ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಉಪ ಲೋಕಾಯುಕ್ತರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಶೇಷವಾಗಿ 65 ಪ್ರಕರಣಗಳನ್ನು ಆರಿಸಿಕೊಂಡು ತರಲಾಗಿದೆ. ಈ ಪ್ರಕರಣಗಳ ಇತ್ಯರ್ಥದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಪೊಲೀಸ್ ಕ್ಯಾಬಿನ್ ಗಳ ಸದುಪಯೋಗಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ.
81 ಪ್ರಕರಣಗಳನ್ನು ನಿನ್ನೆ ರಿಸೀವ್ ಮಾಡಿದ್ದೇನೆ. 40 ಪ್ರಕರಣಗಳನ್ನು ಸ್ಥಳದಲ್ಲೇ ಬಗೆಹರಿಸಿದ್ದೇನೆ ಎಂದರು.
*ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಇವತ್ತು ಚಳಿ ಬಿಡಿಸಿದ್ದು ಯಾರಿಗೆ?*
*ಬೆವರು ಹರಿದಿದ್ದು ಯಾರದು?*
ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರರವರು ಇಂದು ಬೆಳಗ್ಗೆಯಿಂದಲೇ ಶಿವಮೊಗ್ಗ ನಗರದ ವಿವಿಧ ಕಡೆ ಅನಿರೀಕ್ಷಿತ ಭೇಟಿ ನೀಡಿ, ಅಧಿಕಾರಿಗಳ ಚಳಿ ಬಿಡಿಸಿದರು.
ನಗರದ ವಿವಿಧ ಕಡೆ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾಗಿರುವ ಪೊಲೀಸ್ ಬಾಕ್ಸ್ ಗಳನ್ನು ಪರಿಶೀಲಿಸಿ, ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಂತೆ ಎಸ್ ಪಿ ಮಿಥುನ್ ಕುಮಾರ್ ರವರಿಗೆ ಸೂಚಿಸಿದರು.
ನಂತರ, ಅನುಪಿನ ಕಟ್ಟೆಯಲ್ಲಿರುವ ಕಸ ಡಂಪಿಂಗ್ ಯಾರ್ಡಿಗೆ ಉಪ ಲೋಕಾಯುಕ್ತರು ಭೇಟಿ ಮಾಡಿ ಅಲ್ಲಿನ ಅಂಕಿ ಅಂಶಗಳನ್ನು ಸಂಗ್ರಹಿಸಿ ಚರ್ಚಿಸಿದರು. ನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ರವರ ಜೊತೆ ಡಂಪಿಂಗ್ ಯಾರ್ಡಿನ ಕಸ, ಆ ಕಸದಿಂದ ಗ್ಯಾಸ್ ಉತ್ಪಾದನೆ ಬಗ್ಗೆಯೂ ಚರ್ಚಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಡಂಪಿಂಗ್ ಯಾರ್ಡಿನ ಮಾಹಿತಿ ನೀಡಿದರು.