ಜಿಲ್ಲಾಧಿಕಾರಿಗಳಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗದಿಂದ ಆಟದ ಮೈದಾನ(ಈದ್ಗಾ ಮೈದಾನ) ಸಂಬಂಧ ನೀಡಿದ ಮನವಿಯಲ್ಲೇನಿದೆ?* *ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?* *ಜಿಲ್ಲಾಧಿಕಾರಿ ವಿವಾದಿತ ಮೈದಾನ ಸಂಬಂಧ ಕೋರ್ಟಿಗೆ ಹೋಗಿ ಬಗೆಹರಿಸಿಕೊಳ್ಳಿ ಅಂತ ಹೇಳಿದ್ದು ಯಾರಿಗೆ?* *ಶಾಸಕ ಚನ್ನಿಯವರಿಗೆ ದಾರಿ ತಪ್ಪಿಸಲಾಯಿತೆಂದು ಹೇಳಿದ ಕೆ.ಎಸ್.ಈಶ್ವರಪ್ಪ*

*ಜಿಲ್ಲಾಧಿಕಾರಿಗಳಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗದಿಂದ ಆಟದ ಮೈದಾನ(ಈದ್ಗಾ ಮೈದಾನ) ಸಂಬಂಧ ನೀಡಿದ ಮನವಿಯಲ್ಲೇನಿದೆ?*

*ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?*

*ಜಿಲ್ಲಾಧಿಕಾರಿ ವಿವಾದಿತ ಮೈದಾನ ಸಂಬಂಧ ಕೋರ್ಟಿಗೆ ಹೋಗಿ ಬಗೆಹರಿಸಿಕೊಳ್ಳಿ ಅಂತ ಹೇಳಿದ್ದು ಯಾರಿಗೆ?*

*ಶಾಸಕ ಚನ್ನಿಯವರಿಗೆ ದಾರಿ ತಪ್ಪಿಸಲಾಯಿತೆಂದು ಹೇಳಿದ ಕೆ.ಎಸ್.ಈಶ್ವರಪ್ಪ*

ಮೈದಾನಕ್ಕೆ ಸಂಬಂಧಿಸಿದಂತೆ ಅನುಸೂಚಿತ ಸ್ವತ್ತು ಸರ್ಕಾರಿ ಜಾಗವಾಗಿದ್ದು, ಹಲವಾರು ದಶಕಗಳಿಂದಲೂ ಸಹ ಸಾರ್ವಜನಿಕ ಉದ್ದೇಶಕ್ಕೆ ಉಪಯೋಗಿಸುತ್ತಾ ಬಂದಿದ್ದು, ಸದರಿ ಸ್ವತ್ತು ಘನ ಸರ್ಕಾರದ ಜಾಗವಾಗಿದ್ದು ಹಾಗು ಸರ್ಕಾರದ ಅಂಗಸಂಸ್ಥೆಯಾದ ಶಿವಮೊಗ್ಗ ಮಹಾನಗರ ಪಾಲಿಕೆಯ ಹಕ್ಕು, ಹಿತಾಸಕ್ತಿ ಒಡೆತನಕ್ಕೆ ಒಳಪಟ್ಟ ಜಾಗವಾಗಿರುತ್ತದೆ.

ಅನುಸೂಚಿತ ಸ್ವತ್ತು ಸಾರ್ವಜನಿಕ ಮತ್ತು ಸರ್ಕಾರಿ ಕಚೇರಿಗಳಾದ ಜಿಲ್ಲಾಧಿಕಾರಿಗಳ ಕಚೇರಿ, ಆರ್.ಟಿ.ಓ. ಕಚೇರಿ, ಜಯನಗರ ಪೋಲೀಸ್ ಠಾಣೆ ಹಾಗು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇನ್ನೂ ಹತ್ತು ಹಲವು ಖಾಸಗಿ ವಾಣಿಜ್ಯ ವ್ಯವಹಾರ ನಡೆಯುವ ಸ್ಥಳದ ಮಧ್ಯಭಾಗದಲ್ಲಿ ಇರುವ ಖಾಲಿ ಜಾಗವಾಗಿದ್ದು, ಸದರಿ ಜಾಗವನ್ನು ಹಲವಾರು ದಶಕಗಳಿಂದಲು ಸಾರ್ವಜನಿಕರು ತಮ್ಮ ತಮ್ಮ ದೈನಂದಿನ ಬ್ಯಾಂಕ್, ಸರ್ಕಾರಿ ಕಚೇರಿ ಹಾಗು ಇನ್ನಿತರೆ ಕಾರ್ಯಗಳಿಗೆ ತಮ್ಮ ಓಡಾಟ, ವಾಹನ ನಿಲುಗಡೆ ಮತ್ತು ಇನ್ನಿತರೆ ಉದ್ದೇಶಕ್ಕೆ ಉಪಯೋಗಿಸುತ್ತಾ ಬಂದಿದ್ದು ನಿರ್ವಿವಾದಿತ ವಿಚಾರವಾಗಿದೆ.

ಈಗಾಗಲೇ ಘನ ಸರ್ಕಾರವು, ಆದೇಶ ಸಂಖ್ಯೆ ನ.ಇ.ಇ.159ಬೆಂರೂಪ್ರಾ2012. ಬೆಂಗಳೂರು ದಿನಾಂಕ: 27/08/2012 ರನ್ವಯ ಶಿವಮೊಗ್ಗ ಮಹಾನಗರ ಯೋಜನೆ 2031ರ ದೊಡ್ಡ ಯೋಜನೆಯನ್ನು ರೂಪಿಸಿ ಶಿವಮೊಗ್ಗ ಮಹಾನಗರವು ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಬಗ್ಗೆ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಈ ಬಗ್ಗೆ ತೀರ್ಮಾನ ಕೈಗೊಂಡು ಶಿವಮೊಗ್ಗ ಮಹಾನಗರ ಯೋಜನೆ-2031 ರ ರಾಜ್ಯ ಸರ್ಕಾರದ ವತಿಯಿಂದ ಅಧಿಸೂಚನೆಯನ್ನು ಸಹ ಹೊರಡಿಸಿದ್ದು ಈ ಬಗ್ಗೆ ಮಹಾನಗರ ಯೋಜನೆಯ ಒಂದು ಮಾಸ್ಟರ್ ಪ್ಲಾನ್ ರಚಿತಗೊಂಡಿದ್ದು ಸದರಿ ಪ್ಲಾನ್ ಸಹ 2012ರಲ್ಲಿಯೇ ಅನುಮೋದನೆಗೊಂಡು ಗೆಜೆಟ್ ಅಧಿಸೂಚನೆಯಲ್ಲಿ ಘೋಷಿತವಾಗಿರುತ್ತದೆ. ಸದರಿ ಶಿವಮೊಗ್ಗ ಮಹಾನಗರ ಯೋಜನೆ-2031ರ ಮಹಾನಲ್ಲಿ ಮತ್ತು ಸಂಪೂರ್ಣ ಜೋನಲ್ ರೆಗ್ಯುಲೇಶನ್ ಇದನ್ನು ಅನುಮೋದಿಸಿದ್ದು, ಸದರಿ ಮಹಾನಕ್ಷೆಯನ್ವಯ ಪ್ರಶ್ನಿತ ಸ್ವತ್ತು ಸಾರ್ವಜನಿಕ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವಾಗಿದ್ದು “ದಟ್ಟ ಹಸಿರು” ಬಣ್ಣದಿಂದ ಗುರುತಿಸಲ್ಪಟ್ಟದೆ.

ಈ ಮಧ್ಯೆ ಸದರಿ ಸ್ವತ್ತಿನ ಪಶ್ಚಿಮ ಭಾಗದಲ್ಲಿ 6ಮೀ. (ಅಂದಾಜು 20 ಅಡಿ) ಅಗಲದ ರಸ್ತೆಯು ಇದ್ದು ಸದರಿ ರಸ್ತೆಯ ನಂತರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇನ್ನಿತರೆ ವಾಣಿಜ್ಯ ಸಂಕಿರ್ಣದ ಕಟ್ಟಡಗಳಿರುತ್ತವೆ. ಅದೇ ರೀತಿ ಅನುಸೂಚಿತ ಸ್ವತ್ತಿನ ಪೂರ್ವ ದಿಕ್ಕಿಗೆ ಶಿವಮೊಗ್ಗ-ಸವಳಂಗ ರಸ್ತೆ ಇದ್ದು, ದಕ್ಷಿಣ ಬಾಗಕ್ಕೆ ತಿಲಕ್ ನಗರ ಮುಖ್ಯ ರಸ್ತೆ ಇದ್ದು, ಇದರ ಉತ್ತರ ದಿಕ್ಕಿಗೆ ಖಾಸಗಿ ಸ್ವತ್ತು ಇದ್ದು ಈ ಸ್ವತ್ತಿನ ನಡಿವಿನ ಸುಮಾರು 32,670 ಚ.ಅಡಿ ವಿಸ್ತೀರ್ಣದ ಸ್ವತ್ತು ಇರುವ ಜಾಗ ಇದಾಗಿರುತ್ತದೆ.

ಹಲವು ಪಟ್ಟಭದ್ರ ಹಿತಾಸಕ್ತಿಯುಳ್ಳ ವೃತ್ತಿಗಳು ಅನುಸೂಚಿತ ಸ್ವತ್ತನ್ನು ಈದ್ಧಾ ವಕ್ಸ್ಗೆ ಸೇರಿದ ಸ್ವತ್ತೆಂದು ತಪ್ಪಾಗಿ ಅರ್ಥೈಸಿಕೊಂಡು ಕಾನೂನುವಾಹಿರವಾಗಿ ಸ್ವತ್ತಿನ ಪಶ್ಚಿಮ ದಿಕ್ಕಿನಲ್ಲಿರುವ 20 ಅಡಿ ವಿಸ್ತೀರ್ಣದ ರಸ್ತೆಯ ಮಧ್ಯಭಾಗದಲ್ಲಿ ಸುಮಾರು 1.3ಮೀ. ಮತ್ತು 6.ತಮೀ ನ ಒಂದು ಗೋಣಿ ಆಕಾರದ ಧಾರ್ಮಿಕ ಆಕೃತಿಯನ್ನು ಅನಧಿಕೃತವಾಗಿ ಕಟ್ಟಿ ತಮ್ಮ ಧಾರ್ಮಿಕವಾದ ಭಾವನೆಗನುಸಾರವಾಗಿ ಸದರಿ ಗೋಡೆಯಾಕೃತಿಗೆ ಅಭಿಮುಖವಾಗಿ ಕೇವಲ ವರ್ಷಕ್ಕೆರಡು ಬಾರಿ ರಂಜಾನ್ ಮತ್ತು ಬಕ್ರೀದ್ ಹಬ್ಬದ ದಿನದಂದು ಮಾತ್ರ ಸಾಮೂಹಿಕ ಪ್ರಾರ್ಥನೆಯನ್ನು ಮಾಡುತ್ತಿದ್ದು, ಇದಕ್ಕೆ ಹಿಂದೆ ಅವಕಾಶ ಕಲ್ಪಿಸಲಾಗಿರುತ್ತದೆ.

ಕೇವಲ ಈ ಅಂಶವನ್ನು ಪರಿಗಣಿಸಿಕೊಂಡು ಹಲವರು ವಕ್ಸ್ ಹೆಸರಿನಲ್ಲಿ ಸದರಿ ಅನುಸೂಚಿತ ಸ್ವತ್ತಿನ ಸಂಪೂರ್ಣ ಮಾಲಿಕತ್ವವನ್ನು ಮತ್ತು ಹಿತಾಸಕ್ತಿಯನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಅಭಿಪ್ರಾಯದೊಂದಿಗೆ ಈ ಜಾಗಕ್ಕೆ ಸಂಬಂಧಪಡದ ಎಮ್‌ಡಬ್ಲುಬಿ19(3)1965 ದಿ. 23/02/1965 ರಲ್ಲಿ ಆದ ಕರ್ನಾಟಕ ರಾಜ್ಯ ಅಧಿಸೂಚನೆಯ ಕ್ರಮ ಸಂಖ್ಯೆ 288 ರಲ್ಲಿ ಉಲ್ಲೇಖಿಸಿರುವ ಜಾಗವನ್ನೇ ಈ ಅನುಸೂಚಿತ ಜಾಗವೆಂದು ತಪ್ಪು ಮಾಹಿತಿ ನೀಡಿ, ಸದರಿ ಅನುಸೂಚಿತ ಬಾಗವು ಸರ್ಕಾರದಿಂದ ತಮಗೆ ನೀಡಲಾಗಿದೆ ಎಂಬ ವಿಚಾರವನ್ನು ತಪ್ಪು ಭಾವನೆಯೊಂದಿಗೆ ಅನುಸೂಚಿತ ಸ್ವತ್ತಿನ ಮೇಲೆ ಹಕ್ಕನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ.

ಮುಸಲ್ಮಾನರು ತಮ್ಮ ಹೆಸರಿಗೆ ಪ್ರಶ್ನಿತ ಸ್ವತ್ತಿನ ಖಾತೆಯನ್ನು ಕರ್ನಾಟಕ ರಾಜ್ಯ ಪತ್ರ ಸಂಖ್ಯೆ ಎಮ್ ಡಬ್ಲ್ಯು 19(3)1965 ದಿ.23/02/1965 ರಲ್ಲಿ ಪ್ರಕಟವಾಗಿರುವ ಅಧಿಸೂಚನೆಯ ಆಧಾರದ ಮೇಲೆ ಸ್ವತ್ತಿನ ಅಳತೆಯನ್ನು ಮತ್ತು ತಮ್ಮ ವಕ್ಸ್ ಹೆಸರಿಗೆ ಖಾತೆಯನ್ನು ನಮೂದು ಮಾಡುವಂತೆ ಕೋರಿರುತ್ತಾರೆ. ಆದರೆ ಅದರಿ ಅಧಿಸೂಚನೆಯಲ್ಲಿ 288ನೇ ಸಂಖ್ಯೆಯ ಅಂಶವನ್ನು ಪರಿಶೀಲಿಸಿದಾಗ ಅದರಲ್ಲಿ 1 ಎಕರೆ 20 ಗುಂಟೆ ಎಂದು ನಮೂದಾಗಿದ್ದು ಜೊತೆಯಲ್ಲಿ 100 . 100 ಎಂದು ಸಹಾ ನಮೂದಾಗಿರುತ್ತದೆ. ಆದರೆ ಸದರಿ 1 ಎಕರೆ 20 ಗುಂಟೆ ವಿಸ್ತೀರ್ಣ ಯಾವ ಸ್ಥಳದಲ್ಲಿ ಅಂದರೆ ಯಾವ ಸರ್ವೆ ನಂಬರ್ ಅಥವಾ ಯಾವ ಮೀಟರ್) ದಲ್ಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಈ ರೀತಿ ಯಾವುದೇ ಸ್ಥಳದ ಚಕ್ಕುಬಂಧಿಯ ವಿವರಗಳು ಇಲ್ಲದಾಗ್ಯೂ ಸಹಾ ಸದರಿ ಸ್ವತ್ತು ಅನ್ಸರ್ ಮೊಹಲ್ಲಾ ಎಂಬ ವಿಳಾಸ ಮಾತ್ರ ಇರುತ್ತದೆ. ಸದರಿ ಆಫರ್ ಮೊಹಲ್ಲ ಹಾಲಿ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಶಿವಪ್ಪ ನಾಯಕ ವೃತ್ತ / ಅಮೀರ್ ಅಹ್ಮದ್ ವೃತ್ತ ಎಂದು ಕರೆಯಲ್ಪಡುವ ಜಾಗದಿಂದ ಎಂ.ಕೆ.ಕೆ. ರಸ್ತೆಯ ಜಾಗದಲ್ಲಿರುವ ಪ್ರದೇಶವಾಗಿದ್ದು, ಸುಮ್ಮನೆ ಮರುದ್ದೇಶದಿಂದ ಯಾವುದೋ ಜಾಗದ ನೋಟಿಫಿಕೇಷನ್ ಪಡೆದುಕೊಂಡು ಅನುಸೂಚಿತ ಸ್ವತ್ತಿನ ಜಾಗವನ್ನು ಕಬಳಿಸುವ ಪ್ರಯತ್ನದಲ್ಲಿ ಮುಂದುವರೆದು ಯಾವುದೇ ದಾಖಲಾತಿಗಳ ಆಧಾರವಿಲ್ಲದೇ ದ್ದಾ ವಕ್ರ ಹೆಸರಿಗೆ ಪ್ರಶ್ನಿತ ಜಾಗದ ಖಾತೆಯ ವಿಸ್ತೀರ್ಣವನ್ನು ಹೆಚ್ಚುವರಿ ಮಾಡಿ ನಮೂದು ಮಾಡಿರುವುದು ಸರ್ಕಾರಕ್ಕೆ ಮಾಡಿರುವ ಅನ್ಯಾಯವಾಗಿರುತ್ತದೆ. ವಾರ್ಡ್ ಅಥವಾ ಡಿವಿಜನ್ ಎಂಬ ಬಗ್ಗೆ ಯಾವುದೇ ನಮೂದುಗಳಿರುವುದಿಲ್ಲ ಮತ್ತು 100 • 100 ಎಂಬ ಸಂಖ್ಯೆಯು ಯಾವ ರೀತಿಯ ವಿಸ್ತೀರ್ಣ (ಆಡಿ ಅಥವಾ

ಈ ರೀತಿ ಹೆಚ್ಚುವರಿ ಖಾತೆಯನ್ನು ಗೌಪ್ಯವಾಗಿ ಮಹಾನಗರ ಪಾಲಿಕೆಯಲ್ಲಿ ಮಾಡಿದ್ದರೆ ಬಗ್ಗೆ ಈ ಹಿಂದೆಯೇ ಆಯುಕ್ತರಿಗೆ ದಿ. 11/03/2010 ರಂದು ಆಕ್ಷೇಪಣಾ ಪತ್ರವನ್ನು ಲಿಖಿತ ರೂಪದಲ್ಲಿ ತಕರಾರನ್ನು ಸಲ್ಲಿಸಿ ಕೂಡಲೇ ಖಾತೆ ರದ್ದತಿಗೆ ಕೋರಿದ್ದರೂ ಸಹ ಈ ಬಗ್ಗೆ ಮಹಾನಗರ ಪಾಲಿಕೆ ಯಾವುದೇ ಕ್ರಮ ಜರುಗಿಸಿರುವುದಿಲ್ಲ.

ಈ ಮಧ್ಯೆ ಪ್ರಸ್ತುತಪಡಿಸುವ ವಿಷಯವೇನೆಂದರೆ ದಿ. 31/03/2025 ರಂದು ಮುಸಲ್ಮಾನ ಸಮುದಾಯದವರು ಅನುಸೂಚಿತ ಸ್ವತ್ತಿನಲ್ಲಿ ಅವರ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯನ್ನ ಅಲ್ಲಿ ನಡೆಸಿದ್ದು ಏಕಾಏಕಿಯಾಗಿ ರಾತ್ರೋರಾತ್ರಿ ಸದರಿ ಜಾಗಕ್ಕೆ ದಕ್ಷಿಣ ಭಾಗದಿಂದ ಒಳಹೋಗುವ ಜಾಗದಲ್ಲಿ ಸದರಿ ಜಾಗಕ್ಕೆ ಅಡ್ಡಲಾಗಿ ಮರದ ಬೊಂಬುಗಳು ಹಾಗು ರೈಲ್ವೇ ಇಲಾಖೆಗೆ ಸೇರಿದ ಕಬ್ಬಿಣದ ರೈಲ್ವೇ ಹಳಿಗಳನ್ನು ಕಾನೂನು ಬಾಹಿರವಾಗಿ ತಂದು ಅವುಗಳನ್ನು ನೆಟ್ಟು ಬೇಲಿಯನ್ನು ಅಡ್ಡಲಾಗಿ ನಿರ್ಮಿಸಿ ಅನುಸೂಚಿತ ಸ್ವತ್ತಿನ ಒಳಗೆ ಸಾರ್ವಜನಿಕರ ಪ್ರವೇಶಕ್ಕೆ ತಡೆಯೊಡ್ಡಿ ಅನಧಿಕೃತವಾಗಿ ಬೇಲಿಯನ್ನು ನಿರ್ಮಾಣ ಮಾಡಿರುತ್ತಾರೆ.

ದಿನಂಪ್ರತಿಯಂತೆ ಸಾರ್ವಜನಿಕರು ದಿ. 01/04/2025 ರಂದು ಸದರಿ ಜಾಗದಲ್ಲಿ ಈ ಅನಧಿಕೃತ ಬೇಲಿಯನ್ನು ಕಂಡು ತಮ್ಮ ವಾಹನ ನಿಲುಗಡೆ ಮತ್ತು ನಿತ್ಯದ ಕೆಲಸಕ್ಕೆ ಓಡಾಡಲು ತೊಂದರೆ ಉಂಟಾಗಿ ಪ್ರಶ್ನಿಸಿದಾಗ ಕೆಲವು ಮುಸಲ್ಮಾನರು ಒಂದು ತಂಡವನ್ನು ಕಟ್ಟಿಕೊಂಡು ಬಂದು ಸದರಿ ಜಾಗದಲ್ಲಿ ಯಾವುದೇ ವ್ಯಕ್ತಿಗೆ ಒಳಗೆ ಪ್ರವೇಶ ನೀಡುವುದಿಲ್ಲ ಸದರಿ ಜಾಗವು ನಮಗೆ ಸೇರಿದ್ದು ಮತ್ತು ನಾವು ಬೇರೆ ಯಾವುದೇ ವೃಕ್ತಿಗಳಿಗೆ ಒಳಗೆ ಬರಲು ಅವಕಾಶ ನೀಡುವುದಿಲ್ಲ ಎಂದು ಸ್ಥಳದಲ್ಲಿ ಹೇಳಿದ ಹಿನ್ನೆಲೆಯಲ್ಲಿ ವಾದಿಗಳು ಹಾಗೂ ಸಾರ್ವಜನಿಕರ ಗುಂಪು ಮತ್ತು ಸಂಘ ಸಂಸ್ಥೆಯವರು ಈ ಕೂಡಲೇ ಸ್ಥಳದಲ್ಲಿ ಈ ಕೃತ್ಯವನ್ನು ಖಂಡಿಸಿ ಪ್ರತಿಭಟಿಸಿದ್ದು,

ಬೇಲಿಯನ್ನು ಆ ದಿನ ಸಂಜೆಯೊಳಗೆ ತೆರವುಗೊಳಿಸುವುದಾಗಿ ಭರವಸೆಯನ್ನು ಕೊಟ್ಟಿದ್ದು ಅದರಂತೆ ದಿ. 01/04/2025 ರ ರಾತ್ರಿ ವೇಳೆಗೆ ಸದರಿ ಅಕ್ರಮ ಬೇಲಿಯನ್ನು ತೆರವುಗೊಳಿಸಿ ಜಿಲ್ಲಾಧಿಕಾರಿಗಳ ಆದೇಶದಂತೆ ಸದರಿ ಜಾಗಕ್ಕೆ ಯಾರನ್ನು ಒಳಗೆ ಬಿಡದಂತೆ ಬ್ಯಾರಿಕೇಡ್‌ ಗಳನ್ನು ಹಾಕಿರುತ್ತಾರೆ.

ಈ ಹಿನ್ನೆಲೆಯಲ್ಲಿ ಏಕಾ ಏಕಿ ಈ ರೀತಿಯ ಖಾತೆ ಇತ್ಯಾದಿಗಳನ್ನು ಬದಲಾವಣೆ ಮಾಡುವಾಗ ಯಾವುದೇ ರೀತಿಯ ದಾಖಲೆಗಳನ್ನು ಪರಿಶೀಲನೆ ಮಾಡದೆ ಪ್ರಶ್ನಿತ ಸ್ವತ್ತಿನ ಅಳತೆಯನ್ನು ಮಹಾನಗರ ಪಾಲಿಕೆಯು ಈದ್ದಾ ವಕ್ಸ್ ಇವರು ಸಲ್ಲಿಸಿರುವ ಅರ್ಜಿಯ ಮೇರೆಗೆ ಸ್ವತ್ತಿನ ವಿಸ್ತೀರ್ಣವನ್ನು 6.20ಮೀ. * 1.20 : (295+291)/2* (109+148)/2 2 ಎಂದು ದಾಖಲಿಸಲು ಕೋರಿರುವ ಬಗ್ಗೆ ಯಾವುದೇ ಸೂಕ್ತ ಕಾನೂನು ಬದ್ಧ ಔಪಚಾರಿಕತೆಗಳನ್ನು ಅನುಸರಿಸದೇ ಅನಧಿಕೃತವಾಗಿ ಯಾವುದೇ ಒಡೆತನದ ದಾಖಲಾತಿಗಳನ್ನು ಪರಿಶೀಲಿಸದೆ ಕೇವಲ ಮಹಾನಗರ ಪಾಲಿಕೆಯ ಕಾನೂನು ಸಲಹಾಗಾರರಾದ ಕೃಷ್ಣರಾವ್ ಅವರ ಅಭಿಪ್ರಾಯ, ರಾಜಸ್ವ ನಿರೀಕ್ಷಕರ ವರದಿ ಮತ್ತು ಎದುರುದಾರರುಗಳ ಅರ್ಜಿ ಹಾಗು ಯಾವುದೇ ಆಧಾರರಹಿತ ಸರ್ವೆ ವರದಿಯನ್ನು ಪರಿಗಣಿಸಿ ಸ್ವತ್ತಿನ ವಿಸ್ತೀರ್ಣವನ್ನು ಹೆಚ್ಚುವರೆಗೊಳಿಸಿ ಖಾತೆಯಲ್ಲಿ 32,670 ಚದರ ಅಡಿ ವಿಸ್ತೀರ್ಣದ ಅಳತೆಯನ್ನು ನಮೂದಿಸಿ ಎದುರುದಾರರ ಪರ ಈದ್ದಾ ವಕ್ಸ್ ಸ್ವತ್ತು ಎಂದು ಕಾನೂನು ಬಾಹಿರವಾಗಿ ಖಾತೆ ದಾಖಲು ಮಾಡಲಾಗಿರುತ್ತದೆ. ಈ ರೀತಿಯಾಗಿ ಸ್ವತ್ತು ಯಾವುದೇ ಮಾಲಿಕತ್ವವೇ ಇಲ್ಲದೆ ಸರ್ಕಾರಿ ಜಾಗವನ್ನು ಅವ್ಯವಹಾರದಿಂದ ಕಾನೂನು ಬಾಹಿರವಾಗಿ ಖಾತೆಯನ್ನು ಮಾಡಿಸಿಕೊಂಡು ಮಹಾನಗರ ಪಾಲಿಕೆಯ ಜಾಗವನ್ನು ಅನಧಿಕೃತವಾಗಿ ಒಂದು ಜನಾಂಗಕ್ಕೆ ಸೀಮಿತವಾಗಿ ಧಾರ್ಮಿಕತೆಯ ಆಧಾರದ ಮೇರೆಗೆ ಖಾತೆ ಮಾಡಲಾಗಿರುತ್ತದೆ.

ಈ ಸಂಬಂಧ ಸಾರ್ವಜನಿಕ ಪ್ರತಿಭಟನೆಗಳು ನಡೆದರೂ ಸಹ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ಸಾರ್ವಜನಿಕರು ಸದರಿ ಜಾಗವನ್ನು ಉಪಯೋಗಿಸಿಕೊಳ್ಳುವ ಬಗ್ಗೆ ಅನುವಾಗುವಂತಹ ತೀರ್ಮಾನ ತೆಗೆದುಕೊಳ್ಳದೇ ಇರುವುದು ಹಾಗು ಕರ್ತವ್ಯ ಲೋಪವೆಸಗಿದ ಮಹಾನಗರ ಪಾಲಿಕೆಯ ಕಂದಾಯ ಇಲಾಖಾ ಸಿಬ್ಬಂದಿಗಳ ಮೇಲೆ ಸೂಕ್ತ ತನಿಕೆ ನಡೆಸಿ ಕ್ರಮ ವಹಿಸಿದಿರುವುದು ಅಕ್ಷಮ್ಯ ಹಾಗು ಕರ್ತವ್ಯ ಚ್ಯುತಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಕೂಡಲೆ ಈ ಬಗ್ಗೆ ತಾವುಗಳೆಲ್ಲರು ಸಹಾ ಈ ನಿಟ್ಟಿನಲ್ಲಿ ಕ್ರಮವಹಿಸಿ ಮಹಾನಗರ ಪಾಲಿಕೆಯ ವತಿಯಿಂದ ನಿಗದಿತ ಪಾರ್ಕ್ ಜಾಗವನ್ನು ಖಾತೆಯಲ್ಲಿ ಸರಿಪಡಿಸುವುದರೊಂದಿಗೆ ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡದಿದ್ದರೆ ಈ ವಿಷಯವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗು ಲೋಕಾಯುಕ್ತರಿಗೆ ದೂರನ್ನು ನೀಡುವುದು ಅನಿವಾರ್ಯವಾಗಿದ್ದು ಈ ಸಂಬಂಧ ಇನ್ನು 3 ದಿನಗಳೊಳಗಾಗಿ ಕ್ರಮ ಜರುಗಿಸುವಂತೆ ಆಗ್ರಹ ಪೂರ್ವಕ ಮನವಿಯನ್ನು ಈ ಮೂಲಕ ಸಲ್ಲಿಸುತ್ತಿದ್ದೇವೆ.