ಮೇ 27 ರ ನಾಳೆ ಶ್ರೀ ಶನೈಶ್ಚರ ದೇವಳದಲ್ಲಿ “ಶ್ರೀ ಶನೈಶ್ಚರ ಜಯಂತ್ಯುತ್ಸವ”
ಮೇ 27 ರ ನಾಳೆ ಶ್ರೀ ಶನೈಶ್ಚರ ದೇವಳದಲ್ಲಿ “ಶ್ರೀ ಶನೈಶ್ಚರ ಜಯಂತ್ಯುತ್ಸವ”
ಶಿವಮೊಗ್ಗ : ನಗರದ ಸವಳಂಗ ರಸ್ತೆ, ನವುಲೆಯ ಸಂಕಟ ವಿಮೋಚನ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ ಮೇ. 27 ರ ಮಂಗಳವಾರ “ಶ್ರೀ ಶನೈಶ್ಚರ ಜಯಂತ್ಯುತ್ಸವ” ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪಕ ಹೆಚ್. ಚೈತನ್ಯ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 8-00 ಗಂಟೆಯಿಂದ ಶ್ರೀ ಸ್ವಾಮಿಗೆ ಪಂಚಾಮೃತಾಭಿಷೇಕ, ಕ್ಷೀರ ರುದ್ರಾಭಿಷೇಕ, ಆಭರಣಾಲಂಕಾರ, ನೈವೇದ್ಯ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅವರು ತಿಳಿಸಿದರು.
ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9164633996 ಗೆ ಸಂಪರ್ಕಿಸಬಹುದು..