ಕವಿಸಾಲು
Gm ಶುಭೋದಯ💐💐
*ಕವಿಸಾಲು*
1.
ನಿರೀಕ್ಷೆ
ಬಿಟ್ಟುಬಿಟ್ಟೆ…
ತೊಂದರೆ
ತಾನು ತಾನಾಗಿಯೇ
ಕಣ್ಮರೆ ಚಿಟ್ಟೆ!
2.
ಹೊಗಳಿಕೆ
ಇಷ್ಟ ಪಡಬೇಡವೋ…
ರೆಕ್ಕೆ ಹಚ್ಚಿ
ಆಕಾಶಕ್ಕೆ ಕಳಿಸಿಬಿಡುವರು…
ನೀ ಯೋಗ್ಯನಲ್ಲ
ಈ ಭೂಮಿಗೆ ಎಂದು!
3.
ಎಲ್ಲರ
ನೋವಿಗೂ ಹೆಗಲು
ಕೊಟ್ಟವರು
ತಮ್ಮದೇ ನೋವಿಗೆ ತಮ್ಮದೇ
ಸವೆದ ಹೆಗಲ
ತಡಕಾಡುವರು…
4.
ನೀನಿದ್ದೀಯ
ನಾನೂ ಇದ್ದೇನೆ…
ಅಷ್ಟೇ!