ಧರ್ಮಸ್ಥಳ ಪ್ರಕರಣದ ಬಗ್ಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ರಾಷ್ಟ್ರ ವಿರೋಧಿ ಸಂಘಟನೆಗಳ ಪಾತ್ರ ಬುರುಡೆ ಗ್ಯಾಂಗ್ ಷಡ್ಯಂತ್ರಕೋರರನ್ನು ಕೂಡಲೇ ಬಂಧಿಸಿ ಎನ್ ಐ ಎ ತನಿಖೆಗೊಳಪಡಿಸಿ ಮಂಪರು ಪರೀಕ್ಷೆಗೊಳಪಡಿಸಿ

ಧರ್ಮಸ್ಥಳ ಪ್ರಕರಣದ ಬಗ್ಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ

ರಾಷ್ಟ್ರ ವಿರೋಧಿ ಸಂಘಟನೆಗಳ ಪಾತ್ರ
ಬುರುಡೆ ಗ್ಯಾಂಗ್ ಷಡ್ಯಂತ್ರಕೋರರನ್ನು ಕೂಡಲೇ ಬಂಧಿಸಿ ಎನ್ ಐ ಎ ತನಿಖೆಗೊಳಪಡಿಸಿ

ಮಂಪರು ಪರೀಕ್ಷೆಗೊಳಪಡಿಸಿ

ಧರ್ಮಸ್ಥಳದ ವಿರುದ್ಧ ಸಾಕಷ್ಟು ಅನುಮಾನಗಳು ಪರಿಹಾರವಾಗಿವೆ. ಸುಜಾತ ಭಟ್, ಚಿನ್ನಯ್ಯ ಹೇಳಿಕೊಟ್ಟಿದ್ದನ್ನು ಹೇಳಿದ್ದೇವೆ ಅಂತ ಹೇಳಿದ ಮೇಲೆ ಇಡೀ ಷಡ್ಯಂತ್ರದ ಹಿಂದೆ ಸೂತ್ರಧಾರಿಗಳಿದ್ದಾರೆ ಅಂತ ಗೊತ್ತಾಗುತ್ತೆ.

ಎಸ್ ಐ ಟಿ ಜೊತೆಗೆ ಹಗಲೊತ್ತು ಗುಂಡಿ ತೆಗೆಸೋದು, ರಾತ್ರಿ ಷಡ್ಯಂತ್ರದ ಯೋಜನೆ ತಿಮ್ಮರೋಳಿ, ಮಟ್ಟೆಣ್ಣನವರ್, ಜಯಂತ್, ಸಮೀರ್ ಜೊತೆಗೆ. ಸಮೀರ್ ನನ್ನು ಅಧಿಕೃತವಾಗಿ ಅರೆಸ್ಟ್ ಮಾಡಬೇಕು. ಬುರುಡೆ ಗ್ಯಾಂಗ್ ತಂದ ಬುರುಡೆ ಇಲ್ಲಿನದಲ್ಲ ಅಂತ ಗೊತ್ತಾಗಿದೆ. ಎಲ್ಲ ಷಡ್ಯಂತ್ರ ಹೊರಕ್ಕೆ ಬರಬೇಕು.

ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ಸಮೀರ್ ನಂಥೋರು ಪ್ರಯತ್ನಿಸಿದ್ದಾರೆ. ಮುಸ್ಲಿಂ ಪವಿತ್ರ ಸ್ಥಳಗಳ ಬಗ್ಗೆ ಹೀಗಾಗಿದ್ದರೆ ದಂಗೆ ಏಳುತ್ತಿದ್ದವು. ಧರ್ಮಸ್ಥಳದ ವಿರುದ್ಧ ಎಸ್ ಐ ಟಿ ನಿರ್ಮಾಣಕ್ಕೆ ಯಾವ ದೇಶದ್ರೋಹಿಗಳು ಕಾರಣ? ಧರ್ಮಸ್ಥಳವನ್ನು ಅಪವಿತ್ರಗೊಳಿಸಲಾಗಿದೆ.

ಧರ್ಮ ವಿರೋಧಿ, ವಿದೇಶಿ ಸಂಘಟನೆ ಇದ್ದರೆ ಈಗ ಹೊರಕ್ಕೆ ಬರಬೇಕಿದೆ. ಹಣ ಹೇಗೆ ಕೊಡಲಾಯ್ತು? ಯಾರು ಕೊಟ್ಟರೆಂಬ ಅಂಶ ಬಯಲಿಗೆ ಬರಬೇಕಿದೆ. ಎಸ್ ಐ ಟಿ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಇಡೀ ಪ್ರಕರಣ ಎನ್ ಐ ಎ ಗೆ ವಹಿಸಿ. ಷಡ್ಯಂತ್ರಕೋರರಿಗೆ ಕಠಿಣ ಶಿಕ್ಷೆಗೆ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು.

ಸಚಿವ ಸತೀಶ್ ಜಾರಕಿಹೊಳಿ ಕೂಡ ಎನ್ ಐ ಎ ತನಿಖೆ ಬಗ್ಗೆ ಮಾತಾಡಿದ್ದಾರೆ. ಆಗಷ್ಟೇ ನ್ಯಾಯ ಸಿಗಲು ಸಾಧ್ಯ

ಸರ್ಕಾರ ಈ ಪ್ರಕರಣದ ಮಧ್ಯಂತರ ವರದಿ ನೀಡಬೇಕು. ದೊಡ್ಡ ಷಡ್ಯಂತ್ರದ ಗ್ಯಾಂಗನ್ನು ಕೂಡಲೇ ಬಂಧಿಸಿ ಎನ್ ಐ ಎ ತನಿಖೆಗೊಳಪಡಿಸಬೇಕು. ಮಂಪರು ಪರೀಕ್ಷೆ ಮಾಡಿಸಬೇಕು.