ನಾಡಹಬ್ಬ ದಸರಾ ಉದ್ಘಾಟನೆಗೆ ಮುನ್ನ ಸಾಹಿತಿ ಬಾನು ಮುಷ್ತಾಖ್ ಚಾಮುಂಡಿ ಪೂಜೆ ಮಾಡಲಿ* *ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿಕೆ*
*ನಾಡಹಬ್ಬ ದಸರಾ ಉದ್ಘಾಟನೆಗೆ ಮುನ್ನ ಸಾಹಿತಿ ಬಾನು ಮುಷ್ತಾಖ್ ಚಾಮುಂಡಿ ಪೂಜೆ ಮಾಡಲಿ*
*ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿಕೆ*
ನಾಡಹಬ್ಬ ದಸರೆ ಉದ್ಘಾಟನೆಗೆ ಭಾನು ಮುಷ್ತಾಕ್ ಅವರು ಒಪ್ಪಿಕೊಂಡಿದ್ದಾರೆ
ಆದರೆ ಈ ಬಗ್ಗೆ ಹಲವಾರು ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ
ಭಾನುಮುಷ್ತಾಕ್ ಅವರು ಮೊದಲು ಸ್ಪಷ್ಟಪಡಿಸಲಿ
ಭಾನು ಮುಷ್ತಾಕ್ ಅವರು ಮೊದಲು ಚಾಮುಂಡಿ ಪೂಜೆ ನೆರವೇರಿಸಿ ಬಳಿಕ ದಸರಾ ಉದ್ಘಾಟಿಸಲಿ
ಇದನ್ನು ಮಾಡುತ್ತಾರಾ ಅಂತಾ ಅವರು ಮೊದಲು ಸ್ಪಷ್ಟಪಡಿಸಲಿ
ಬಳಿಕ ಅವರು ದಸರೆ ಉದ್ಘಾಟಿಸಲಿ. ನನ್ನದೇನು ತಕರಾರಿಲ್ಲ
ಈ ಹಿಂದೆ ಬಹಳಷ್ಟು ಜನರು ದಸರಾವನ್ನು ಉದ್ಘಾಟಿಸಿದ್ದಾರೆ
ಯಾರು ಉದ್ಘಾಟಿಸುತ್ತಾರೆಂಬುದು ಮುಖ್ಯವಲ್ಲ
ಆದರೆ ಭಾನು ಮುಷ್ತಾಕ್ ಅವರು ಹೇಳಿಕೆ ನೀಡಿ ಸ್ಪಷ್ಟನೆ ನೀಡಲಿ, ಬಳಿಕ ಉದ್ಘಾಟಿಸಲಿ.
*ಕಾಂಗ್ರೆಸ್ ಸರ್ಕಾರದಲ್ಲಿ ಗುತ್ತಿಗೆ ಭ್ರಷ್ಟಾಚಾರ ಹೆಚ್ಚೆಂದ ಗುತ್ತಿದಾರರ ಸಂಘದ ರಾಜ್ಯಾಧ್ಯಕ್ಷ; ಯಾರೂ ಯಾಕೆ ಸ್ಪಷ್ಟನೆ ನೀಡ್ತಿಲ್ಲ*
ಈಗಿನ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಹೇಳಿದ್ದಾರೆ
ಗುತ್ತಿಗೆದಾರರ ಸಂಘದ ರಾಜ್ಯಾಧ್ಯರು ಸ್ಪಷ್ಟವಾಗಿ ಹೇಳಿದ್ದಾರೆ
ಹಳೆ ಸರ್ಕಾರಕ್ಕಿಂತ ಹೆಚ್ಚಿನ ಕಮಿಷನ್ ನೀಡಬೇಕು ಎಂದಿದ್ದಾರೆ
ನಾಚಿಕೆಗೆಟ್ಟ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ರಿಯಾಕ್ಟ್ ಮಾಡಿಲ್ಲ
ಸಿಎಂ ಅವರಿಗೆ ಕೇಳುತ್ತೇನೆ ತಕ್ಷಣ ಇದಕ್ಕೆ ರಿಯಾಕ್ಟ್ ಮಾಡಬೇಕು
ಇಲ್ಲ ಗುತ್ತಿಗೆದಾರ ಸಂಘದವರನ್ನ ಅರೆಸ್ಟ್ ಮಾಡಬೇಕು
ಇಲ್ಲ ಭ್ರಷ್ಟಾಚಾರ ನಡೆದಿದೆ ಅಂತ ಒಪ್ಪಿಕೊಳ್ಳಬೇಕು
ರಾಜ್ಯದಲ್ಲಿ ಗುತ್ತಿಗೆದಾರರು ಮಾಡಿರುವ ಸತ್ಯ ಘಟನೆಯನ್ನ ಗಂಭೀರವಾಗಿ ಪರಿಗಣಿಸಬೇಕು
ತಕ್ಷಣ ಗುತ್ತಿಗೆದಾರರ ಹಣವನ್ನು ಬಿಡುಗಡೆಗೊಳಿಸಬೇಕು